ಕಬ್ಬು ಬೆಳೆಗೂ ಬೆಳೆವಿಮೆ ತುಂಬವ ಅವಕಾಶ ಕಲ್ಪಿಸಿ ಎಂದು ಶಾಸಕರಲ್ಲಿ ಮನವಿ.
ವೀರಮಾರ್ಗ ನ್ಯೂಸ್ : ಹಾವೇರಿ : ಹಾನಗಲ್ ಜಿಲ್ಲೆಯಲ್ಲಿ 25 ಲಕ್ಷಕ್ಕಿಂತ ಹೆಚ್ಚು ಟನ್ ಕಬ್ಬು ಬೆಳೆಯುತ್ತಿದ್ದಾರೆ ಜಿಲ್ಲೆಯಲ್ಲಿ ಮೂರು ಸಕ್ಕರೆ ಕಾರ್ಖಾನೆಗಳಿವೆ . ಅದರಲ್ಲಿ ಹಾನಗಲ್ ತಾಲೂಕಿನಲ್ಲಿ ಅತಿ ಹೆಚ್ಚು 10 ಲಕ್ಷಕ್ಕಿಂತ ಹೆಚ್ಚು ಟನ್ ಬೆಳೆಯುವ ರೈತರಿದ್ದಾರೆ ಈ ವರ್ಷ ಬೇಸಿಗೆಯಲ್ಲಿ ಬೋರ್ವೆಲ್ ನಲ್ಲಿ ನೀರು ಕಡಿಮೆ ಆಯಿತು ನಂತರ ಮುಂಗಾರು ಮಳೆ ಸಹಿತ ಕೈಕೊಟ್ಟ ಪರಿಣಾಮವಾಗಿ ಕಬ್ಬಿನ ಇಳುವರಿಯಲ್ಲಿ ಬಹಳಷ್ಟು ಕುಂಠಿತವಾಗುವ ಸಾಧ್ಯತೆ ಇದೆ ಆದ ಕಾರಣ ರೈತರ ಹಿತ ಕಾಪಾಡುವ ಸಲುವಾಗಿ ಜಿಲ್ಲೆಯ ಎಲ್ಲ ಶಾಸಕರು ಕೂಡಿಕೊಂಡು ಸರ್ಕಾರದ ಗಮನಸೆಳೆದು ಕಬ್ಬಿನ ಬೆಳೆಗೂ ಬೆಳೆ ವಿಮೆ ಕಲ್ಪಿಸಿ ಕೊಡಬೇಕೆಂದು ಹಾನಗಲ್ ತಾಲೂಕಿನ ಶಾಸಕರಾದ ಶ್ರೀನಿವಾಸ್ ಮಾನೆ ಯವರಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ವಿನಂತಿ ಮಾಡಿದರು.
ನಂತರ ಹಾನಗಲ್ ತಾಲೂಕಿನ ಕೆರೆ ತುಂಬಿಸುವ ಯೋಜನೆ ಸಾಲಮನ್ನಾ ಹಾಗೂ ಬೆಳೆ ವಿಮೆ ತುಂಬುವ ನೂನ್ಯತೆ ಸರಿಪಡಿಸಲು ಮತ್ತು ಬರಗಾಲ ಘೋಷಣೆ ಮಾಡುವ ಕುರಿತು ಹಾನಗಲ್ ತಹಸಿಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮಾನ್ಯ ಶಾಸಕರು ಅಧಿಕಾರಿಗಳ ಹಾಗೂ ರೈತ ಮುಖಂಡರ ಸಭೆಯನ್ನು ಆಯೋಜಿಸಲಾಗಿತ್ತು ಸಭೆಯ ಅಧ್ಯಕ್ಷತೆಯನ್ನು ಶಾಸಕ ಶ್ರೀನಿವಾಸ ಮಾನೆಯವರು ವಹಿಸಿಕೊಂಡಿದ್ದರು ಹಾನಗಲ್ ತಾಲೂಕಿನ ತಹಶೀಲ್ದಾರ ಶ್ರೀ ವಿಠಲ್ ಚೋಗಲಾ ತಾಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ನೀರಾವರಿ,ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆಯನ್ನು ಆಯೋಜಿಸಲಾಗಿತ್ತು ಸಭೆಯಲ್ಲಿ ಚರ್ಚೆ ನಡೆಸಿ ಮಳೆ ಇಲ್ಲದೆ ಬರಗಾಲ ಇರೋ ಕಾರಣ ವರದಾನದಿಂದ ತಾಲೂಕಿನ ಎಲ್ಲ ಕೆರೆಗೆ ನೀರು ತುಂಬಿಸುವ ಯೋಜನೆಗಳು ಸಮರ್ಪಕವಾಗಬೇಕೆಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು ರೈತರು ಬರಗಾಲ ಬೆಳೆ ವಿಮೆತುಂಬವದು, ಹಿಂದಿನ ವರ್ಷ ಬೆಳೆವಿಮೆ ತುಂಬಿದ ಅವಧಿ ಮುಗಿದು ಎಂಟು ತಿಂಗಳಾದರೂ ಬೆಳೆವಿಮೆ ಬಿಡುಗಡೆಯಾಗಿರುವುದಿಲ್ಲ ಆದ ಕಾರಣ ತಕ್ಷಣವೇ ಬೆಳೆವಿಮೆ ಬಿಡುಗಡೆ ಮಾಡಬೇಕೆಂದು ರೈತರು ತಿಳಿಸಿದರು ಈ ಸಂದರ್ಭದಲ್ಲಿ ರೈತ ಮುಖಂಡರಾದ ಭುವನೇಶ್ವರ ಶಿಡ್ಲಾಪುರ ಎಂ ಎಸ್ ಪಾಟೀಲ್ ಮರಿಗೌಡ್ರ ಪಾಟೀಲ್ ಮಹಾಲಿಂಗಪ್ಪ ಬಿದರಹಳ್ಳಿ ಚೆನ್ನಬಸಪ್ಪ ಹಾವಣಗಿ ರುದ್ರಪ್ಪ ಹಣ್ಣಿ ಮಾರುದ್ರಪ್ಪ ಕುಸುನೂರ ಬಸವಂತಪ್ಪ ಮೇಳಹಳ್ಳಿ ಇನ್ನೂ ಅನೇಕ ರೈತ ಮುಖಂಡರು ಹಾಜರಿದ್ದರು.
ಹಾವೇರಿಯಲ್ಲಿ ಸಾಲದ ಕುಣಿಕೆಗೆ ಮತ್ತೊಬ್ಬ ಅನ್ನದಾತ ಬಲಿ.ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಇಬ್ಬರು ರೈತರು ಆತ್ಮಹತ್ಯೆ..ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗಳ ಸರಣಿ ನಿಲ್ಲುವ ಲಕ್ಷಣವೇ ಇಲ್ಲ. ರೈತ ಗಣೇಶಪ್ಪ ಚಕ್ರಸಾಲಿ (51) ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ರೈತ ಗಣೇಶಪ್ಪ ಚಕ್ರಸಾಲಿ. ಕೇವಲ 1 ಎಕರೆ 20 ಗುಂಟೆ ಕೃಷಿ ಜಮೀನು ಹೊಂದಿದ್ದ ರೈತ.. ಕೆನರಾ ಬ್ಯಾಂಕ್‌ನಲ್ಲಿ ₹1.50 ಲಕ್ಷ ಬೆಳೆ ಸಾಲ ಪಡೆದಿದ್ದ ರೈತ.. ಅದಲ್ಲದೇ ಖಾಸಗಿಯಾಗಿ ಕೈಗಡ ₹2 ಲಕ್ಷ ಸಾಲ ಪಡೆದಿದ್ದ ಗಣೇಶಪ್ಪ. ಮಳೆ ಕೈಕೊಟ್ಟಿತು.ಬೆಳೆ ನೆಲಕಚ್ಚಿತು.ಸಾಲ ಮಾತ್ರ ಕುತ್ತಿಗೆ ಬಿಗಿಯಿತು. ಸಾಲದ ಚಿಂತನೆಯಿಂದಲೇ ವಿಷ ಸೇವಿಸಿ ಆತ್ಮಹತ್ಯೆ ಶರಣು.. ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲು.. ಜುಲೈ 22ರಂದು ತಿಮ್ಮೇನಹಳ್ಳಿ ಗ್ರಾಮದಲ್ಲೂ ರೈತ ಆತ್ಮಹತ್ಯೆ.. ಸೋಮನಗೌಡ (44) ಎಂಬ ರೈತ ನೇಣುಬಿಗಿದುಕೊಂಡು ಆತ್ಮಹತ್ಯೆ. ಬೆಳೆ ಸಾಲದ ಬ್ಯಾಂಕ್ ನೋಟಿಸ್ ಗೆ ಹೆದರಿ ಆತ್ಮಹತ್ಯೆ ಒಳಗಾಗಿದ್ದ. ಆ ನೋವು ಮಾಸುವ ಮುನ್ನವೇ ಮತ್ತೊಂದು ರೈತ ಕುಟುಂಬದಲ್ಲಿ ಕತ್ತಲು. ಜಿಲ್ಲೆಯಲ್ಲಿ ಬರಗಾಲದ ಹೊಡೆತಕ್ಕೆ ರೈತರ ಬದುಕು ಚೂರಾಗುತ್ತಿದೆ.
ಬೆಂಗಳೂರಿನ ಕುರುಬರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಶಮಂತಾಕುಮಾರಿ ಎಸ್‌ಐಆರ್ (SIR) ಕರ್ತವ್ಯದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೇಲಾಧಿಕಾರಿಗಳು ಶೀಘ್ರ ಕೆಲಸ ಮುಗಿಸುವಂತೆ ನೀಡುತ್ತಿದ್ದ ತೀವ್ರ ಒತ್ತಡವೇ ಈ ದುರಂತಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಿಬ್ಬಂದಿಗಳ ಮೇಲಿನ ಕೆಲಸದ ಒತ್ತಡದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವರದಿ: ಚನ್ನೇಶ್ ಕೆ ಎಂ
ಬೆಂಗಳೂರು