ಬ್ಯಾಂಕ್ ಆಫ್ ಬರೋಡ ಶಾಖೆಯ 119 ನೇ ಸಂಸ್ಥಾಪನಾ ದಿನಾಚಾರಣೆ.
ವೀರಮಾರ್ಗ ನ್ಯೂಸ್ ಹಾವೇರಿ : ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಬ್ಯಾಂಕಿನ 119 ನೇ ಸಂಸ್ಥಾಪನಾ ದಿನಾಚಾರಣೆಯನ್ನು ಆಚರಿಸಲಾಯಿತು. ಬ್ಯಾಂಕಿನಲ್ಲಿ ತಮ್ಮ ಗ್ರಾಹಕರೊಂದಿಗೆ ಕೇಕ್ ಕಟ್ ಮಾಡಿ, ಸಿಹಿ ಹಂಚುವ ಮೂಲಕ ಸಂಭ್ರಮಾಚಾರಣೆ ಜರುಗಿತು. ಸಂಸ್ಥಾಪನಾ ದಿನದ ನಿಮಿತ್ಯವಾಗಿ ಗ್ರಾಹಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕ್ ಮ್ಯಾನೇಜರ್ ಬಿ ಸುರೇಶ, ಎಬಿಎಂ ಗಳಾದ ಸೂರ್ಯ ಪ್ರಕಾಶ, ಶ್ರೀಕಾಂತಗೌಡ್ರ ಪಾಟೀಲ, ಸೋಮಯ್ಯ ಹಿರೇಮಠ,ಶ್ರೀಧರ ದೊಡ್ಡಮನಿ,ಶಿವಯೋಗಯ್ಯ ಹಿರೇಮಠ, ಪರಮಯ್ಯ ಹಿರೇಮಠ, ಫಕ್ಕಿರಗೌಡ್ರ ಕುಂದೂರ, ಮಂಜು ಮಾಲಿ, ರಾಜಶೇಖರ ಮಾದರ, ಮರಿಯಪ್ಪ ನಡುವಿನಮನಿ, ಈರಣ್ಣ ಚಪ್ಪರದಹಳ್ಳಿಮಠ, ಶಿವಬಸವಸ್ವಾಮಿ ಕೆಂಭಾವಿಮಠ, ಶರಣಪ್ಪ ಕೆಂಭಾವಿಮಠ, ಬ್ಯಾಂಕಿನ ಸಿಬ್ಬಂದಿಗಳಾದ ಕೆ ಎನ್ ಸದಾಶಿವ, ಪ್ರಕಾಶ ದೇವರ ಗುಡ್ಡ ಸೇರಿದಂತೆ ಮತ್ತಿತರರು ಇದ್ದರು.
ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಯಿರಿ – ಶಾಸಕ ಬಸವರಾಜ ಶಿವಣ್ಣನವರ
ಹಾವೇರಿ : ಈ ಸಂಸ್ಥೆಯನ್ನು ಹಿರಿಯರು ಸ್ಥಾಪಿಸಿ ಇಲ್ಲಿಯ ಸುತ್ತ ಮುತ್ತಲಿನ ಗ್ರಾಮಗಳ ಬಡವಿದ್ಯಾರ್ಥಿಗಳಿಗೆ, ಶಿಕ್ಷಣ ವಂಚಿತರಿಗೆ ದಾರಿದೀಪವಾದರು. ಎಂದು ಬ್ಯಾಡಗಿಯ ಜನಪ್ರೀಯ
ಶಾಸಕರಾದ ಬಸವರಾಜ ಶಿವಣ್ಣನವರು ಹೇಳಿದರು
ಹಾವೇರಿ ತಾಲೂಕಿನ ಕುರುಬಗೊಂಡ ಗ್ರಾಮದ ಮೃತ್ಯುಂಜಯ ಪ್ರೌಢಶಾಲೆಯ ಸಂಸ್ಥಾಪಕರಾದ ಬಹುಮುಖ ವ್ಯಕ್ತಿತ್ವದ ಶ್ರೀ ಶಿವಬಸಪ್ಪ ಸೋಮಪ್ಪ ಬಶೆಟ್ಟಿಯವರ 36 ನೇ ಪುಣ್ಯ ಸ್ಮರಣೆ ಡಾ|| ಸೋಮಣ್ಣ ಚ ಬಶೆಟ್ಟಿಯವರ ಮಾಜಿ ಅಧ್ಯಕ್ಷರು ಹಾಗೂ ಸಂಸ್ಥೆಗೆ ಸೇವೆ ಸಲ್ಲಿಸಿ ಹಿರಿಯರ ಪುಣ್ಯಸ್ಮರಣೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ವಿದ್ಯೆ ಜೊತೆಗೆ ಸಂಸ್ಕಾರವನ್ನು ಕಲಿಯುವುದು ಮುಖ್ಯವಾಗಿದೆ ಎಂದರು. ಮತ್ತು ಈ ಸಂಸ್ಥೆಯ ಆವರಣದಗೋಡೆ ನಿರ್ಮಿಸಲು 5 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವೇ ಮೂ ಶ್ರೀ ವೀರಭದ್ರಯ್ಯಾ ಶಾಸ್ತ್ರೀಗಳು ಹಿರೇಮಠ ಡಾ|| ಎಸ್ ಎನ್ ಮರೆಕ್ಕನವರ, ಆರ್ ಎಸ್ ಹಾವೇರಿ,ತಮ್ಮಣ್ಣ ಲಿಂಗಮ್ಮನವರ,ನಿವೃತ್ತರಾದ ದ್ವಿ ದ ಸ ಬಿ ಎಂ ತಾಂದಳೆ, ಇವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರದಲ್ಲಿ 2025-26 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಾದ ಚೇತನ ಹರವೀಮಠ, ಕಾವ್ಯಾ ಅಂಗಡಿ, ಭುವನೇಶ್ವರಿ ಗಣಂಗಳ, ನವ್ಯಾ ಕೋಡಿಹಳ್ಳಿ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಾನಿಧ್ಯವನ್ನು ವಹಿಸಿ ಆಶಿರ್ವಚನ ನೀಡಿದ ಧಾರವಾಡದ ಮುರುಘಾಮಠದ ಶ್ರೀ ಮ.ನಿ.ಪ್ರ.ಡಾ|| ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ ಕುರುಬಗೊಂಡ ಗ್ರಾಮ ಹೆಚ್ಚು ಪ್ರಚಲಿತವಾಗಲು ಶಿವಬಸಪ್ಪ ಶೆಟ್ರ ಕೊಡುಗೆ ಅಪಾರವಾದದ್ದು ಅವರು ಧಾರ್ಮಿಕವಾಗಿ, ರಾಜಕೀಯವಾಗಿ ಶಿಕ್ಷಣದ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಬಹಳ ಹೋರಾಟದಿಂದ ಈ ಸಂಸ್ಥೆಯನ್ನು ಕಟ್ಟಿದ್ದಾರೆ ಇದನ್ನು ಇನ್ನು ಎತ್ತರಕ್ಕೆ ಬೆಳೆಸುವ ಕಾರ್ಯ ಸಂಸ್ಥೆಯವರಿಂದ ಆಗಬೇಕು ಎಂದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಾ|| ಎಸ್ ಎನ್ ಮರೆಕ್ಕನವರ ಸಂಸ್ಥೆ ನಡೆದು ಬಂದ ಹಾದಿಯನ್ನು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಶ್ರೀ ಶಿವಯೋಗೆಪ್ಪ ಕೋರಿಶೆಟ್ಟರ ನಿವೃತ್ತ ಶಿಕ್ಷಕರು ಮಾತನಾಡಿ ಧಾರವಾಡದ ಮೃತ್ಯುಂಜಯ ಮಹಾಸ್ವಾಮಿಗಳು ಮತ್ತು ಮಹಾಂತಸ್ವಾಮಿಗಳ ಗುರು-ಶಿಷ್ಯರ ಪರಂಪರೆ ಇಂದಿನ ಎಲ್ಲ ಮಠಾಧೀಶರಿಗೆ ಮಾದರಿಯಾಗಿದ್ದಾರೆ ಅವರ ಆಶಿರ್ವಾದವಿರುವ ಈ ಶಾಲೆಯಲ್ಲಿ ಕಲಿತ ಮಕ್ಕಳು ಧನ್ಯರು ಎಂದರು.
ಇದೆ ವೇಳೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಅಡಿವೆಪ್ಪಶೆಟ್ರ ಬಶೆಟ್ಟಿಯವರ ಪ್ರತಿವರ್ಷದಂತೆ ಈ ವರ್ಷವು ಸಹ ಪುಣ್ಯಸ್ಮರಣೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು ಎಲ್ಲರ ಸಹಾಯ ಸಹಕಾರದೊಂದಿಗೆ ಸಂಸ್ಥೆಯ ಜವಾಬ್ದಾರಿಯನ್ನು ನಡೆಸಿಕೊಂಡು ಹೋಗುತ್ತೇನೆ ಎಂದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಬಿ ಸಿ ಹುಡೇದ, ಎಸ್ ಬಿ ವರ್ದಿ, ಎಸ್ ಬಿ ಬಶೆಟ್ಟಿಯವರ, ಎಸ್ ಎಸ್ ಹಾವೇರಿ, ಶ್ರೀ ಎಸ್ ವಾಯ್ ಗುಬ್ಬಣ್ಣನವರ, ನಾಗಪ್ಪ ಕುಮ್ಮೂರ, ಸಣ್ಣಪ್ಪ ಕುಮ್ಮೂರ, ಸವೂರ ವಕೀಲರು, ವಿಜಯ ಬಶೆಟ್ಟಿಯವರ, ಶಾಂತಪ್ಪ ಹಾವೇರಿ, ವ್ಹಿ ಟಿ ಕುಲಕರ್ಣಿ, ಶಿವಾನಂದ ಹೊಸಮನಿ, ಬಸವರಾಜ ಗೋಟನವರ, ಸಣ್ಣಬಸಪ್ಪ ವರ್ದಿ, ರುದ್ರಪ್ಪ ಬಿದರಗಡ್ಡಿ, ಉಪಸ್ಥಿತರಿದ್ದರು.
ಆರಂಭದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಮುಖ್ಯಶಿಕ್ಷಕ ಬಿ ವ್ಹಿ ಕೋರಿ ಸ್ವಾಗತಿಸಿದರು, ಶಿಕ್ಷಕ ಎಚ್ ಎಫ್ ಹಲವಾಗಲ ಪಾರೀತೋಷಕ ಕಾರ್ಯಕ್ರಮ ನಿರ್ವಹಿಸಿದರು, ಶ್ರೀಮತಿ ಎಸ್ ಸಿ ಅಕ್ಕಿ ನಿರೂಪಿಸಿದರು, ಶಿಕ್ಷಕ ಎಂ ಎಚ್ ಬಿಲ್ಲಣ್ಣನವರ ವಂದಿಸಿದರು