ರಾಜ್ಯ ಮಟ್ಟದ ಬೃಹತ್ ಸಮಾವೇಶ, ಪ್ರತಿಭಾ ಪುರಸ್ಕಾರ
ವೀರಮಾರ್ಗ ನ್ಯೂಸ್ : ಹಾವೇರಿ : ನಿರಂತರವಾಗಿ ಹೋರಾಟ, ಜನಸಾಮಾನ್ಯರ ಸೇವೆ ಮಾಡುತ್ತಿರುವುದನ್ನು ಹಾಗೂ ವಿವಿಧ ರಾಜ್ಯಮಟ್ಟದ ಪ್ರಸಸ್ತಿ ಬಂದಿರುವುದರಿಂದ ಬೆಂಗಳೂರಿನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ), ಕರ್ನಾಟಕ ಕೊರಮ, ಕೊರಚ ಮಹಿಳಾ ಕ್ಷೇಮಾಭಿವೃದ್ಧಿ ಸಂಘ(ರಿ) ಇವರು ನನ್ನನ್ನು ಗೌರವಿಸಿ ಸನ್ಮಾನಿಸಿದ್ದು, ಎಲ್ಲಾ ಪದಾಧಿಕಾರಿಗಳಿಗೂ ಅಭಿನಂದನೆಗಳನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಅಧ್ಯಕ್ಷರಾದ ಉಡಚಪ್ಪ ಮಾಳಗಿ ಅವರು ಸಲ್ಲಿಸಿದರು.
ರಾಜ್ಯ ಮಟ್ಟದ ಬೃಹತ್ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರವನ್ನು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ(ರಿ) ಕರ್ನಾಟಕ ಕೊರಮ, ಕೊರಚ ಮಹಿಳಾ ಕ್ಷೇಮಾಭಿವೃದ್ಧಿ ಸಂಘ(ರಿ) ಇವರು ಹಮ್ಮಿಕೊಂಡಿದ್ದು, ಉತ್ತಮ ಕಾರ್ಯಕ್ರಮ ಮಾಡುವುದರ ಜೊತೆಗೆ ಸಾಧನೆ ಮಾಡಿದವರಿಗೆ ರಾಜ್ಯ ಮಟ್ಟದಲ್ಲಿ ಗೌರವಿಸಿ ಸನ್ಮಾನಿಸಿ ಇನ್ನೂ ಹೆಚ್ಚು ಸೇವಾ ಕಾರ್ಯ ಮಾಡಲು ಪ್ರೋತ್ಸಾಹ ನೀಡಿದ್ದಾರೆ. ರಾಜ್ಯದಲ್ಲಿ ಸಾಧನೆ ಮಾಡಿದವರಿಗೆ ಗೌರವಿಸಿದ್ದು ಹೆಮ್ಮೆಯ ವಿಷಯವಾಗಿದೆ. ಈ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಾಧೀಶರು, ಪ್ರತಿಷ್ಠಿತ ಗಣ್ಯರು ಭಾಗಿಯಾಗಿದ್ದ ಸಮಾರಂಭದಲ್ಲಿ ನನಗೂ ಅವಕಾಶ ನೀಡಿ ಇನ್ನೂ ಹೆಚ್ಚು ಸೇವೆ ಮಾಡಲು ಗೌರವಿಸಿದ್ದೀರಿ. ಕಾರ್ಯಕ್ರಮ ಆಯೋಜನೆ ಮಾಡಿದ ಹಾಗೂ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವೆ ಎಂದು ಕಲ್ಯಾಣ ಸಮಿತಿ(ರಿ) ಅಧ್ಯಕ್ಷರಾದ ಉಡಚಪ್ಪ ಮಾಳಗಿ ಅವರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಹಾರದ ಪಾಟ್ನಾ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಪವನಕುಮಾರ ಭಜಂತ್ರಿ, ಕರ್ನಾಟಕ ರಾಜ್ಯ ಮಹಿಳಾ ಯೋಗದ ಅಧ್ಯಕ್ಷರಾದ ಶ್ರೀಮತಿ ನಾಗಲಕ್ಷ್ಮೀ ಚೌಧರಿ, ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮನವರ, ರಾಜ್ಯಾಧ್ಯಕ್ಷರಾದ ಡಾ.ಭೀಮಪುತ್ರಿ ನಾಗಮ್ಮ, ವಕೀಲರಾದ ಕಿರಣಕುಮಾರ ಕೊತ್ತಗೇರೆ, ಚಾಮರಾಜನಗರದ ಮಹಾದೇವ, ಬಿಬಿಎಂಪಿ ಜಂಟಿ ಆಯುಕ್ತರಾದ ಶ್ರೀಮತಿ ಕೆ.ದಾಕ್ಷಯಿಣಿ, ಡಿವೈಎಸ್‌ಪಿ ಹನುಮಂತ ಭಜಂತ್ರಿ, ನಿವೃತ್ತ ಆಡಿಟರ್ ಜನರಲ್ ಮುನಿರತ್ನಪ್ಪ, ಶ್ರೀಮತಿ ತಾರಾ , ಶ್ರೀಮತಿ ನೀಲಾಶ್ರೀ ಪ್ರದೀಪ್ ಭಜಂತ್ರಿ ಸೇರಿದಂತೆ ಗಣ್ಯರು, ಸನ್ಮಾನಿತರು ಹಾಗೂ ಸಮಾರಂಭದ ಆಯೋಜಕರು ಪಾಲ್ಗೊಂಡಿದ್ದರು.