ಶಾಸಕರ-ಮರಳು ಮಾಪಿಯಾದ ಮುಂದೆ ಮೌನವೇಕೆ..?

ಮಟ್ಕಾ ಅಡ್ಡೆ ಮೇಲೆ ಸಿಡಿದ ಶಾಸಕರ-ಮರಳು ಮಾಪಿಯಾದ ಮುಂದೆ ಮೌನವೇಕೆ..?

ಶಾಸಕರು ಮಾಡದೇ ತಪ್ಪಿಗೆ, ಕೆಟ್ಟ ಹೆಸರು. ನಂಬಿಕೆಯಿಂದ ಅಧಿಕಾರಿಗಳಿಗೆ ತಮ್ಮದೇ ಲೇಟರಕೋಟ್ಟು ಕರೆಸಿ ಸರಿಯಾಗಿ ನೌಕರಿ ಮಾಡಿ ಅಂದ್ರೆ ಇವರುಗಳು ಕತ್ತೆ ಕಾಯಲಿಕ್ಕೆ ಬಂದ್ರೋ ಏನೋ ಗೊತ್ತಿಲ್ಲಾ ಹೆಸರು ಮಾತ್ರ ಕೆಟ್ಟಿದೆಕೆಡುತ್ತಲೇ ಇದೆ. ಏನ್ ಮಾಡೋದು. ಅಂತಾ ತಮ್ಮ ಸಣ್ಣ ದ್ವನಿಯಲ್ಲಿ ಮಾತನಾಡುತ್ತಾ ನನ್ನ ಹೆಸರು ಹಾಕಬೇಡಿ ಎಂದ ರುದ್ರಪ್ಪ ಲಮಾಣಿ ಶಾಸಕರು ಸಭಾಪತಿಯ ಅಭಿಮಾನಿ.

ಈಗಾಗಲೇ ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಹರಳಳ್ಳಿ,ಗುತ್ತಲ,ಕಂಚರಗಟ್ಟಿ,ಗಳಗನಾಥ ಇನ್ನು ಮುಂತಾದ ಈ ಗ್ರಾಮಗಳಲ್ಲಿರುವ ಮರಳುಕಳ್ಳರು ಹಗಲು ವೇಳೆಯಲ್ಲಿಯೇ ಯಾವೊಬ್ಬ ಅಧಿಕಾರಿಯ ಭಯವಿಲ್ಲದೆ, ನದಿ ಪಾತ್ರದಲ್ಲಿರುವ ಮರಳನ್ನು ಅಕ್ರಮವಾಗಿ ಲಾರಿಗಳಲ್ಲಿ ತುಂಬಿಕೊಂಡು ಈ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಸಾಗಾಟ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಮಾತುಗಳಾಗಿವೆ.ಈ ಮರಳುಚೋರರು ಭಯ ಪಡುವ ಮಟ್ಟಿಗೆ,ಅಧಿಕಾರಿಗಳೆನಾದರೂ ಸೇವೆಯಲ್ಲಿ ಕರ್ತವ್ಯ ನಿಷ್ಠೆ ತೋರಿದ್ದರೆ ಈ ಮರಳು ಕಳ್ಳರು ಭಯ ಪಡುತ್ತಿದ್ದರು.ಆದರೆ ಈ ಅಧಿಕಾರಿಗಳ ಹಾಗೂ ಮರಳುಚೋರರ ಮಧ್ಯೆ ಅದ್ಯಾವ “ಅಜ್ಜೆಸ್ಟ್ ಮೆಂಟ್” ಸಂಧಾನವಾಗಿದೆಯೋ ಯಾರಿಗೆ ಗೊತ್ತು?ಆದರೆ ಸರ್ಕಾರದ ಬೊಕ್ಕಸಕ್ಕೆ
ಸಂಧಾನವಾಗಿದೆಯೋ,,,? ಯಾರಿಗೆ ಗೋತ್ತು?ಆದರೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆಧಾಯ ತಂದುಕೊಡುವ ಮರಳು ಎಂಬ ಖನಿಜ ಸಂಪತ್ತಿಗೆ ಹಗಲು ವೇಳೆಯಲ್ಲಿಯೇ ಕನ್ನ ಹಾಕುವ ಮಟ್ಟಕ್ಕೆ ಮರಳುಚೋರರು ಬಂದೊದಗಿರುವುದು ಜಿಲ್ಲಾಡಳಿತದ ಅಸಮರ್ಥತೆಗೆ ಸಾಕ್ಷಿಯಾಗಿದೆ ಎ೦ದರೆ ತಪ್ಪಾಗಲಾರದು.


ಅದು ಏನೇ ಇರಲಿ,ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆಧಾಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮರಳು ಎಂಬ ಖನಿಜ ಸಂಪತ್ತನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಸರ್ಕಾರಿ ಸೇವಕ,ಜನಪ್ರತಿನಿಧಿಯ ಕರ್ತವ್ಯ.ಈಗಾಗಲೇ ಸಮಾಜದಲ್ಲಿ ಅತಿಯಾದ ಬೇಡಿಕೆ ಹೊಂದಿರುವ ಮರಳು ಎಂಬ ಖನಿಜ ಸಂಪತ್ತನ್ನು ಕಾಪಾಡಿಕೊಳ್ಳುವ ಹಿತದೃಷ್ಟಿಯಿಂದ ಸರ್ಕಾರವು ಪ್ರತಿ ಜಿಲ್ಲಾ ಮಟ್ಟದಲ್ಲಿ ಸಮಿತಿಯನ್ನು ರಚಿಸಿ,ಆ ಸಮಿತಿಗೆ “ಜಿಲ್ಲಾ ಮರಳು ಟಾಸ್ಕ್ ಪೋರ್ಸ್” ಸಮಿತಿ ಎಂಬ ನಾಮಕರಣವನ್ನು ಸಹ ಮಾಡಿ,ಈ ಸಮಿತಿಗೆ ಜಿಲ್ಲಾಧಿಕಾರಿಗಳನ್ನು ಅಧ್ಯಕ್ಷರನ್ನಾಗಿಸಿ,ಉಪ ವಿಭಾಗಾಧಿಕಾರಿಗಳನ್ನು ಉಪಧ್ಯಕ್ಷರನ್ನಾಗಿಸಿ,ಕಂದಾಯ.ಗಣಿ.ಸಾರಿಗೆ ಪಂಚಾಯತ್ ರಾಜ್.ಲೋಕೋಪಯೋಗಿ.ಅರಣ್ಯ.ಪರಿಸರ.ಪೊಲೀಸ್ ಈ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಸದಸ್ಯರನ್ನಾಗಿ ಮಾಡಿ,ಹಾ!ಹಾ!ಇಲಾಖೆಯ ಅಧಿಕಾರಿಗಳಿಗೆ ಅವರದೇ ಜವಾಬ್ದಾರಿಯನ್ನು ನೀಡಿರುತ್ತದೆ.ಆದರೆ ಹಾವೇರಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಾಭದ್ರ ನದಿಯ ಒಡಲಲ್ಲಿರುವ ಮರಳನ್ನು ಅಗೆದು, ಸರ್ಕಾರದ ಬೊಕ್ಕಸಕ್ಕೆ ಯಾವುದೇ ರೀತಿಯ ತೆರಿಗೆ ಭರ್ತಿ ಮಾಡದೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಣ್ಣಿಗೆಟಕುವ ದೃಶ್ಯಗಳಾಗಿದ್ದರು,ಸರ್ಕಾರದ ಬೊಕ್ಕಸಕ್ಕೆ ಹಾನಿ ಉಂಟು ಮಾಡುತ್ತಿರುವ ಈ ಅಕ್ರಮ ಮರಳು ಸಾಗಾಟಕ್ಕೆ ನಿಯಂತ್ರಣ ಏರಲು ಮುಂದಾಗದಿರುವ ಈ ಟಾಸ್ಕ್ ಪೋರ್ಸ್ ಸಮಿತಿ ಅಧಿಕಾರಿಗಳ ಹಿಂದಿನ ಮರ್ಮವಾದರೂ ಏನು?ಯಾವೊಬ್ಬ ಅಧಿಕಾರಿಯ ಭಯವಿಲ್ಲದೆ ರಾಜಾರೋಷವಾಗಿ ನದಿ ಪ್ರಾಂತ್ಯದಲ್ಲಿರುವ ಮರಳನ್ನು ತುಂಬಲು ರಾಜಾರೋಷವಾಗಿ ನದಿ ಪ್ರಾಂತ್ಯದಲ್ಲಿರುವ ಮರಳನ್ನು ತುಂಬಲು ನೇರವಾಗಿ ಲಾರಿಗಳನ್ನೇ ತಗೆದುಕೊಂಡು ಹೋಗುವ ಮಟ್ಟಕ್ಕೆ ಈ ಲೂಟಿಕೋರರು ಬಂದಿದ್ದಾರೆ ಎಂದರೆ ಸಮಿತಿಯಲ್ಲಿ ಸದಸ್ಯ ಸ್ಥಾನ ಪಡೆದ ಈ ಠಾಣೆಯ ಪೊಲೀಸ್ ಅಧಿಕಾರಿಗಳ ಪಾತ್ರವಾದರೂ ಏನು?ಅಥವಾ ಈ ಅಕ್ರಮ ಮರಳು ಸಾಗಾಟಕ್ಕೆ ಲಗಾಮು ಹಾಕದಂತೆ ಯಾವುದಾದರು ರಾಜಕೀಯ ಒತ್ತಡವೇನಾದರೂ ಬಂದಿದೆಯಾ?ಅದು ಏನೇ ಇರಲಿ,ಹಗಲು ವೇಳೆಯಲ್ಲಿಯೇ ಯಾರೊಬ್ಬರ ಭಯವಿಲ್ಲದೆ ಸರ್ಕಾರದ ಸಂಪತ್ತನ್ನು ಲೂಟಿ ಹೊಡೆಯುವ ಮಟ್ಟಕ್ಕೆ ಮರಳುಚೋರರು ಬಂದೊದಗಿರುವುದನ್ನು ಗಮನಕ್ಕೆ ಪಡೆದು,ಹಗಲು ರಾತ್ರಿಯೆನ್ನದೆ ನಡೆಯುತ್ತಿರುವ ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಿ,ಈ ಅಕ್ರಮಕ್ಕೆ ಕುಮ್ಮಕ್ಕು ನೀಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಈಗಾಗಲೇ ತಾಲೂಕಿನಲ್ಲೆಡೆ ಅಕ್ರಮ ಮರಳು ಸಾಗಾಟದಲ್ಲಿ ಶಾಸಕರ ಮೌನವೇಕೆ?ಎಂದು ಚರ್ಚೆಗೆ ಗ್ರಾಸವಾಗಿರುವ ಮಾತುಗಳಿಗೆ ಅಂತ್ಯಗಾಣಿಸುವುದು ಶಾಸಕರಿಗೆ ಅವಶ್ಯಕವಾಗಿದೆ.