ಬೆಳೆವಿಮೆ ತುಂಬಲು ಹಳೆ ಪದ್ಧತಿ ಜಾರಿ ಮಾಡಿ ಭುವನೇಶ್ವರ ಶಿಡ್ಲಾಪುರ ಒತ್ತಾಯ.
ವೀರಮಾರ್ಗ ನ್ಯೂಸ್ : E ವರ್ಷ ಬರಗಾಲ ಎದುರಿಸುವ ಆತಂಕದ ನಡುವೆ ರೈತರು ಸಂಕಷ್ಟದಲ್ಲಿರುವಾಗ ಸರ್ಕಾರದ ಗೊಂದಲಕಾರಿ ನೀತಿ ಗಳಿಂದ ಜಿಲ್ಲೆ ಸೇರಿದಂತೆ ರಾಜ್ಯದ ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಬೆಳೆ ವಿಮೆ ಅರ್ಜಿ ಸಲ್ಲಿಸಲಾಗದೆ ಪರದಾಡುವಂತೆ ಆಗಿದೆ.
ಜಿಲ್ಲಾಡಳಿತ ಕೃಷಿ ಇಲಾಖೆ , ಇದನ್ನು ಗಂಭೀರವಾಗಿ ಪರಿಗಣಿಸಿ ರೈತರ ಬೆಳೆ ವಿಮೆ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಒತ್ತಾಯಿಸಿದ್ದಾರೆ ಈ ಕುರಿತು ಪ್ರಕಟಣೆ ನೀಡಿರುವ ಅವರು ಬೆಳೆಸಾಲ ದೃಢೀಕರಣ ಸೇರಿದಂತೆ ಅನೆಕ ನಿಯಮಗಳಿಂದಾಗಿ ರೈತರು ಸುಲಭವಾಗಿ ಬೆಳೆ ವಿಮೆಪಾವತಿಸುವುದು ಕಷ್ಟಕರವಾಗಿದೆ ಹಿಂದಿನ ವರ್ಷದ ಪದ್ಧತಿಯಂತೆಯೇ ಈ ವರ್ಷವೂ ರೈತರು ತಮಗೆ ಅನುಕೂಲವಾದ ಕಡೆಗೆ ಬೆಳೆ ವಿಮೆ ತುಂಬಲು ಅವಕಾಶ ಕೊಡಬೇಕು ಎಂದು ಹೇಳಿದರು.
ಹಳೆಯ ಸಾಲಗಾರರು ಚಾಲ್ತಿಸಾಲಗಾರರು ಸಾಲ ಪಡೆಯದೇ ಇರುವವರು ಎಂದು ಭಿನ್ನ ಗುಂಪುಗಳಾಗಿ ರೈತರನ್ನು ವಿಂಗಡಿಸಲಾಗಿದೆ ಇದು ರೈತರನ್ನು ಒಕ್ಕಲಿಬ್ಬಿಸುವ ತಂತ್ರವಾಗಿದೆ ಈ ನಡುವೆ ಯಾವುದೇ ಬ್ಯಾಂಕುಗಳಲ್ಲಿ ಸಾಲ ಪಡೆದಿಲ್ಲ ಎಂಬ ದೃಢೀಕರಣ ಪತ್ರವನ್ನು ನೀಡುವುದು ಕಡ್ಡಾಯಗೊಳಿಸಿರುವುದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ ಬೆಳೆ ಸಾಲ ಪಾವತಿಸಿ ಸಾಲ ಚುಕ್ತಾ ಮಾಡಿದರು ಹಲವು ಬ್ಯಾಂಕುಗಳು ಸಾಲದ ಖಾತೆಯಿಂದ ಮುಕ್ತಾಯಗೊಳಿಸದೆ ಇರುವುದು ಕಂಡು ಬಂದಿದೆ ಕೆಲವು ಕಡೆ ತಾಂತ್ರಿಕ ಅಡಚಣೆಗಳಿವೆ , ಇದರಿಂದ ರೈತರು ಬೆಳೆವಿಮೆ ತುಂಬಲಾಗದೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ ಈ ಹಿನ್ನೆಲೆಯಲ್ಲಿ ಸರ್ಕಾರ ಜಿಲ್ಲಾಡಳಿತ ಕೃಷಿ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರತಿವರ್ಷದಂತೆ ಈ ವರ್ಷವೂ ರೈತರಿಗೆ ಎಲ್ಲಿ ಅನುಕೂಲವಾಗುತ್ತದೆಯೋ ಅಲ್ಲಿ ಬೆಳೆಯುಮೆ ತುಂಬಿಕೊಳ್ಳಲು ಬೆಳೆ ವಿಮೆಯ ಸಮಸ್ಯೆ ತ್ವರಿತವಾಗಿ ಪರಿಹಾರ ಒದಗಿಸಬೇಕೆಂದು ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.