ಮರ್ಯಾದೆ ಹತ್ಯೆ ಹೊಣೆ ಯಾರು,,,?

ಹೆಣ್ಣುಮಕ್ಕಳ ಹೆತ್ತವರ ರಕ್ಷಣೆ ಮಾಡುವರು ಯಾರು,,,?

ಕಾನೂನು ಯಾರ ಪರ,,, ನೊಂದ ಕುಟುಂಬ ರಕ್ಷಣೆಗೇ ಯಾರು ಬರಲೇ ಇಲ್ಲವೇ…? ಗಂಡಸರ ದೌರ್ಜನ್ಯ ತಡೆಯಲು ಯಾವಕಾನೂನು ಬರಲಿಲ್ಲವೇ,,,?

ವೀರಮಾರ್ಗ ನ್ಯೂಸ್ : ಮೈಸೂರು ಜಿಲ್ಲಾ : ನರಸೀಪುರ ತಾಲೂಕಿನ : ಕೆಂಪಾಯ್ಯನ ಗ್ರಾಮ : ಒಂದೇ ಕುಟುಂಬದ ಮೂವರು ಆತ್ಮಹತ್ಯೆ,,,ಮೈಸೂರಿನ ತಿ. ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿವಣ್ಣ, ನಾಗರತ್ನ ಹಾಗೂ ಅವರ ಪುತ್ರಿ ರಕ್ಷಿತಾ ಮೃತ ದುರ್ದೈವಿಗಳಾಗಿದ್ದಾರೆ. ಕುಟುಂಬದವರು ಡೆತ್ ನೋಟ್ ಬರೆದಿಟ್ಟು ತಮ್ಮ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಅದೇ ಗ್ರಾಮದ ಉಲ್ಲಾಸ್ ಗೌಡ ಎಂಬಾತನ ಕಿರುಕುಳ ಹಾಗೂ ಮಾನಸಿಕ ಹಿಂಸೆಯಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿರುವುದಾಗಿ ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಿತಾಗೆ ಮದುವೆ ನಿಶ್ಚಯವಾಗಿದ್ದು, ಆಕೆಯ ಕೆಲವು ಫೋಟೋಗಳು ಮತ್ತು ಮೆಸೇಜ್‌ಗಳನ್ನು ಇಟ್ಟುಕೊಂಡು ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಮದುವೆ ನಿಶ್ಚಯವಾಗಿದ್ದ ಯುವಕನಿಗೂ ಆ ಮಾಹಿತಿ ಕಳುಹಿಸಲಾಗಿತ್ತು ಎನ್ನಲಾಗಿದೆ.
ಈ ಬೆಳವಣಿಗೆಯಿಂದ ಮನನೊಂದ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವರುಣಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತನಿಖೆಯ ನಂತರವೇ ಸ್ಪಷ್ಟವಾಗಲಿದೆ.

ವರದಿ: ಚನ್ನೇಶ್ ಕೆ ಎಂ,ಬೆಂಗಳೂರು.