ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರಗಳು ಭುವನೇಶ್ವರ ಶಿಡ್ಲಾಪುರ ಆಕ್ರೋಶ
ಹಾವೇರಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ರಾಜಕೀಯ ಕೆಸರಾಟದಲ್ಲಿ ನಿರತರಾಗಿ ದೇಶದ ಅನ್ನದಾತರ ಬಗ್ಗೆ ಗಮನಹರಿಸುತ್ತಿಲ್ಲ ರೈತರಿಗೆ ಬೇಕಾಗುವ ಬಿತ್ತನೆ ಬೀಜ ಸರಿಯಾಗಿ ಸಿಗುತ್ತಿಲ್ಲ ದೇಶಕ್ಕೆ ಅನ್ನ ಕೊಡುವ ರೈತರು ರೈತ ಸಂಪರ್ಕ ಕೇಂದ್ರದ ಎದುರು ಬೀಜಕ್ಕಾಗಿ ಬಂದು ಬೀದಿಯಲ್ಲಿ ಮಲಗುವ ಪರಿಸ್ಥಿತಿ ಉಂಟಾಗಿದೆ.
ರಸಗೊಬ್ಬರದ ಬೆಲೆ ಏರಿಕೆಯಾಗಿದ್ದರು ಅಗತ್ಯ ಪ್ರಮಾಣದಲ್ಲಿ ರೈತರಿಗೆ ರಸಗೊಬ್ಬರ ದೊರಕುತ್ತಿಲ್ಲ ಈ ವಿಷಯದಲ್ಲಿ ಸರ್ಕಾರಗಳು ನಾಟಕವಾಡುತ್ತಿವೆ ಸರ್ಕಾರಗಳಿಗೆ ಆಹಾರ ಉತ್ಪಾದನೆ ಹೆಚ್ಚಿಸುವ ಇಚ್ಛಾಶಕ್ತಿ ಇದ್ದರೆ ಅಗತ್ಯ ಪ್ರಮಾಣದ ರಸಗೊಬ್ಬರವನ್ನು ರೈತರಿಗೆ ಒದಗಿಸುವಲ್ಲಿ ಮುಂದಾಗಲಿ. ಬರೀ ಹೆಸರಿಗೆ ರಾಸಾಯನಿಕ ಮುಕ್ತ ಕೃಷಿ ಮಾಡಿ ಎಂದರೆ ಸಾಲದು ಅದಕ್ಕೆ ಪೂರಕವಾದ ವ್ಯವಸ್ಥೆ ಮತ್ತು ಜ್ಞಾನವನ್ನು ಸರ್ಕಾರಗಳು ಮೊದಲು ನೀಡಬೇಕು ಎಂದು ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿ ಸರ್ಕಾರದ ಆಡಳಿತದಲ್ಲಿ ಹಾಸ್ಟೆಲ್ ಅನುದಾನಕ್ಕೂ ಕತ್ತರಿ : ಸಂಸದ
ವೀರಮಾರ್ಗ ನ್ಯೂಸ್ : ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯಗಳಿಗೆ ಊಟ ಪೂರೈಕೆ ಮಾಡುವ ಗುತ್ತಿಗೆದಾರರಿಗೆ ನೀಡಬೇಕಾದ ಕೋಟ್ಯಾಂತರ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸಂಸದರಾದ ಶ್ರೀ ಜಗದೀಶ ಶೆಟ್ಟರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಸೇರಿ ಒಟ್ಟು 1939 ವಿದ್ಯಾರ್ಥಿ ವಸತಿ ನಿಲಯಗಳಿಗೆ ಕಳೆದ ಒಂದೂವರೆ ವರ್ಷದಿಂದ ವಿದ್ಯಾರ್ಥಿಗಳ ಭೋಜನ ವೆಚ್ಚ, ಕಟ್ಟಡ ಬಾಡಿಗೆ ಹಾಗೂ ನಿರ್ವಹಣೆ ವೆಚ್ಚ ಸೇರಿ ಒಟ್ಟು 370 ಕೋಟಿಗೂ ಅಧಿಕ ಅನುದಾನ ಬಾಕಿ ಉಳಿದಿದೆ.
ನಮ್ಮ ಬೆಳಗಾವಿ ಜಿಲ್ಲೆಯ ಹಾಸ್ಟೆಲ್ ಗಳ ಬಾಕಿ 29 ಕೋಟಿ ರೂಪಾಯಿಗಳು, ರಾಜ್ಯ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಪೋಷಕರು ನೂರಾರು ಕನಸುಗಳನ್ನು ಹೊತ್ತು ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಗಳಿಗೆ ಸೇರಿಸಿದರೆ, ಮಕ್ಕಳಿಗೆ ಮೂಲಭೂತವಾಗಿ ನೀಡಬೇಕಾದ ಸೌಲಭ್ಯಗಳಿಗೂ ಸಹ ಕೊರತೆ ಮಾಡುವುದು ಖಂಡನೀಯ.
ಸರ್ಕಾರ ಆದಷ್ಟು ಬೇಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಬಾಕಿ ಉಳಿಸಿಕೊಂಡ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.