ವಿದ್ಯಾರ್ಥಿ ಜೀವನ ಸುಭದ್ರತೆಗೆ ನೈತಿಕ ಮೌಲ್ಯಗಳ ಅಳವಡಿಕೆ ಅಗತ್ಯ ಪ್ರೊ. ಬಿ.ಬಿ. ನಂದ್ಯಾಲ
ವೀರಮಾರ್ಗ ನ್ಯೂಸ್ : ರಾಣೆಬೆನ್ನೂರು ತಾಲೂಕ : ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾಗಿದೆ. ಬದುಕಿಗೆ ಅಗತ್ಯವಾಗಿ ಬೇಕಾಗಿರುವ ಕೆಲವು ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಗಿದಾಗ ಮಾತ್ರ ಭವಿಷ್ಯದಲ್ಲಿ ಶಾಶ್ವತವಾದ ಜೀವನ ಸಾಗಿಸಲು ಸಾಧ್ಯವಾಗುವುದು ಎಂದು ಹರಿಹರ ಎಸ್. ಜೆ. ವ್ಹಿ. ಪಿ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ, ಬಿ.ಬಿ. ನಂದ್ಯಾಲ ಹೇಳಿದರು.
ಅವರು, ಸಮೀಪದ ಹನುಮನಮಟ್ಟಿ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಬಹುದೊಡ್ಡ ಇತಿಹಾಸವಿದೆ. ಭಾವೈಕ್ಯತೆಯ ಬದುಕಿಗೆ ಬುದ್ಧನ ಸಹನೆಯ ಜ್ಯೋತಿ, ಪೈಗಂಬರರ ಸಹೋದರತ್ವ ಜ್ಯೋತಿ, ಕ್ರಿಸ್ತನ ಶಾಂತಿಯ ಜ್ಯೋತಿ, ಮಹಾವೀರನ ತ್ಯಾಗದ ಜ್ಯೋತಿ, ಹಾಗೂ ಬಸವನ ಭಕ್ತಿಯ ಜ್ಯೋತಿಯಂತಿಯಂತೆ ಬಾಳು ಬೆಳಕಾಗಬೇಕು ಎಂದು ಅವರು ಕರೆ ನೀಡಿದರು.
ತಪ್ಪು ಪ್ರತಿಯೊಬ್ಬರೂ ಮಾಡುತ್ತಾರೆ ತಪ್ಪು ಮಾಡುವುದು ಸಹಜ ಅದನ್ನು ತಿದ್ಧಿ ನಡೆಯುವುದು ಪರಿವರ್ತನೆಗೆ ತುಂಬಾ ಸಹಕಾರಿಯಾಗಲಿದೆ ತಂದೆ ತಾಯಿಗಳಿಗೆ ವಿದೇಯರಾಗಿ ಸಮಾಜಕ್ಕೆ ಮಾರಕವಾಗದೆ ಎಲ್ಲರೂ ಮೆಚ್ಚುವಂತೆ,ಒಪ್ಪುವಂತೆ ಅಪ್ಪಿಕೊಳ್ಳುವಂತೆ, ಜೀವನ ಸಾಗಿಸುವುದೇ ನಿಜವಾದ ಮಾನವೀಯ ಧರ್ಮವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಸಿದ್ದ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ ಎಲ್ ಪಾಟೀಲ ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಪಾಚಿಮಾತ್ಯ ಸಂಸ್ಕೃತಿಯ ಆಧುನಿಕ ಬದುಕಿಗೆ ಮಾರೂ ಹೋಗದೆ ನಿಜ ಮತ್ತು ನೈಜ ಸಂಸ್ಕೃತಿಯ ವಾಸ್ತವಿಕ ನೆಲಗಟ್ಟಿನ ಬದುಕನ್ನು ಸಾಗಿಸಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕಾದ ಇಂದಿನ ಅಗತ್ಯವಿದೆ ಎಂದ ಅವರು, ತಮ್ಮ ನಿತ್ಯದ ಮೌಲ್ಯಯುತ ಬದುಕನ್ನು ಅಳವಡಿಸಿಕೊಳ್ಳಲು ಮೌಲ್ಯಧಾರಿತ ವಿಚಾರಗಳನ್ನು ಅಳವಡಿಸಿಕೊಂಡು ಸಾಗಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದ ಸಾಧಕರನ್ನು ಮತ್ತು ಗಣ್ಯರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕೃಷಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ಪ್ರಭು ಎಸ್. ಟಿ, ಸೇರಿದಂತೆ ಹಿರಿಯ ಮತ್ತು ಕಿರಿಯ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಸೌಜನ್ಯ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಸ್ಥರಾದ ಡಾ. ಕೆ.ವಿ
ಬಸವಕುಮಾರ ಸ್ವಾಗತಿಸಿದರು.
ಹಿರಿಯ ಮತ್ತು ಕಿರಿಯ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಡಾ,ಉದಯ ಕಿರಣ ನಿರೂಪಿಸಿ, ಲಕ್ಷ್ಮ ವಂದಿಸಿದರು. ನಂತರ ನಡೆದ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು.