ವೀರಮಾರ್ಗ ನ್ಯೂಸ್ : ಧಾರವಾಡ ಜಿಲ್ಲಾ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ಜಿಲ್ಲಾ ಘಟಕ, ಲಿಂಗಾಯತ ಭವನ, ಅರಟಾಳ ರುದ್ರಗೌಡರ ಮಾರ್ಗ, ಚನ್ನಬಸವೇಶ್ವರ ನಗರ, ಹಳ್ಳಿಯಾಳ ರಸ್ತೆ ಧಾರವಾಡ ಇವರ ಆಶ್ರಯದಲ್ಲಿ ಬಸವ ಜಯಂತಿ ಹಾಗೂ ಕಾಯಕ ದಿನಾಚರಣೆ ಅಂಗವಾಗಿ ಕರ್ನಾಟಕದ ಸಂಸ್ಕೃತಿಕ ನಾಯಕ ಜಗಜ್ಯೋತಿ ಶ್ರೀ ಬಸವೇಶ್ವರರ ಕುರಿತು ಉಪನ್ಯಾಸ ಹಾಗೂ ವಚನ ಸಂಗೀತ ಕಾರ್ಯಕ್ರಮ ಶುಕ್ರವಾರ ದಿನಾಂಕ 01-05-2026 ರಂದು ಸಂಜೆ 5:00 ಗಂಟೆಗೆ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಸವೇಶ್ವರರ ವಚನಗಳು ಸಮಾಜದಲ್ಲಿ ಸಮಾನತೆ, ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರುತ್ತವೆ ಎಂದು ಹೇಳಿದರು.
ಉಪನ್ಯಾಸಕರಾಗಿ ಭಾಗವಹಿಸಿದ ಡಾ. ವಿನಾಯಕ (ನಿವೃತ್ತ ಪ್ರಾಧ್ಯಾಪಕರು, ಧಾರವಾಡ) ಅವರು ಬಸವ ತತ್ವಗಳ ಪ್ರಾಸಕ್ತಿಯನ್ನು ವಿವರವಾಗಿ ತಿಳಿಸಿ, ಇಂದಿನ ಸಮಾಜದಲ್ಲಿ ಅವುಗಳ ಅಗತ್ಯತೆಯನ್ನು ಒತ್ತಿಹೇಳಿದರು.
ಲೋಕಕಲ್ಯಾಣಾರ್ಥವಾಗಿ ಈ ದಿವಸ ಚೌಡೇಶ್ವರಿ ಅಮ್ಮನವರಿಗೆಲಕ್ಷ ಬಿಲ್ವಾರ್ಚನೆ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾದ ಪ್ರದೀಪ್ ಎಂ. ಪಾಟೀಲ್ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಕೋಶಾಧ್ಯಕ್ಷರಾದ ಮಡಿವಾಳಪ್ಪ ಶಂ. ಶಿರಿಯನ್ನವರ, ಪ್ರಧಾನ ಕಾರ್ಯದರ್ಶಿಗಳಾದ ಪ್ರೊ. ವಿರುಪಾಕ್ಷಪ್ಪ ಸವಡಿ, ಉಪಾಧ್ಯಕ್ಷರಾದ ಶಂಕರ್ ಕೆ. ಕಂಬಿ, ಪ್ರಕಾಶ್ ಬಿ. ಭಾವಿಕಟ್ಟಿ, ಪ್ರಧಾನ ಕಾರ್ಯದರ್ಶಿ ವೀರೇಶ್ ಚ. ಚಲಿಗೇರಿ, ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಶಿವಶರಣ ಕೆ. ಕಲಬಶೆಟ್ಟರ್ ಡಾ. ಸುವರ್ಣ ಎಲ್ ಬಿರಾದಾರ ಪಾರ್ವತಿ ಹಾಲಬಾವಿ ಜಯಶ್ರೀ ಎಸ್ ಪಾಟೀಲ್ ಸುಧಾ ಸ ಕಬ್ಬೂರ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಒಂದುಲಕ್ಷ ಬಿಲ್ವಾರ್ಚನೆಯ ಶ್ರೀ ಚೌಡೇಶ್ವರಿ ಅಮ್ಮನವರವಿಶೇಷ ಮಹಾಪೂಜೆ…
ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲ ಭಾಗವಹಿಸಿದವರಿಗೆ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.