ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಭೆ…

ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ ಸಿ ಟ್ರಸ್ಟ್ ರಿಜಿಸ್ಟರ್ ದಾವಣಗೆರೆ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಬರುವ ಹದಡಿ ವಲಯದ ಹದಡಿ ಕಾರ್ಯಕ್ಷೇತ್ರದಲ್ಲಿ ಜ್ಞಾನವಿಕಾಸ ಕೇಂದ್ರದಲ್ಲಿ ನಡೆದ ಕೇಂದ್ರ ಸಭೆ ಮತ್ತು ಹಕ್ಕಿ ಪಕ್ಷಿಗಳಿಗೆ ಪಶು ಪಕ್ಷಿ ಸಂಕುಲಕ್ಕೆ ನೀರುಣಿಸುವ ಕಾರ್ಯಕ್ರಮವನ್ನು ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನವಯಾಧಿಕಾರಿಗಳಾದ ನಂದಾ ಸೇವಾ ಪ್ರತಿನಿಧಿ ಹಾಗೂ ಕೇಂದ್ರದ ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ಮಾತೋಶ್ರೀ , ಹೇಮಾವತಿ ಅಮ್ಮನವರ ಮಾರ್ಗದರ್ಶನದಂತೆ ಬೇಸಿಗೆಯಲ್ಲಿ ಹಕ್ಕಿ ಪಕ್ಷಿಗಳು ಪಶು ಪ್ರಾಣಿಗಳಿಗೆ ನೀರುಣಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದಲ್ಲಿ ಮಾತನಾಡಿದ ಜ್ಞಾನವಿಕಾಸ ಸಮನ್ವಯಾಧಿಕಾರಿ ನಂದಾ ರವರು ಮಾತೋಶ್ರೀ ಶ್ರೀಮತಿ ಹೇಮಾವತಿ ಅಮ್ಮನವರ ಮಾರ್ಗದರ್ಶನದಂತೆ ಎಲ್ಲೆಡೆ ಹಕ್ಕಿ ಪಕ್ಷಿಗಳು ಪಶು ಪ್ರಾಣಿಗಳಿಗೆ ನೀರುಣಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸುತ್ತಾ ಮುಂದುವರೆದು ಮಾತನಾಡುತ್ತಾ ಬಿರು ಬೇಸಿಗೆ ಬಿಸಿಲಿನಿಂದ ಕೆರೆಕಟ್ಟೆಗಳು ಬರಿದಾಗಿ ಪಕ್ಷಿಗಳಿಗೆ ಪ್ರಾಣಿಗಳಿಗೆ ನೀರಿನ ಆಹಾಕಾರ ಆಗಬಾರದು ನೀರು ಮತ್ತು ಆಹಾರ ಸಿಗಬೇಕು ಇದರಿಂದ ಹಕ್ಕಿ ಪಕ್ಷಿ ಪ್ರಾಣಿ ಸಂಕುಲವನ್ನು ಉಳಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಎಂದು ಜ್ಞಾನ ವಿಕಾಸ ಸಮನ್ವಯಾಧಿಕಾರಿಗಳಾದ ನಂದಾ ರವರು ಮಾಹಿತಿ ನೀಡಿದರು ನಂತರ ಹಕ್ಕಿ ಪಕ್ಷಿ ಗಳಿಗೆ ನೀರು ಉಣಿಸುವ ಕಾರ್ಯಕ್ರಮ ಮಾಡಲಾಯಿತು ಯೋಜನಾಧಿಕಾರಿಗಳಾದ ಶ್ರೀನಿವಾಸ ರವರು, ವಕೀಲರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ. ಮಲ್ಲಿಕಾರ್ಜುನ ಕಲಾಲ್ ರವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.