ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೆಬೆನ್ನೂರು :13 ನಗರ ತಾಲೂಕು, ಸೇರಿದಂತೆ ಹಾವೇರಿ ಜಿಲ್ಲೆಯಲ್ಲಿ ಒಟ್ಟು 210 ವಿವಿಧ ಕಂಪನಿಗಳ ಮೊಬೈಲ್ ಗಳನ್ನು ಕಳ್ಳತನ ಅಥವಾ ಕಳೆದುಕೊಂಡ್ಡಿದ್ದನ್ನು ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸ್ ರು. ಅವುಗಳನ್ನು ಕಳೆದುಕೊಂಡ ವಾರಸುದಾರರಿ ತಲುಪಿಸುವಲ್ಲಿ ತಮ್ಮ ಪ್ರಾಮಾಣಿಕತೆ ಮೆರೆದು ಸಾರ್ವಜನಿಕರಲ್ಲಿ ಪೊಲೀಸರು ಆತ್ಮವಿಶ್ವಾಸ ಮೂಡಿಸಿದ್ದಾರೆ.
ಕಳೆದುಕೊಂಡ ವಾರಸುದಾರರಿಗೆ ಪತ್ತೆ ಹಚ್ಚಿರುವ ಪೊಲೀಸರು ಸಂಬಂಧಿಸಿದವರಿಗೆ ಥಾಣೆಗೆ ಕರೆಸಿ ಅಧಿಕ ಬೆಲೆ ಬಾಳುವ ಮೊಬೈಲ್ಗಳನ್ನು ತಲುಪಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ಒಂಟಗೋಡಿ ಅವರ ನೇತೃತ್ವದಲ್ಲಿ ಜನವರಿ 1, 2026 ರಿಂದ ಲಕ್ಷ್ಮಣ್ ಶಿರಕೋಳ್ ಅವರ ಮಾರ್ಗದರ್ಶನದಲ್ಲಿ ಇಲ್ಲಿಯವರೆಗೂ ಶೀಘ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಅಂದಾಜು 42 ಲಕ್ಷಕ್ಕೂ ಅಧಿಕ ಮೌಲ್ಯದ ಒಟ್ಟು 210 ಮೊಬೈಲ್ ಗಳು ಸಿ ಇ. ಐ. ಆರ್. ಪೋರ್ಟಲ್ ಸಹಾಯದಿಂದ ಪತ್ತೆ ಹಚ್ಚಿದ್ದಾರೆ. ಪತ್ತೆ ಮಾಡಿರುವ ಮೊಬೈಲ್ಗಳ ದಾಖಲಾರ್ಹ ಸಾಧನೆ ರಾಜ್ಯದಲ್ಲಿಯೇ ನಂಬರ್ 1 ಹಾವೇರಿ ಜಿಲ್ಲೆಯಿಂದ ಪ್ರಥಮ ಸ್ಥಾನದಲ್ಲಿರುವದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಘೋಷಿಸಿದ್ದಾರೆ. ರಾಜ್ಯದ ಬೇರೆ ಬೇರೆ ಭಾಗದಲ್ಲಿ ಇದ್ದ ಈ ಮೊಬೈಲ್ಗಳನ್ನು ತಂತ್ರಜ್ಞಾನ ಪರಿಶೀಲನೆಯಿಂದ ಪತ್ತೆ ಹಚ್ಚುವಲ್ಲಿ ಯಶಸ್ವಿ ಕಂಡಿದ್ದಾರೆ. ಕಳೆದುಕೊಂಡ ಮೊಬೈಲ್ಗಳು ರಾಣೆಬೆನ್ನೂರು ತಾಲೂಕಿನವು ಬಹು ಶಂಕೆಯಲ್ಲಿರುವುದಾಗಿ ಹೇಳಲಾಗಿದೆ.
ಯಶಸ್ವಿ ಕಾರ್ಯಾಚರಣೆ ನಡೆಸಿದ ಇಲಾಖೆಯ ಸಿಬ್ಬಂದಿಗಳಿಗೆ ವರಿಷ್ಠಾಧಿಕಾರಿ ಹಾಗೂ ವರಿಷ್ಟಾಧಿಕಾರಿಗಳು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ರಸಂಶಿಸಿದ್ದಾರೆ.