ವಾದ ಮಾಡೋವಾಗಲೇ ಹಿರಿಯ ವಕೀಲ ಸಾ*ವು..!!

ವಾದ ಮಾಡೋವಾಗಲೇ ಹಿರಿಯ ವಕೀಲ ಸಾ*ವು..!!

ವೀರಮಾರ್ಗ ನ್ಯೂಸ್ : ಕೊಪ್ಪಳ ಜಿಲ್ಲೆ :ಕುಷ್ಟಗಿ ಸೀನಿಯರ್ ಸಿವಿಲ್ ನ್ಯಾಯಾಲಯದಲ್ಲಿ ವಾದ ಮಾಡುವಾಗಲೇ ಕುಸಿದು ಬಿದ್ದು ವಕೀಲರೊಬ್ಬರು ಮೃ*ತಪಟ್ಟಿರುವ ಘಟನೆ ನಡೆದಿದೆ.

ಇಂದು ಬೆಳಗಿನ ಜಾವ ಆಸ್ತಿ ವಿಚಾರವಾಗಿ ವಾದ ಮಾಡೋವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ವಕೀಲ ನಿಂಗಪ್ಪ (48) ಮೃ*ತಪಟ್ಟವರು.

ನಿಂಗಪ್ಪ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ನಿವಾಸಿ. ಇಂದು ಬೆಳಗಿನ ಜಾವ ಆಸ್ತಿ ವಿಚಾರದ ಕೇಸ್‌ನಲ್ಲಿ ವಾದ ಮಾಡೋವಾಗಲೇ ಕುಸಿದು ಬಿದ್ದಿದ್ದಾರೆ. ಈ ವೇಳೆ ವಕೀಲಯರನ್ನು ಕುಷ್ಟಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಹಿರಿಯ ವಕೀಲ ನಿಂಗಪ್ಪ ಮೃ*ತರಾಗಿದ್ದಾರೆ.

ಈ ಹಿಂದೆ ವಕೀಲರಿಗೆ ಹೃದಘಾತವಾಗಿತ್ತು, ಸ್ಟಂಟ್ ಕೂಡಾ ಅಳವಡಿಕೆ ಮಾಡಿದ್ರು. ಇಂದು ವಾದ ಮಾಡೋವಾಗಲೇ ಮತ್ತೊಮ್ಮೆ ಹೃದಯಾಘಾತವಾಗಿದೆ.