ಹಾವೇರಿ ಜಿಲ್ಲಾ ಅಧಿಕಾರಿಗಳೇ DHO ಡಿ ಎಚ್ ಓ ನಿದ್ದೆಗೆ ಜಾರಿದ್ದು ಸಾಕು ಎದ್ದಿ ನೋಡಿ ನಕಲಿ ವೈದ್ಯರ ಹಾವಳಿ…
ಇನ್ನೂ ಕಣ್ಮುಚ್ಚಿ ಕುಳಿತರೆ ಬಡ ಜೀವಗಳ ಜೊತೆ ಚೆಲ್ಲಾಟ ಮುಂದುವರಿಯುತ್ತದೆ….
ಬಡವರ ಸಾವಿಗೂ ಮುನ್ನ ಎಚ್ಚೆತ್ತುಕೊಳ್ಳಿ ಅಧಿಕಾರಿಗಳೇ….
ಆಗಿದ್ದು ಮಾತ್ರ PUC ಜಸ್ಟ್ ಪಾಸ್
ಚಂದಾಪುರ ಗ್ರಾಮಕ್ಕೆ ಈ ಡಾಕ್ಟರಪ್ಪನೇ ಫೇಮಸ್.
ಈತನಿಗೆ ಕೆಪಿಎಂಈ ನೋಂದಣಿ ಬೇಡ್ವಂತೆ ಅಧ್ಯಕ್ಷರ ರುಜು ಇರುವ ಪಂಚಾಯತ್ ಲೆಟರ್ ಅಷ್ಟೇ ಸಾಕಂತೆ…….
ಅಷ್ಟಕ್ಕೂ ಪಂಚಾಯತ್ ಕಡೆಯಿಂದ ಲೆಟರ್ ಕೊಟ್ಟರೆ ಆರೋಗ್ಯ ಇಲಾಖೆಯಾದರೂ ಏನಕ್ಕೆ ಎಂಬ ಯಕ್ಷ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ…..
ಹೌದು ಇತ್ತೀಚಿನ ದಿನಮಾನದಲ್ಲಿ ನಕಲಿ ವ್ಯದ್ಯರ ಹಾವಳಿ ಶಿಗ್ಗಾoವ ತಾಲ್ಲೂಕಿನಲ್ಲಿ ಹೆಚ್ಚಾಗಿದ್ದು ಆರೋಗ್ಯ ಅಧಿಕಾರಿಗಳು ಮಾತ್ರ ಗಪ್ಪ ಚುಪ್ಪ......
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಶಿಗ್ಗಾoವ ತಾಲ್ಲೂಕಿನ ಚಂದಾಪುರ ಗ್ರಾಮದಲ್ಲಿ PUC ಜಸ್ಟ್ ಪಾಸ್ ಮಾಡಿರುವ ಮಹೇಶ ಪಾಟೀಲ್ ಎಂಬ ಭೂಪ ಸುಮಾರು 20 ವರ್ಷದಿಂದ ಬಡಜನರ ಜೀವನದಲ್ಲಿ ಚಲ್ಲಾಟ ಆಡುತ್ತ ಸ್ವಯಂ ಪ್ರೇರಿತ ಡಾಕ್ಟರ್ ಎಂದು ಹೇಳಿಕೊಂಡು ಆಸ್ಪತ್ರೆಗೇ ಬಂದ ರೋಗಿಗಳಿಗೆ ತನ್ನ ಮನಸಿಗೆ ತಿಳಿದ ಹಾಗೇ ಇಂಜೆಕ್ಷನ್ ಮಾಡುತ್ತಾ ಬಂದಿದ್ದು ಇದನ್ನು ಕಂಡು ಕಾಣದಂತೆ ಅಧಿಕಾರಿಗಳಂತೂ ಮೂಕ ಜಾಣರಂತೆ ವರ್ತಿಸುತ್ತಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿ ಕೊಡುತ್ತಿದೆ…..
ಇಷ್ಟಾದರೂ ಸಹ ಆರೋಗ್ಯ ಇಲಾಖೆ ಜಿಲ್ಲಾ ಅಧಿಕಾರಿಗಳು ಹಾಗೂ ತಾಲೂಕು ಅಧಿಕಾರಿಗಳು ಗಪ್ಪ ಚುಪ್ಪ ಇರುವದು ಯಾಕೇ ಅಂತ ಪ್ರಶ್ನೆ ಯಾಗಿ ಉಳಿದಿದೆ.
ಈತನಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಕೆಲವು ಸದಸ್ಯರ ಕೃಪ ಕಟಾಶಿರ್ವಾದ ಇರುವುದಂತೂ ಅಕ್ಷರಶಃ ನಿಜ…..
ಇನ್ನಾದರೂ ತಾಲೂಕಿನಾದ್ಯಂತ ನಡೆಯುತ್ತಿರುವ ನಕಲಿ ವ್ಯದ್ಯರ ಹಾವಳಿ ತಡೆಗಟ್ಟುತ್ತಾರೋ ಇಲ್ಲೋ ಎಂದು ಕಾದು ನೋಡಬೇಕಾಗಿದೆ.....
ವರದಿ : ಹನುಮಂತ.