ನುಡಿದಂತೆ ನಡೆಯುವ ಕಾಂಗ್ರೆಸ್ ಬೆಂಬಲಿಸಿ ಸಚಿವ ಈಶ್ವರ ಖಂಡ್ರೆ.

ಹೊಸಕೊಳೇನಹಳ್ಖಿಯಲ್ಲಿ ಸಮರ್ಥ್ ಪರ ಮತಯಾಚನೆ
ಬಡವರ ಪರವಾದ, ನುಡಿದಂತೆ ನಡೆಯುವ ಕಾಂಗ್ರೆಸ್ ಬೆಂಬಲಿಸಿ; ಸಚಿವ ಈಶ್ವರ ಖಂಡ್ರೆ

ವೀರಮಾರ್ಗ ನ್ಯೂಸ್ : ಮಾಯಕೊಂಡ : ಬಡವರ ಅಭ್ಯುದಯಕ್ಕೆ ಗ್ಯಾರಂಟಿ ನೀಡಿ, ರಾಜ್ಯದ ಅಭಿವೃದ್ದಿಗೂ ಶ್ರಮಿಸುತ್ತಿರುವ ಕಾಂಗ್ರೆಸ್ ಬೆಂಬಲಿಸಬೇಕು, ಉದ್ಯಮಿಗಳ ಪರವಾಗಿರುವ ಬಿಜೆಪಿ ತಿರಸ್ಕರಿಸಬೇಕು, ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಕರೆನೀಡಿದರು. ಹೊಸ ಕೊಳೇನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು‌ ಮಾತನಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಗೃಹಲಕ್ಷ್ಮೀ, ಅನ್ನಭಾಗ್ಯ, ಉಚಿತ ಬಸ್ ಪ್ರಯಾಣ, ಜಾರಿ ಮಾಡಿದೆವು. ನುಡಿದಂತೆ ನಡೆದು ಪ್ರಾಮಾಣಿಕತೆ ಮೆರೆದೆವು.
ಮೊದಲು ವಿರೋಧ ಪಕ್ಷಗಳು ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಎಂದು ಬೊಬ್ಬಿಟ್ಟಿದ್ದರು. ನಾವೂ ಕೊಟ್ಟ ಮಾತಿನಂತೆ ನಡೆದೆವು‌. ಗ್ಯಾರಂಟಿಯಿಂದ ಸರ್ಕಾರ ದಿವಾಳಿಯಾಗಿಲ್ಲ, ಅಭಿವೃದ್ಧಿ ಕೆಲಸ ಮತ್ತು ಗ್ಯಾರಂಟಿ ಜತೆಜತೆಯಾಗಿ ಸಾಗಿತ್ತಿವೆ. ಗ್ಯಾರಂಟಿಯಿಂದ ಒಂದು ಕೋಟಿ ಕುಟುಂಬ ಬಡತನ ರೇಖೆಯಿಂದ ಹೊರಬಂದು, ಹಣದ ಹರಿವು, ಹೆಚ್ವಿ ಉದ್ಯೋಗ ಸೃಷ್ಟಿಯಾಗಿದೆ. ಗ್ಯಾರಂಟಿ ಉಳಿವಿಗೆ ಕಾಂಗ್ರೆಸ್ಗೆ ಮತ ನೀಡಿ
ಎಂದು ಪ್ರತಿಪಾದಿಸಿದರು.


ದಾವಣಗೆರೆ ವಿದ್ಯಾಕೇಂದ್ರವಾಗಿ ಬೆಳಸಿದವರೇ ಶಾಮನೂರು ಶಿವಶಂಕರಪ್ಪ. ಕೊರೊನಾ ಕಾಲದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಉಚಿತ ಲಸಿಕೆ ಕೊಡಿಸಿ ಜನರ ಪ್ರಾಣ ಉಳಿಸಿದರು. ಎಲ್ಲಾ ಜನಾಂಗಗಳನ್ನು ಜತೆಗೆ ಕೊಂಡೊಯ್ದ ಶಿವಶಂಕರಪ್ಪ ಸೇವೆ ಜನ‌ ಇಂದಿಗೂ ಸ್ಮರಿಸುತ್ತಾರೆ, ಎಂದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಸಿ. ನಿಂಗಪ್ಲ, ಕಾಂಗ್ರೆಸ್ ಪ್ರತೀ ಮನೆಮನೆಗೂ ಆರು ಸಾವಿರ ನೆರವು ನೀಡಿದೆ. ಬಡವರ ಸಂಕಷ್ಟಕ್ಕೆ ನೆರವಾಗಿದೆ, ಎಂದು ಬಣ್ಣಿಸಿದರು.
ಮುಖಂಡ ನಾಗರಾಜ್, ಇದು‌ ಹಿಂದಿನಿಂದ ಬಿಜೆಪಿ ಗ್ರಾಮ. ಅಭಿವೃದ್ಧಿಗಾಗಿ‌ ಮತ ಚಲಾಯಿಸುತ್ತೇವೆ. ಊರು ಸ್ಥಳಾಂತರಗೊಂಡರೂ ಕೆಲ ಜಾಗಗಳು‌ ಖಾತೆಯಾಗಿಲ್ಲ ಸರಿಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಒಪ್ಪಿದ್ದಾರೆ. ನಾವು ಐದು ಕೋಟಿ ಕೆಲಸ‌ ಕೇಳಿದರೆ ಶಾಮನೂರು ಶಿವಶಂಕರಪ್ಪ ಏಳು ಕೋಟಿ ಅನುದಾನ ಕೊಟ್ಟರು, ಎಂದು ಸ್ಮರಿಸಿದರು.
ಬಸವಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ ಶಾಮನೂರು ಶಿವಶಂಕರಪ್ಪ ಅವರ ಋಣ ತೀರಿಸಲು, ಸಮರ್ಥ್ ಅವರನ್ನು ಗೆಲ್ಲಿಸಬೇಕು ಎಂದರು.
ಗುತ್ತೂರು ಹಾಲೇಶ್ ಗೌಡರು ಮಾತನಾಡಿದರು.

ಪಂಚಮಸಾಲಿ ಸಮಾಜದ ಮುಖಂಡರಾದ ಗೋಪನಾಳ್ ಅಶೋಕ್, ಚಿಕ್ಕಮೇಗಳಗೆರೆ ಚನ್ನಬಸಪ್ಪ, ವರ್ತಕ ಶಂಕರ್, ಮಾಯಕೊಂಡ ಜಗದೀಶ್, ಪಿ.ದಯಾನಂದ, ಕುಕ್ಕವಾಡ ಗ್ರಾ. ಪಂ. ಮಾಜಿ ಅಧ್ಯಕ್ಷರಾದ ಕರಿಯಪ್ಪ, ವನಜಾಕ್ಷಮ್ಮ ಸ್ವಾಮಿ ಲ, ನಾಗರಾಜ್, ಮಾಜಿ‌ ಉಪಾಧ್ಯಕ್ಷ ಆಂಜಿನಪ್ಪ, ವಕೀಲ ರೇಣುಕಪ್ಪ, ನಾಗರಸನಹಳ್ಳಿ ಪ್ರಕಾಶ್, ವಿರುಪಣ್ಣ, ಮಹೇಶ್ವೆರಪ್ಪ ಮತ್ತಿತರರು ಇದ್ದರು.