ರಾಮ ಎನ್ನುವ ಎರಡೇ ಅಕ್ಷರದಲ್ಲಿ ಮಹತ್ವ ಇದೆ.

ಶ್ರೀ ಮಂಜಯ್ಯ ಚಾವಡಿ. ಹೆಸರಾಂತ ಏಲಕ್ಕಿ ನಾಡು ಎಂದೇ ಕರೆಸಿಕೊಂಡಂತ ಹಾವೇರಿ ಜಿಲ್ಲಾ ರಾಣೆಬೆನ್ನೂರು ತಾಲೂಕಿನ ಸಣ್ಣ ಸಂಗಾಪುರದ ಪುಟ್ಟ ಗ್ರಾಮದಲ್ಲಿ ಹುಟ್ಟಿದಂತಹ ಶ್ರೀ ಮಂಜಯ್ಯ ಚಾವಡಿ, ಇವರು ವ್ಯಕ್ತಿ ಅನ್ನುವುದಕ್ಕಿಂತ ಮೊದಲು ಒಂದು ಶಕ್ತಿ ಅಂತ ನಾವು ಅನ್ನಬಹುದು ಯಾಕೆಂದರೆ ಶ್ರೀರಾಮನ ಭಕ್ತರು ಸಮಾಜಸೇವಕ ಬಡವರಬಂಧು ಬಡ ಮಕ್ಕಳ ವಿದ್ಯಾ ಅಭ್ಯಾಸಕ್ಕಾಗಿ ಪ್ರೋತ್ಸಾಹಿಸುತ್ತಾ ಶ್ರೀ ರಾಮನ ನೆನೆದು ಮುಂದೆ ಸಾಗುವಂತ ಶಕ್ತಿ,

ಓದುವ ಬಾಂಧವರೇ,,,, ಮಂಜಯ್ಯ ಚಾವಡಿ ಅವರಿಗೆ ನಾನು ಫೋನ್ ಮಾಡಿದಾಗ ಅವರ ಹೃದಯದಲ್ಲಿ ಮನೆ ಮಾಡಿ ಪೂಜಿಸಿ ಶ್ರೀರಾಮನ ಬಗ್ಗೆ ಅರಿತು ವಿವರವಾಗಿ ಮಾತನಾಡಿದಂತಹ ವಿಷಯವನ್ನೇ. ಚಿಕ್ಕದಾಗಿ ಚೊಕ್ಕವಾಗಿ ಅರ್ಥ ಆಗುವ ರೀತಿಯಲ್ಲಿ ಫೋನ್ ಮುಖಾಂತರ ವೀರಮಾರ್ಗ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರ ಹತ್ತಿರ ಮಾತನಾಡಿದಂತ ವಿಷಯವನ್ನೇ ನಾನು ನಿಮ್ಮ ಮುಂದೆ ಇಡಲು ಇಚ್ಚಿಸಿದ್ದೇನೆ.

ಶ್ರೀರಾಮನವಮೀ.

ವೀರಮಾರ್ಗ ನ್ಯೂಸ್ : ರಾಮ್ ಎನ್ನುವ ಎರಡು ಅಕ್ಷರದಲ್ಲಿ ಮಹತ್ವ ಪೂರ್ಣವಾದ ಅರ್ಥವಿದೆ ರಾ ಎಂದರೆ ಬೆಳಕು, ಮ ಎಂದರೆ ಒಳಗೆ. ಅಂದರೆ ನಮ್ಮೊಳಗಿನ ದೈವಿಕ ಬೆಳಕು ರಾಮ. ಹಿಂದೂ ಧರ್ಮದಲ್ಲಿ ಶ್ರೀ ರಾಮನವಮಿ ಎಂದರೆ ಹಬ್ಬದ ಸಂಭ್ರಮ. ಚೈತ್ರ ಮಾಸದ ಒಂಭತ್ತನೇ ದಿನ, ಅಂದರೆ ವರ್ಷದ (ಸಂವತ್ಸರದ) ಮೊದಲ ತಿಂಗಳಿನಲ್ಲಿ ಬರುವ ಹಬ್ಬ ಮಹಾವಿಷ್ಣುವಿನ ಏಳನೇಯ ಅವತಾರವಾದ ಶ್ರೀರಾಮನು ಜನಿಸಿದ ನವಮಿಯಂದು ಈ ಹಬ್ಬ ಆಚರಿಸಲಾಗುತ್ತದೆ.

ಶ್ರೀರಾಮನದು ಕರ್ಕಾಟಕ ರಾಶಿ, ಕರ್ಕಾಟಕ ಲಗ್ನ

ಪುಷ್ಯಾ ನಕ್ಷತ್ರದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಕರ್ಕಾಟಕ ಲಗ್ನದಲ್ಲಿ ಅಯೋಧ್ಯೆಯಲ್ಲಿ ರಾಮನು ಜನಿಸಿದನೆಂಬ ನಂಬಿಕೆ ಇದೆ. ಈ ಬಾರಿ ರಾಮನವಮಿಯನ್ನು ಮಾರ್ಚ್ 27 ಶುಕ್ರವಾರದಂದು ಆಚರಿಸಲಾಗುತ್ತದೆ.

ವಿಷ್ಣುವಿನ ಏಳನೇ ಅವತಾರವಾಗಿ ಶ್ರೀರಾಮನ ಜನನ

ಶ್ರೀರಾಮನು ಜನಿಸಿದ ದಿನವೆಂದು ಆಚರಿಸಲಾಗುವ ಹಬ್ಬ ಶ್ರೀರಾಮನವಮಿ. ಅಯೋಧ್ಯೆಯ ರಾಜ ದಶರಥ ಹಾಗೂ ಕೌಸಲ್ಯಯ ಪುತ್ರನಾಗಿ ಮಹಾವಿಷ್ಣುವಿನ ಏಳನೇ ಅವತಾರವಾಗಿ ಶ್ರೀರಾಮನು ಜನಿಸುತ್ತಾನೆ. ಹಿಂದೂ ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ನಾಲ್ಕು ಯುಗಗಳಲ್ಲಿ

ಒಂದಾದ ತ್ರೇತಾಯುಗದಲ್ಲಿ ರಾಮನು ಜನಿಸಿದನು. ಈ ದಿನ ಶ್ರೀರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ಭೂಮಿಯ ಮೇಲೆ ದೈವೀಕ ಶಕ್ತಿಯು ನೆಲೆಸುತ್ತದೆ.

ಶ್ರೀರಾಮ ನವಮಿಯಂದು ಶ್ರೀರಾಮ ತತ್ವವು ಸಾವಿರ ಪಟ್ಟು ಅಧಿಕ…!

ಧಾರ್ಮಿಕ ನಂಬಿಕೆಯ ಪ್ರಕಾರ ದೇವತೆಗಳು ಹಾಗೂ ದೇವರುಗಳು ಅವತಾರ ತಾಳಿದ ದಿನದಂದು ಭೂಮಿಯ ಮೇಲೆ ಅವರ ದೈವೀ ತತ್ವಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತ ವಾಗಿರುತ್ತದೆ. ಶ್ರೀರಾಮ ನವಮಿ ಯಂದು ಶ್ರೀರಾಮತತ್ವವು ಎಂದಿ ಗಿಂತಲೂ ಸಾವಿರಪಟ್ಟು ಹೆಚ್ಚು ಭೂಮಿಯಲ್ಲಿ ಕಾರ್ಯನಿರತವಾಗಿರುತ್ತದೆ. ಹೀಗಾಗಿ ಈ ದಿನ ರಾಮನಾಪ ಜಪ, ಶ್ರೀರಾಮನ ಉಪಾಸನೆಗಳನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದೆಂದು ಹೇಳಲಾಗುತ್ತದೆ.

ಶ್ರೀ ರಾಮ ಜಯ ರಾಮ ಜಯ ಜಯ ರಾಮ.