ಶ್ರೀರಾಮ ನವಮಿ
ವೀರಮಾರ್ಗ ನ್ಯೂಸ್ : ದೇವತೆಗಳು ಮತ್ತು ಅವತಾರಗಳ ಜನ್ಮತಿಥಿಯಂದು ಭೂಮಿಯ ಮೇಲೆ ಅವರ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ಶ್ರೀರಾಮತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ।’ ನಾಮಜಪ, ಹಾಗೆಯೇ ಶ್ರೀರಾಮನ ಇತರ ಉಪಾಸನೆಗಳನ್ನು ಮಾಡುವುದರಿಂದ ಭಾವಪೂರ್ಣವಾಗಿ ಶ್ರೀರಾಮತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆಯಲು ಸಹಾಯವಾಗುತ್ತದೆ.
ಶ್ರೀರಾಮನವಮಿಯ ಮಹತ್ವ
ತ್ರೇತಾಯುಗದಲ್ಲಿ ರಾಮನ ಜನ್ಮವಾದಾಗ ಕಾರ್ಯನಿರತವಾಗಿದ್ದ ಶ್ರೀವಿಷ್ಣುವಿನ ಸಂಕಲ್ಪ, ತ್ರೇತಾಯುಗದಲ್ಲಿನ ಅಯೋಧ್ಯಾವಾಸಿಗಳ ಭಕ್ತಿ ಭಾವ ಮತ್ತು ಪೃಥ್ವಿಯಲ್ಲಿನ ಸಾತ್ವಿಕ ವಾತಾವರಣದಿಂದಾಗಿ ಪ್ರಭು ಶ್ರೀರಾಮನ ಜನ್ಮದಿಂದ ಶೇ. ೧೦೦ ರಷ್ಟು ಪರಿಣಾಮವಾಗಿತ್ತು. ಅನಂತರ ಪ್ರತಿವರ್ಷ ಬರುವಂತಹ ಚೈತ್ರ ಶುಕ್ಲ ನವಮಿಗೆ ಬ್ರಹ್ಮಾಂಡದಲ್ಲಿನ ವಾತಾವರಣದಲ್ಲಿ ರಾಮತತ್ತ್ವವು ಪ್ರಕ್ಷೇಪಿಸಿ ವಾತಾವರಣವನ್ನು ಸಾತ್ವಿಕ ಮತ್ತು ಚೈತನ್ಯಮಯವನ್ನಾಗಿಸಲು ವಿಷ್ಣುಲೋಕದಿಂದ ಶ್ರೀರಾಮತತ್ತ್ವಯುಕ್ತ ವಿಷ್ಣುತತ್ತ್ವವು ಭೂಲೋಕದ ದಿಕ್ಕಿನತ್ತ ಪ್ರಕ್ಷೇಪಿತವಾಗುತ್ತದೆ ಮತ್ತು ದಿನ ಶ್ರೀರಾಮನ ಅಂಶಾತ್ಮಕ ಜನ್ಮವಾಗುತ್ತದೆ. ಇದರ ಪರಿಣಾಮ ಇಡೀ ವರ್ಷವಿದ್ದು ಬ್ರಹ್ಮಾಂಡದಲ್ಲಿ ರಾಮ ತತ್ತ್ವಯುಕ್ತ ಸಾತ್ವಿಕತೆ ಮತ್ತು ಚೈತನ್ಯದ ಪ್ರಕ್ಷೇಪಣೆಯಾಗುತ್ತದೆ. ರಾಮ ತತ್ತ್ವಯುಕ್ತ ಸಾತ್ವಿಕತೆ ಮತ್ತು ಚೈತನ್ಯವನ್ನು ಬ್ರಹ್ಮಾಂಡದಲ್ಲಿನ ಪ್ರತಿಯೊಂದು ಸಜೀವ ಮತ್ತು ನಿರ್ಜೀವ ವಸ್ತುಗಳು ಗ್ರಹಿಸಿಕೊಳ್ಳುತ್ತವೆ ಮತ್ತು ಅದರಿಂದ ಅವುಗಳಿಗೆ ತಮ್ಮ ಕಾರ್ಯವನ್ನು ಒಳ್ಳೆಯ ರೀತಿಯಿಂದ ಮಾಡಲು ಸಾಧ್ಯವಾಗುತ್ತದೆ.
ರಾಮಾಯಣದಲ್ಲಿನ ಕೆಲವು ವಿಶೇಷ ಪ್ರಸಂಗಗಳ,,ಶ್ರೀರಾಮನಲ್ಲಿ ವಿರಾಟನ ಸಾಮರ್ಥ್ಯವಿತ್ತು !
ಶೂರ್ಪಣಖಿಯು ಅವಳ ಸಹೋದರ ಖರ ಮತ್ತು ದೂಷಣ ಹಾಗೂ ೧೦ಸಾವಿರ ಸೈನ್ಯದೊಂದಿಗೆ ಬಂದಾಗ ರಾಮನು ಲಕ್ಷ್ಮಣನಿಗೆ, ‘ನೀನು ಸೀತೆಯನ್ನು ನೋಡಿಕೋ! ಈ ಸೈನ್ಯವನ್ನು ಸೋಲಿಸಲು ನಾನೊಬ್ಬನೇ ಸಾಕು’ ಎಂದು ಹೇಳಿದನು. ಇದರಿಂದ ರಾಮನ ಶೌರ್ಯದ ಕಲ್ಪನೆ ಬರುತ್ತದೆ. ಇಲ್ಲಿ ರಾಮನ ಮನಸ್ಸಿನ ವೈಶಾಲ್ಯವು ತಿಳಿಯುತ್ತದೆ. ರಾಮನ ಮನಸ್ಸು ವಿಶ್ವವ್ಯಾಪಕವಾಗಿತ್ತು. ಅವನು ವಿರಾಟನ (ಈಶ್ವರನ) ಅಂಶವಾಗಿದ್ದನು. ಈಶ್ವರನ ಸಾಮರ್ಥ್ಯವು ಅವನಲ್ಲಿ ಬಂದಿತ್ತು. ಪೃಥ್ವಿ ಮತ್ತು ಪೃಥ್ವಿಯ ಮೇಲಿನ ಸೈನ್ಯವು ಅವನಿಗೆ ನಗಣ್ಯವಾಗಿತ್ತು.
ಪ್ರತಿಯೊಬ್ಬರೂ ಲಕ್ಷ್ಮಣರಾಗಬೇಕು !
ಲಕ್ಷ್ಮಣನು ವನವಾಸದಲ್ಲಿದ್ದಾಗ ರಾಮ ಮತ್ತು ಸೀತೆಯರ ಹಿಂದಿನಿಂದ ಹೋಗುತ್ತಿದ್ದನು. ಲಕ್ಷ್ಮಣನಿಗೆ ರಾಮನ ಬಗ್ಗೆ ಬಹಳ ಪ್ರೇಮವಿತ್ತು. ರಾಮನು ಯಾವಾಗಲೂ ತನ್ನ ಎದುರು ಇರಬೇಕೆಂದು ಅನಿಸುತ್ತಿತ್ತು. ಲಕ್ಷ್ಮಣನು ಯಾವಾಗಲೂ ರಾಮನಾಮವನ್ನು ಜಪಿಸುತ್ತಿದ್ದನು, ಅವನು ರಾಮನನ್ನು ಭಜಿಸುತ್ತಿದ್ದನು. ಇಂತಹ ಈ ಭಕ್ತನು ಮಾಯೆಯ, ಅಂದರೆ ಸೀತೆಯ ಮುಖವನ್ನು ಯಾವತ್ತೂ ನೋಡಲಿಲ್ಲ. ಅವನು ಅವಳ ಪದಕಮಲಗಳ ಕಡೆಗೆ ನೋಡಿ ನಡೆಯುತ್ತಿದ್ದನು. ಅದರಿಂದ ಲಕ್ಷ್ಮಣನ ಮೇಲಿನ ಮಾಯೆಯ ಹಿಡಿತವು ಕಡಿಮೆಯಾಯಿತು ಮತ್ತು ‘ಸೀತಾ-ರಾಮ-ಲಕ್ಷ್ಮಣ’ ಈ ಶಬ್ದವು ನಿರ್ಮಾಣವಾಯಿತು.
ರಾಮಭಕ್ತಿಯ ಸಾಮರ್ಥ್ಯ
ಒಮ್ಮೆ ಅಂಗದನು ರಾಮನ ದೂತನಾಗಿ ರಾವಣನ ರಾಜ್ಯಸಭೆಗೆ ಹೋದನು, ಆಗ ರಾವಣನು ತನ್ನ ಪ್ರಶಂಸೆಯನ್ನು ಮಾಡಿಕೊಂಡು ಅವನನ್ನು ಹೆದರಿಸಿದನು. ಆಗ ಅಂಗದನು ‘ಎಲೈ ರಾವಣನೇ, ಇಲ್ಲಿಯವರೆಗೆ ನಾನು ನಿನ್ನ ಶೌರ್ಯದ ಬಗ್ಗೆ ಕೇಳಿದೆ. ಈಗ ನಾನು ನನ್ನ ಕಾಲನ್ನು ಭೂಮಿಯ ಮೇಲೆ ಇಡುತ್ತೇನೆ, ನೀನು ಅಥವಾ ನಿನ್ನ ಸೈನಿಕರು ಅದನ್ನು ಎತ್ತಿ ತೋರಿಸಬೇಕು ಅಂದರೆ ನಾನು ನಿನ್ನ ಮಾತುಗಳನ್ನು ನಿಜವೆಂದು ನಂಬುತ್ತೇನೆ’ ಎಂದನು. ಅಂಗದನು ‘ಜೈ ಶ್ರೀರಾಮ’ ಎಂದು ತನ್ನ ಕಾಲನ್ನು ಭೂಮಿಯ ಮೇಲೆ ಇಟ್ಟನು. ಆಶ್ಚರ್ಯದ ಸಂಗತಿಯೆಂದರೆ ರಾವಣ ಅಥವಾ ಅವನ ಎಲ್ಲ ಸೈನಿಕರಿಂದ ಅಂಗದನ ಕಾಲನ್ನು ಅಲುಗಾಡಿಸಲೂ ಆಗಲಿಲ್ಲ. ಇದೇ ರಾಮಭಕ್ತಿಯ ಪರಿಣಾಮವಾಗಿದೆ!