ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು : ಅಂದಿನ ಸ್ತ್ರೀ ಸಮಾನತೆ ಇಲ್ಲದ ಕಾಲದಲ್ಲಿ
ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ತಮ್ಮ ಮಹಿಳೆಯರಿಗೆ ಅಂದೆ ಸಮಾನತೆ ಸಾರಿ, ಮಹಿಳೆಯರಿಗೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಮುಂದಾದ ಮಹಾನ್ ಸಂತರಾಗಿದ್ದರು ಎಂದು ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮಿಗಳವರು ನುಡಿದರು.
ಅವರು ರವಿವಾರ ಕಾಕಿ ಜನಸೇವಾ ಸಂಸ್ಥೆ ಸಮುದಾಯ ಭವನದಲ್ಲಿ ಜಿಲ್ಲಾ ಜೆಡಿಎಸ್ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ 2026- ವಿಶ್ವ ಮಹಿಳಾ ದಿನಾಚರಣೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಸ್ತ್ರೀಯರನ್ನು ಪೂಜಿಸುವ ಭಾರತೀಯ ಪರಂಪರೆಯಲ್ಲಿ, ಆಧುನಿಕತೆಯ ಜೀವನ ಬದುಕು ನಿತ್ಯವೋ ಅವಳ ಮಾನ, ಪ್ರಾಣ, ಹರಣ ನಡೆಯುತ್ತಿರುವುದು ಅತ್ಯಂತ ವಿಷಾಧಕರ ಸಂಗತಿಯಾಗಿದೆ ಎಂದರು.
ಸಮಾಜದಲ್ಲಿ ಸಮಾನತೆಗಾಗಿ ಪ್ರತಿಯೊಬ್ಬ ಮಹಿಳೆನನ್ನ ಸಾಧನೆಯ ಜೊತೆಗೆ ಎಲ್ಲಾ ಮಹಿಳಾಕುಲದ ಅಭಿವೃದ್ಧಿಗಾಗಿ ಮತ್ತು ಆರ್ಥಿಕ ಸಮಾನತೆಗಾಗಿ ಒಂದಾಗಿ ಒಗ್ಗಟ್ಟಾಗಿ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದು ಶ್ರೀಗಳು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಹುಬ್ಬಳ್ಳಿ ಧಾರವಾಡ ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ ಅವರು, ಮಹಿಳೆಯರು ತಮ್ಮ ಹಕ್ಕನ್ನು ಪ್ರತಿಪಾದಿಸುವಾಗ, ತಮ್ಮ ತಂದೆ, ತಾಯಿ, ಅಕ್ಕ,ತಂಗಿ ಬಂಧು ಬಳಗವನ್ನು ಸ್ಮರಿಸಬೇಕು. ಮಕ್ಕಳ ಉಜ್ಜಲ ಭವಿಷ್ಯಕ್ಕಾಗಿ ತಮ್ಮನ್ನು ಹೆತ್ತವರು ಕಷ್ಟ ದುಃಖ ಎದುರಿಸಿ ಪಾಲನೆ ಪೋಷಣೆ ಮಾಡಿರುತ್ತಾರೆ. ಇಂದಿನ ಬದುಕು ಅವರನ್ನು ಬೀದಿಗೆ ತಳ್ಳುವ ಮಕ್ಕಳು ಕಾಣುತ್ತಿದ್ದೇವೆ ಇದು ಸಂಸ್ಕೃತಿಗೆ ಮಾರಕವಾಗಿದೆ. ಮಹಿಳೆಯರು ತಮ್ಮ ಮಕ್ಕಳನ್ನು ಸಂಸ್ಕಾರಯುತ ಶಿಕ್ಷಣ ನೀಡಿ ಉತ್ತಮ ಭವಿಷ್ಯ ಕಲ್ಪಿಸಲು ಮುಂದಾಗಬೇಕು ಎಂದರು.
ಇಂದಿನ ಸ್ವಾರ್ಥ ರಾಜಕಾರಣದಲ್ಲಿ ಸಾಮಾಜಿಕ ಕಾಳಜಿಯುಳ್ಳ ರಾಜಕಾರಣಿಗಳ ಅಗತ್ಯವಿದೆ ಈ ನಿಟ್ಟಿನಲ್ಲಿ ಮಂಜುನಾಥಗೌಡ ಶಿವಣ್ಣನವರ, ತಮ್ಮ ತಂದೆ ತಾಯಿ ಬಂಧು ಬಳಗ ಒದಗಿಸಿದ ಸಂಸ್ಕಾರದಲ್ಲಿ ಅತ್ಯುತ್ತಮ ಕಾರ್ಯಗಳು ಮಾಡುತ್ತಿರುವುದು ನಾಡಿನ ಹೆಮ್ಮೆಯ ಸಂಗತಿ ಎಂದು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಅವರು, ಕುಟುಂಬದ ಪರಂಪರೆಯಂತೆ ತಾವು ಇಂತಹ ಕಾರ್ಯಕ್ರಮಗಳ ಮೂಲಕ ತಮ್ಮ ಕುಟುಂಬವು ಆತ್ಮ ಸಂತೋಷವನ್ನು ಪಡೆಯುತ್ತಿದ್ದೇವೆ. ರಾಜಕೀಯ ದೂರದೃಷ್ಟಿ ಇದಲ್ಲ, ರಾಜಕೀಯ ಬೆಳೆಸುವುದು ಸರಿಯಲ್ಲ. ತಂದೆ -ತಾಯಿ ತಮಗೆ ನೀಡಿದ ಸಂಸ್ಕಾರ ಇದಾಗಿದೆ. ಪ್ರತಿ ವರ್ಷ ಮಹಿಳಾ ದಿನಾಚರಣೆ ಮೂಲಕ ಸಾಧಕರನ್ನು ಗುರುತಿಸಿ, ಗೌರವಿಸುವ ಸಂಪ್ರದಾಯ ನಮ್ಮದಾಗಿದೆ ಎಂದರು.
ಹುಬ್ಬಳ್ಳಿ ಧಾರವಾಡ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಪೂರ್ಣಿಮಾ ಎಂ. ಸವದತ್ತಿ, ಚಂದ್ರಕಲಾ ಕಟ್ಟಿಮನಿ, ಉಷಾ ಜಾಡಮಲಿ,
ರಾಧಾ ಅಂಗಡಿ ಮತ್ತಿತರರು ಮಾತನಾಡಿದರು.
16ನೇ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಮಂಜುನಾಥ್ ಶ್ರೀಮತಿ ಶಶಿಕಲಾ ಗೌಡ ಶಿವಣ್ಣನವರ ದಂಪತಿಗಳನ್ನು ಹಣ್ಣು ವ್ಯಾಪಾರಸ್ಥರ ಮತ್ತು ಜೆಡಿಎಸ್ ಮಹಿಳಾ ಘಟಕದ ವತಿಯಿಂದ ಹೃದಯಸ್ಪರ್ಶಿ ಸನ್ಮಾನಿಸಿ ಅಭಿನಂದಿಸಿದರು.
ವೇದಿಕೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಶಕುಂತಲಾ ನೀರಲಗಿ, ಚೆನ್ನಮ್ಮ ಗೌಡಶಿವಣ್ಣನವರ, ಲಲಿತಾ ನೀರಲಗಿ, ಪವಿತ್ರಾ ಸಂಕೀನಮಠ, ಸಿದ್ದಪ್ಪ ಗುಡಿಮುಂದ್ಲರ, ಲಿಂಗರಾಜ ಹೊನ್ನಾಳಿ, ಸಿದ್ದು ಪಟ್ಟಣಶೆಟ್ಟಿ, ಶಿವಣ್ಣ ಕಡೂರ, ಮುದುಕಪ್ಪ ಮುದುಕಣ್ಣನವರ ಮತ್ತು ಕಾರ್ಯಕರ್ತರು, ಮಹಿಳೆಯರು ಉಪಸ್ಥಿತರಿದ್ದರು. ನೂರಾರು ಪೌರ ಕಾರ್ಮಿಕರು ಮತ್ತು ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಸಮಾಜದ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಮಹಿಳೆ ಮತ್ತು ಕಾನೂನು ವಿಷಯ ಕುರಿತು ನ್ಯಾಯವಾದಿ ಶ್ರೀಮತಿ ಜಯಶ್ರೀ ಜಂಬಗಿ ಉಪನ್ಯಾಸ ನೀಡಿದರು.
ಶ್ರೀಮತಿ ಮಂಜುಳಾ ಶಿಕಾರಿಪುರ
ಪ್ರಾರ್ಥಿಸಿದರು. ಶ್ರೀಮತಿ ಕಸ್ತೂರಿ ಅರ್ಕಸಾಲಿ ಸ್ವಾಗತಿಸಿ, ಶ್ರೀಮತಿ ಲಕ್ಷ್ಮಿ ಕದರಮಂಡಲಗಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಪ್ರಕಾಶ ಗಚ್ಚಿನಮಠ, ನೀರೂಪಿಸಿ, ಆಶಾ ಶಿಡ್ಲಮ್ಮನವರ ವಂದಿಸಿದರು. ನಂತರ ನಡೆದ ವೈವಿಧ್ಯಮಯ
ಸಾಂಸ್ಕೃತಿಕ ಕಾರ್ಯಕ್ರಮಗಳು ಸಾವಿರಾರು ಮಹಿಳೆಯರ ಗಮನ ಸೆಳೆದವು.