ಜೆಸಿಐ ಘಟಕ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವದು.

ಜೆಸಿಐ ಸವಣೂರು ಘಟಕ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವದು ಶ್ಲಾಘನೀಯವಾಗಿದೆ: ಮಧುಸೂಧನ ನಾವಡ

ವೀರಮಾರ್ಗ ನ್ಯೂಸ್ : ಹಾವೇರಿ: ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯ ಕಾರ್ಯವ್ಯಾಪ್ತಿಯಲ್ಲಿ ಉತ್ತಮ ಸಾಮಾಜಿಕ ಕಾರ್ಯ ಕೈಗೊಂಡು ೨೦೨೫ರ ಅವದಿಯಲ್ಲಿ ಜೆಸಿಐ ನಮ್ಮ ಸವಣೂರು ಘಟಕ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವದು ಶ್ಲಾಘನೀಯವಾಗಿದೆ ಎಂದು ಜೆಸಿಐ ಭಾರತ ವಲಯ-೨೪ರ ಅಧ್ಯಕ್ಷ ಜೆಎಫ್‌ಎಸ್ ಸಿಎ ಮಧುಸೂಧನ ನಾವಡ ತಿಳಿಸಿದರು.

ಪಟ್ಟಣದ ಜಾನ್ಞಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿ.ಕೃ.ಗೋಕಾಕ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಜೆಸಿಐ ಸವಣೂರು ನಮ್ಮ ಸವಣೂರು ಘಟಕದ ೨೦೨೬ರ ನೂತನ ಪದಾಧಿಕಾರಿಗಳ ಸೇವಾಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜೆಸಿಐ ಸವಣೂರು ಘಟಕ ಸ್ಥಳೀಯ ವಿಧವಾ ಸಹೋದರಿಯರಿಗೆ ಉಚಿತ ರ‍್ರೀ ವರ್ಕ್ ತರಬೇತಿ ಸೇರಿದಂತೆ ಜನ ಉಪಯೋಗಿಯ ಸಾಮಾಜಿಕ ಕಾರ್ಯವನ್ನು ನಿರ್ವಹಿಸಿ ವಲಯ-೨೪ರಲ್ಲಿ ಶೇ. ೧೦೦ಕ್ಕೆ ೧೦೦ರಷ್ಟು ಕಾರ್ಯ ಶ್ಲಾಘನೀಯವನ್ನು ಪಡೆದುಕೊಂಡಿದೆ. ಜೆಸಿಐ ಭಾರತ ಯುವ ಜನತೆಗೆ ಉನ್ನತ ಹಾಗೂ ಉತ್ತಮ ಅವಕಾಶಗಳನ್ನು ನೀಡುತ್ತದೆ. ಆದ್ದರಿಂದ, ಯುವ ಜನತೆ ಜೆಸಿಐ ಸಂಸ್ಥೆಯಲ್ಲಿ ಪಾಲ್ಗೊಂಡು ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಂಡು ವಯಕ್ತಿಕ ಸಾಧನೆಗೆ ಮುಂದಾಗಬೇಕು ಎಂದರು.

ತಹಸೀಲ್ದಾರ್ ರವಿಕುಮಾರ ಕೊರವರ ಮಾತನಾಡಿ, ಜೆಸಿಐ ನಮ್ಮ ಸವಣೂರು ಘಟಕವು ಕೈಗೊಳ್ಳುವ ಉತ್ತಮ ಸಾಮಾಜಮುಖಿ ಕಾರ್ಯಗಳಿಂದ ತಾಲೂಕಿನಲ್ಲಿ ಚಿರಪರಿಚಿತವಾಗಿದೆ ಎಂದರು.

ಜೆಸಿಐ ಭಾರತ ವಲಯ-೨೪ರ ಉಪಾಧ್ಯಕ್ಷ ಜೆಎಫ್‌ಎಂ ಅಭಿಜಿತ್ ಹಿರಿಯ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಜೆಸಿಐ ನಮ್ಮ ಸವಣೂರು ಅಧ್ಯಕ್ಷೆ-೨೦೨೫ ತೇಜಸ್ವಿನಿ ಕೊಂಡಿ ಅಧಿಕಾರ ಹಸ್ತಾಂತರಿಸಿ ಹಾಗೂ ಜೆಸಿಐ ನಮ್ಮ ಸವಣೂರು ಅಧ್ಯಕ್ಷ-೨೦೨೬ ಜೆಸಿ ಮಲ್ಲಿಕಾರ್ಜುನ ಬಾಣದ ಅಧಿಕಾರ ಸ್ವೀಕರಿಸಿ, ಜಂಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಧಿಕಾರ ಸ್ವೀಕಾರ: ಜೆಸಿಐ ನಮ್ಮ ಸವಣೂರು ಘಟಕದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಬಾಣದ, ಕಾರ್ಯದರ್ಶಿಯಾಗಿ ಮಧುಕರ ಜಾಲಿಹಾಳ, ಖಜಾಂಜಿಯಾಗಿ ಅರುಣ ಶಿಗ್ಗಾಂವಿ, ಉಪಾಧ್ಯಕ್ಷರಾಗಿ ಹರೀಶ ಹಿರಳ್ಳಿ, ಶಿವಕುಮಾರ ಚನ್ನಾಪೂರಮಠ, ಮಹಾಂತೇಶ ಹೊಳೆಯಮ್ಮನವರ, ಕೊಟ್ರೇಶ ಕಡ್ಲಿಮಠ, ಕೃಷ್ಣಾ ಭೋವಿ, ಮಹೇಶ ಆರೇರ, ಗಣೇಶಗೌಡ ಪಾಟೀಲ, ವೀಣಾ ವೀರನಗೌಡ್ರ, ಪ್ರೇಮಾ ಹುಲ್ಲತ್ತಿ ನೂತನ ಪದಾಧಿಕಾರಿಗಳಾಗಿ, ಸುಬ್ರಹ್ಮಣ್ಯ ಬಾಣದ ಜೂನಿಯರ್ ಜೆಸಿ ಆಗಿ ಅಧಿಕಾರ ಸ್ವೀಕರಿಸಿದರು.

ಲಕ್ಷ್ಮಿಹೊಳೆಯಮ್ಮನವರ ಹಾಗೂ ಸಂಗಡಿಗರಿಂದ ಭರತನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಈ ಸಂದರ್ಭದಲ್ಲಿ ಪ್ರಗತಿಪರ ರೈತ ಚನ್ನಬಸಪ್ಪ, ಲಕ್ಷ್ಮೇಶ್ವರ ಜೆಸಿಐ ಹಿರಿಯ ಪದಾಧಿಕಾರಿಗಳಾದ ಪುಷ್ಪಾ ಬಾಣದ, ರಮೇಶ ಅರಗೋಳ, ಪ್ರಕಾಶ ಜಮಾದಾರ, ವಿದ್ಯಾಧರ ಕುತನಿ, ಸಂತೋಷ ಗುಡಿಸಾಗರ, ಡಾ. ಪರಶುರಾಮ ಹೊಳಲ, ಬಾಪುಗೌಡ ಕೊಪ್ಪದ, ಬಸವರಾಜ ಚಳ್ಳಾಳ, ಗಂಗಾಧರ ಬಾಣದ, ಶ್ರೀಪಾದಗೌಡ ಪಾಟೀಲ, ಪ್ರೇಮಾ ಚಳ್ಳಾಳ, ಪುಷ್ಪಾ ಬತ್ತಿ, ಕವಿತಾ ಬಿಕ್ಕಣ್ಣನವರ, ಹರೀಶ ಹಿರಳ್ಳಿ, ಬಸನಗೌಡ ಪಾಟೀಲ ಹಾಗೂ ಇತರರು ಪಾಲ್ಗೊಂಡಿದ್ದರು.