ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ವೀರಮಾರ್ಗ ನ್ಯೂಸ್ : ತುಮಕೂರು : ನಗರದಲ್ಲಿ ನಡೆದ ಬೆಚ್ಚಿಬೀಳಿಸುವ ಪ್ರಕರಣದಲ್ಲಿ ಮಗಳು ತನ್ನ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಹೆತ್ತ ಮಕ್ಕಳೇ ಯಮ ರೂಪ ತಾಳಿದರೆ ಯಾರನ್ನ ನಂಬಬೇಕು,?

ವಯಸ್ಸು ಕಳೆಯುತ್ತಾ ಮಕ್ಕಳೇ ಆಸರೆ ಆಗಬೇಕು ಬದಲಿಗೆ ಇಂಥ ಹೀನ ಕೃತ್ಯಕ್ಕೆ ಕೈ ಹಾಕಿದರೆ ಮಕ್ಕಳು ಯಾಕೇ ಬೇಕು,,,?


ಬಿ. ಪುಷ್ಪಲತಾ (52) ಇತ್ತೀಚೆಗೆ ತಮ್ಮ ಆಭರಣಗಳನ್ನು ಮಾರಾಟ ಮಾಡಿ 40 ಲಕ್ಷ ರೂ. ಹಣವನ್ನು ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಿದ್ದರು.
ಫೆಬ್ರವರಿ 11ರಂದು ಮಗಳು ಸುಚಿತ್ರಾ ಹಾಗೂ ಆಕೆ ಪತಿ ಸುರೇಶ್ ಸೇರಿ ತಾಯಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬಂಧುಗಳಿಗೆ ತಿಳಿಸಿ ತ್ವರಿತವಾಗಿ ಅಂತ್ಯಕ್ರಿಯೆ ನಡೆಸಲು ಯತ್ನಿಸಿದರು.

ಆದರೆ ಶವ ದಹನಕ್ಕೂ ಮುನ್ನ ಮೃತೆಯ ಸಹೋದರ ಮೂಗು ಹಾಗೂ ಮುಖದ ಬಳಿ ರಕ್ತದ ಗುರುತು ಗಮನಿಸಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಶವ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಪೋಸ್ಟ್‌ಮಾರ್ಟಂ ವರದಿಯಲ್ಲಿ ಹೃದಯಾಘಾತವಲ್ಲ, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ದೃಢಪಟ್ಟಿದೆ. ಪ್ರಕರಣ ಸಂಬಂಧ ಮಗಳು ಸುಚಿತ್ರಾ ಮತ್ತು ಆಕೆಯ ಪತಿ ಸುರೇಶ್ ರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದಾರೆ.
ವರದಿ : ಚನ್ನೇಶ್.