ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ್ ತಾಲೂಕು : ದಿ ॥ ಶ್ರೀ ಆದಿತ್ಯ ವಿಕ್ರಮ ಬಿರ್ಲಾಜೀಯವರ ಜನ್ಮ ದಿನದ ಜ್ಞಾಪಕಾರ್ಥ ವಾಗಿ ಗ್ರಾಸಿಂ ಜನಸೇವಾ ಟ್ರಸ್ಟ್ ವತಿಯಿಂದ ದಿ: 9-11-2025 ನೇ ಭಾನುವಾರ 9-30 ಗಂಟೆಗೆ ಶಿಬಿರವು ಹರಿಹರದ ಹತ್ತಿರವಿರುವ ಕುಮಾರಪಟ್ಟಣದ ಗ್ರಾಸಿಂ ಸಭಾಂಗಣದಲ್ಲಿ ಪ್ರಾರಂಭವಾಗುವುದು. ಕೃತಕ ಕೈ ಮತ್ತು ಕಾಲು ಜೋಡಣೆಯನ್ನು ಕರ್ನಾಟಕ ಮಾರವಾರಿ ಯುತ್ ಫೆಡರೇಶನ್, ಬೆಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿ ಕೊಳ್ಳಲಾಗಿದೆ.
ಶಿಬಿರದಲ್ಲಿ ಆಯ್ಕೆಯಾದ ಮತ್ತು ಅವಶ್ಯವಿರುವವರಿಗೆ ಅಳತೆಯ ಪ್ರಕಾರ ಉಚಿತ ಕೃತಕ ಕೈ ಮತ್ತು ಕಾಲುಗಳನ್ನು ತಯಾರಿಸಿ ಜೋಡಣೆ ಮಾಡಲಾಗುವುದು.

ವಿಶೇಷ ಸೂಚನೆ……
ಶಿಬಿರದಲ್ಲಿ ಕೈ ಮತ್ತು ಕಾಲು ತುಂಡಾದವರಿಗೆ ಮಾತ್ರ ಕೃತಕ ಹೊಸ ಕೈ ಮತ್ತು ಕಾಲು ಜೋಡಣೆ ಮಾಡಲಾಗುವುದು. ಹಳೆಯ ಕೃತಕ ಕೈ ಮತ್ತು ಕಾಲುಗಳ ರಿಪೇರಿ ಇರುವದಿಲ್ಲ.
ಆಸಕ್ತ ಫಲಾನುಭವಿಗಳು 27 ಅಕ್ಟೋಬರ, 2025 ರ ಒಳಗಾಗಿ ಮುಂಜಾನೆ 9-00 ರಿಂದ ಸಂಜೆ 5-00 ಒಳಗಾಗಿ ಫೋನ್ ಮೂಲಕ ನಿಗದಿತ ದಿನಾಂಕದ ಒಳಗೆ ಹೆಸರು ಬರೆಸಬೇಕು.
ಪ್ರಥಮ ನೊಂದಣಿ ಮಾಡಿಸಿದ 200 ಜನರಿಗೆ ಮಾತ್ರ ಉಚಿತ ಕೃತಕ ಕೈ ಮತ್ತು ಕಾಲು ಜೋಡಣೆ ಮಾಡಲಾಗುವುದು.

ಅವಶ್ಯವಿದ್ದಲ್ಲಿ ಒಬ್ಬ ಅಂಗವಿಕಲರ ಜೊತೆಗೆ ಒಬ್ಬರು ಸಹಾಯಕರು ಬರಬಹುದು. ನೋಂದಣಿ ಮಾಡಿಸುವವರು ಮಹೇಂದ್ರ ಆರ್.ಎಚ್. 99710 70692, ಬಸವ ರಾಜ ಅನ್ವೇರಿ 9741158199, ಶಶಿಧರ ಕಟ್ಟಿಮನಿ 9538331985, ಉಮಾ ಮಹೇಶ್ವರಪ್ಪ. 9964468025, ಕು.ಆಶ್ವಿನಿ 9620441554 ಈ ಮೋಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ನೊಂದಾಯಿಸಬಹುದು. ಶಿಬಿರದ ಸ್ಥಳದಲ್ಲಿ ಯಾವುದೇ ಹೊಸ ನೊಂದಣಿ ಇರುವದಿಲ್ಲವೆಂದು ಗ್ರಾಸಿಂ ಕಾರ್ಖಾನೆಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಮಂಜಪ್ಪ ಮೇಗಳಗೇರಿಯವರು ತಿಳಿಸಿರುತ್ತಾರೆ.
ಸಾರ್ವಜನಿಕರಿಗೇ ವಿಶೇಷ ಮನವರಿಕೆ…
ಕರ್ನಾಟಕ ರಾಜ್ಯದ ಜಿಲ್ಲೆಜಿಲ್ಲೆಯ ಅವಶ್ಯವಿರುವ ವೆಕ್ತಿಗಳಿಗೆ ಸ್ವಾಗತ.
ವರದಿ : ಸಂತೋಷ. ಹರಿಹರ.