ಹೂವಿನ ಬಾಣದಂತೆ ಅಮ್ಮುಗೆ ಅಪಘಾತ…

ಹೂವಿನ ಬಾಣದಂತೆ ಹುಡುಗಿ ಅಮ್ಮುಗೆ ಅಪಘಾತ; ತುಂಬಾ ದೃಷ್ಟಿ ಆಯ್ಕೆಂದ ನೆಟ್ಟಿಗರು…

ವೀರಮಾರ್ಗ ನ್ಯೂಸ್ : ‘ಹೂವಿನ ಬಾಣದಂತೆ’ ಹಾಡಿನ ಮೂಲಕ ವೈರಲ್ ಆಗಿದ್ದ ಸಿಂಗ‌ರ್ ಅಮ್ಮು ಅಲಿಯಾಸ್ ನಿತ್ಯಶ್ರೀ ಅವರಿಗೆ ಅಪಘಾತವಾಗಿದೆ ಎಂದು ಹೇಳಲಾಗುತ್ತಿದೆ. ಹಣೆಗೆ ಬ್ಯಾಂಡೇಜ್ ಹಾಕಿರುವ ಅವರ ಫೋಟೋ ವೈರಲ್ ಆಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕರ್ನಾಟಕದ ಟ್ರೆಂಡಿಂಗ್ ಗರ್ಲ್…..

ತನ್ನದೇ ಶೈಲಿಯಲ್ಲಿಯೇ ಹಾಡು ಹೇಳಿ ಕರ್ನಾಟಕದ ಟ್ರೆಂಡಿಂಗ್ ಗರ್ಲ್ ಆಗಿದ್ದ ವೈರಲ್ ಸಿಂಗರ್ ಅಮ್ಮು ಅಲಿಯಾಸ್‌ ನಿತ್ಯಶ್ರೀ ಅಪಘಾತವಾಗಿದೆ ಎಂದು ಹೇಳಲಾಗುತ್ತಿದೆ. ಹಣೆಗೆ ಬ್ಯಾಂಡೇಜ್ ಹಾಕಿರುವ ಅಮ್ಮು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಅಪಘಾತ ಎಲ್ಲಿ ನಡೆದಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

ಸಣ್ಣ ಪ್ರಮಾಣದಲ್ಲಿ ಗಾಯ ಎನ್ನುವ ಮಾಹಿತಿ…

ಹಣೆ, ಕೈಗಳು ಮತ್ತು ಕಣ್ಣಿನ ಭಾಗಕ್ಕೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪ್ರಾಣಾಪಾಯದಿಂದ ಅಮ್ಮುಗೌಡ ಪಾರಾದಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ರೀಲ್ಸ್‌ಗೆ ಕಮೆಂಟ್ ಮಾಡಿರುವ ನೆಟ್ಟಿಗರು ಅಮ್ಮುಗೆ ದೃಷ್ಟಿಯಾಗಿದೆ ಅಂದ್ರೆ, ಕೆಲವರು ಹೂ ಬಾಡಿತು ಎಂದು ಹೇಳಿದ್ದಾರೆ.

ವರದಿ : ಚನ್ನೇಶ ಬೆಂಗಳೂರು.