ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಪೊಲೀಸರು ದಾಳಿ, ಹಣ-ಮೊಬೈಲ್ ಪತ್ತೆ
ವೀರಮಾರ್ಗ ನ್ಯೂಸ್ ಬೆಂಗಳೂರು : ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಪೊಲೀಸರು ದಾಳಿ ಮಾಡಿ ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದ್ದಾರೆ.ದಾಳಿ ಸಂದರ್ಭದಲ್ಲಿ ಕೆಲವು ಬ್ಯಾರಕ್ಗಳಲ್ಲಿ, ೧ ಮೊಬೈಲ್,ಚಾರ್ಜರ್, ಎಲೆಕ್ಟ್ರಿಕ್ ಸ್ಟೌವ್ ಹಾಗೂ ೧೬ ಸಾವಿರ ಹಣ ಪತ್ತೆಯಾಗಿದ್ದುಘಿ, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎ?ಐಆರ್ ದಾಖಲಾಗಿದ್ದು, ಈ ವಸ್ತುಗಳು ಹೇಗೆ ಕಾರಾಗೃಹದೊಳಗೆ ಬಂದವು,ಯಾರು ತಂದುಕೊಟ್ಟಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ನಿನ್ನೆ ಬೆಳಗ್ಗೆ ೭ ರಿಂದ ೧೦ ಗಂಟೆವರೆಗೂ ಕಾರಾಗೃಹದೊಳಗೆ ಪರಿಶೀಲನೆ ನಡೆಸಲಾಗಿದೆ. ಈ ದಾಳಿಯಲ್ಲಿ ಒಬ್ಬರು ಡಿಸಿಪಿ,ಒಬ್ಬರು ಎಸಿಪಿ, ಐದು ಮಂದಿ ಇನ್ಸ್ಪೆಕ್ಟರ್ಗಳು ಸೇರಿದಂತೆ ಒಟ್ಟು ೧೭೫ ಸಿಬ್ಬಂದಿ ಪಾಲ್ಗೊಂಡಿದ್ದರು. ಕಾರಾಗೃಹದಲ್ಲಿ ಮೊಬೈಲ್ ಬಳಕೆ ಸೇರಿದಂತೆ ವಿವಿಧ ಚಟುವಟಿಗಳು ನಡೆಯುತ್ತಿವೆ ಎಂಬ ದೂರಿನ ಆಧಾರದ ಮೇಲೆ ಈ ದಾಳಿ ನಡೆದಿದೆ.