ಗ್ರಾಮಪಂಚಾಯತಿ ಸಿಬ್ಬಂದಿ ಇ ಸ್ವತ್ತಿಗೆ ಹಣ ವಸೂಲಿ…

ಗ್ರಾಮ ಪಂಚಾಯಿತಿಗಳಲ್ಲಿ ಇಲಾಖೆಯ ಸಿಬ್ಬಂದಿಯವರು ಇ ಸ್ವತ್ತಿಗೆ ಹಣ ವಸೂಲಿ ಮಾಡುತ್ತಿದ್ದವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳುವ

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಸ್ವಾಭಿಮಾನ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಕುಂದಾಪುರ ಇವರ ನೇತೃತ್ವದಲ್ಲಿ ರಾಣೆಬೆನ್ನೂರು ತಾಲೂಕಿನಾದ್ಯಂತ ಕೆಲವೊಂದು ಗ್ರಾಮ ಪಂಚಾಯಿತಿಗಳಲ್ಲಿ ಇಲಾಖೆಯ ಸಿಬ್ಬಂದಿಯವರು ಇ ಸ್ವತ್ತಿಗೆ ಹಣ ವಸೂಲಿ ಮಾಡುತ್ತಿದ್ದವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳುವ ಕುರಿತು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸಂಘಟನೆ ವತಿಯಿಂದ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ಮಾಡಲಾಯಿತು

ರಾಜ್ಯ ಸಂಚಾಲಕರು ಮಲ್ಲಿಕಾರ್ಜುನ ಸಾವಕ್ಕಳವರ ಮಾತನಾಡಿ ಇತ್ತೀಚಿಗೆ ದಿನಗಳಲ್ಲಿ ರಾಣೆಬೆನ್ನೂರು ತಾಲೂಕಿನ ಕೆಲವೊಂದು ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸ್ಥರು ಮನೆಯ ಈ ಸ್ವತ್ತು ಮಾಡಿಸಲು ಗ್ರಾಮ ಪಂಚಾಯಿತಿಗೆ ಹೋಗಿ ಈ ಸುತ್ತು ಮಾಡಿಕೊಡಿ ಎಂದು ಅರ್ಜಿ ಕೊಟ್ಟರೆ ಅರ್ಜಿ ಇಸೀದುಕೊಂಡು ಹಾಗೆ ಸೈಡಿಗೆ ಇಡುತ್ತಾರೆ ಅರ್ಜಿ ಜೊತೆ ಹಣ ಕೊಟ್ಟರೆ ಈ ಸ್ವತ್ತನ್ನು ಒಂದು ತಿಂಗಳಲ್ಲಿ ಬೇಗ ಕೆಲಸ ಮಾಡಿ ಕೊಡುತ್ತಾರೆ ಹಣ ಕೊಡದೆ ಇರುವವರ ಈ ಸ್ವತ್ತನ್ನು ಮೂರು ತಿಂಗಳು ಆರು ತಿಂಗಳು ಒಂದು ವರ್ಷದ ವರೆಗೆ ಸತಾಯಿಸುತ್ತಾರೆ ಕೇಳಿದರೆ ಅದು ಸರಿ ಇಲ್ಲ ಇದು ಸರಿಯಲ್ಲ ಎಂದು ಹರಕೆ ಉತ್ತರ ಕೊಡುತ್ತಾರೆ ಹರಕೆ ಉತ್ತರ ನೀಡಿ ಹಣ ತೆಗೆದುಕೊಳ್ಳುವವರ ಅಧಿಕಾರಿಗಳ ಮೇಲೆ ಆದೊಷ್ಟು ಬೇಗನೆ ಕ್ರಮ ಜರುಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ತಾಲೂಕು ಅಧ್ಯಕ್ಷರು ಚಂದ್ರಪ್ಪ ಬಣಕಾರ ಮಾತನಾಡಿ ಒಂದು ಮನೆಯ ಈ ಸುತ್ತನ್ನು ಮಾಡಿಕೊಡಲು ಗ್ರಾಮ ಪಂಚಾಯತಿ ಅಧಿಕಾರಿಗಳು ನಾಲ್ಕರಿಂದ ಐದು ಸಾವಿರ ರೂಪಾಯಿ ಲಂಚದ ಹಣ ಪಡೆಯುತ್ತಾರೆ ಇಂಥವರ ವಿರುದ್ಧ ತಾವುಗಳು ಆದೊಷ್ಟು ಬೇಗನೆ ಕ್ರಮ ತೆಗೆದುಕೊಂಡು ಲಂಚದ ಹಣ ಪಡೆಯದೆ ಇರುವ ಹಾಗೆ ನೋಡಿಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಇ ಸ್ವತ್ತು ಪಡೆದುಕೊಳ್ಳಲು ಈಗಾಗಲೇ ಹಲಗೇರಿ ಗ್ರಾಮ ಪಂಚಾಯಿತಿಯಲ್ಲಿ ಸಿಕ್ಕು ಬಿದ್ದಿರುವದು ತಮ್ಮ ಗಮನಕ್ಕೆ ಈಗಾಗಲೇ ಬಂದಿರುವ ವಿಚಾರವಾಗಿದೆ ಇನ್ನುಳಿದ ಗ್ರಾಮ ಪಂಚಾಯಿತಿಯಲ್ಲಿಯೂ ಸಹ ಇ ಸ್ವತ್ತು ಪಡೆದುಕೊಳ್ಳಲು ಸರ್ಕಾರದ ಸೇವಾ ಸಿಲ್ಕ ಎಷ್ಟಿದೆಯೋ ಅಷ್ಟು ತೆಗೆದುಕೊಂಡು ರಸೀದಿ ಕೊಡಬೇಕು ಹಣ ಪಡೆದು ರಸೀದಿ ಕೊಡದೆ ಇರುವವರ ಮೇಲೆ ಹಾಗೂ ಲಂಚದ ಹಣ ಪಡೆಯುವವರ ಮೇಲೆ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಇಲ್ಲದೆ ಹೋದರೆ ತಾಲೂಕು ಪಂಚಾಯಿತಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರು ಕೊಟ್ರೇಶಪ್ಪ ಎಮ್ಮಿ ಪರಶುರಾಮ ಕುರುವತ್ತಿ ಸಿದ್ದರೋಡ ಗುರುO ಸಂಜೀವ್ ಕನವಳ್ಳಿ ರಿಯಾಜ್ ದೊಡ್ಡಮನಿ ಮರಡೆಪ್ಪ ಚಳಗೇರಿ ಶೋಭಾ ಮುದೇನೂರು ಮೃತುಂಜಯ ಕರಿಯಜ್ಜಿ ರಮೇಶ ಪೂಜಾರ ಮಾಲತೇಶ್ ಮ್ಯಾಗೇರಿ ಅಣ್ಣಪ್ಪ ಜೆಸಿ ಮಂಜುನಾಥ್ ಶಂಭೋಜಿ ಹನುಮಂತಗೌಡ ಪಾಟೀಲ್ ತಿಪ್ಪೇಶ್ ಮಾದಾಪುರ ಪರಶುರಾಮ ಕೋಲಕಾರ ಸಾರ್ವಜನಿಕರು ಮತ್ತಿತರರು ಉಪಸ್ಥಿತರಿದ್ದರು.