ಜಿಲ್ಲಾದಲ್ಲಿ,ಸ್ಪರ್ಧಾತ್ಮಕ ದರದಲ್ಲಿ ವ್ಯಾಪಾರ ಮಾಡಲು ಶಾಸಕ ಪಪ್ಪಿ ಸಲಹೆ.

ಜಿಲ್ಲಾ ಮಟ್ಟದ ಸರಸ್ ಮೇಳ
ಗುಣಮಟ್ಟ ಹಾಗೂ ಸ್ಪರ್ಧಾತ್ಮಕ ದರದಲ್ಲಿ ವ್ಯಾಪಾರ ಮಾಡಲು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸಲಹೆ

ವೀರಮಾರ್ಗ ನ್ಯೂಸ್ : ಚಿತ್ರದುರ್ಗ ಜಿಲ್ಲಾ : ಗ್ರಾಮೀಣ ಮತ್ತು ಮಹಿಳಾ ಸ್ವ ಸಹಾಯ ಸಂಘಗಳು ತಾವು ಉತ್ಪಾದಿಸುವ ವಸ್ತುಗಳ ಗುಣಮಟ್ಟ ಕಾಪಡಿಕೊಳ್ಳುವ ಜೊತೆಗೆ, ಸ್ಪರ್ಧಾತ್ಮಕ ದರದಲ್ಲಿ ವ್ಯಾಪಾರ ಮಾಡಿದರೆ ಯಶಸ್ಸು ದೊರೆಯುತ್ತದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸಲಹೆ ನೀಡಿದರು.
ಮಂಗಳವಾರ ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ, ಕೌಶಲ್ಯಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯತಿಯ ಸಂಜೀವನಿ-ಡೇ- ಎನ್.ಆರ್.ಎಲ್.ಎಂ (ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ) ಸಹಯೋಗದಲ್ಲಿ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾದ, ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರು ಉತ್ಪಾದಿಸಿರುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಆಯೋಜಿಸಲಾದ, ಜಿಲ್ಲಾ ಮಟ್ಟದ ಸರಸ್ ಮೇಳ ಉದ್ಘಾಟಿಸಿ ಮಾತನಾಡಿದರು.
ವ್ಯಾಪಾರ ಸಣ್ಣದು ಅಥವಾ ದೊಡ್ಡದು ಎನ್ನುವುದು ಗಂಭೀರ ವಿಚಾರವಲ್ಲ. ವ್ಯಾಪಾರದಲ್ಲಿನ ಬದ್ದತೆ ಮುಖ್ಯವಾಗುತ್ತದೆ. ನೀವು ಉತ್ಪಾದಿಸುವ ವಸ್ತುವಿನ ಗುಣಮಟ್ಟ ಮತ್ತು ನಿಖರ ಬೆಲೆ ಇದ್ದಾಗ ಯಶಸ್ಸು ದೊರೆಯುತ್ತದೆ. ಗ್ರಾಮೀಣ ಭಾಗದ ಉತ್ಪಾದಕ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಮೊದಲು ಸ್ಥಳೀಯವಾಗಿ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕುಗಳಲ್ಲಿ ಜಪ್ರಿಯಗೊಳಿಸಬೇಕು. ನಂತರ ಜಿಲ್ಲೆ, ರಾಜ್ಯ, ರಾಷ್ಟç ಹಾಗೂ ಅಂತರಾಷ್ಟಿçÃಯ ಮಟ್ಟದಲ್ಲಿ ತಮ್ಮ ಉತ್ಪನ್ನಗಳು ಗುರುತಿಸಿಕೊಳ್ಳುತ್ತವೆ. ಮಹಿಳೆಯರು ಉದ್ದಿಮೆ ಆರಂಭಿಸಲು ಕುಟುಂಬದ ಸಹಕಾರ ಮುಖ್ಯವಾಗುತ್ತದೆ. ಉದ್ಯಮದ ಜೊತೆಗೆ ಕುಟುಂಬ ನಿರ್ವಹಣೆಗೂ ಮಹಿಳೆಯರು ಸಮಯ ಮೀಸಲಿರಿಸುವಂತೆ ಶಾಸಕ ಕೆ.ಸಿ.ವೀರೇಂದ್ರ ಹೇಳಿದರು.


ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕಾಗಿ ಹತ್ತು ಹಲವು ಯೋಜನೆ ಜಾರಿಗೆ ತಂದಿವೆ. ಮಹಿಳೆಯರು ಕೇವಲ ತಮ್ಮ ಮನೆಗೆ ಸೀಮಿತವಾಗಬಾರದು. ಉದ್ದಿಮೆಗಳನ್ನು ಆರಂಭಿಸಿ ಆರ್ಥಿಕವಾಗಿ ಸಬಲರಾಗಬೇಕು. ಕೆಲಸ ಮಾಡಲು ಹಿಂಜರಿಯಬಾರದು. ಆತ್ಮಸ್ಥೆöÊರ್ಯ ಕಳೆದುಕೊಳ್ಳದೆ ವ್ಯಾಪಾರದಲ್ಲಿ ಜಯಗಳಿಸಬೇಕು ಎಂದರು.
ಜಿ.ಪಂ. ಯೋಜನಾ ನಿರ್ದೇಶಕಿ ಸಿ.ಎಸ್.ಗಾಯಿತ್ರಿ ಮಾತನಾಡಿ ಜಿಲ್ಲೆಯ 189 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ 13,000 ಸಾವಿರ ಒಕ್ಕೂಟ ಸ್ವ-ಸಹಾಯ ಸಂಘಗಳು ನೊಂದಣಿಯಾಗಿವೆ. ಜಿಲ್ಲೆಯಲ್ಲಿ 3,80,000 ಕ್ಕೂ ಹೆಚ್ಚು ಕುಟುಂಬಗಳದ್ದು, ಈ ಪೈಕಿ 1,36,000 ಕುಟುಂಬಗಳನ್ನು ಎನ್.ಆರ್.ಎಲ್.ಎಂ ಯೋಜನೆಯಡಿ ತರಲಾಗಿದೆ. ಜಿಲ್ಲೆಯಲ್ಲಿ ನೊಂದಣಿಯಾದ ಸ್ವ-ಸಹಾಯ ಸಂಘಗಳಿಗೆ ಸುಮಾರು ರೂ.75 ಕೋಟಿಯಷ್ಟು ಬಂಡವಾಳ ನಿಧಿ ಒದಗಿಸಲಾಗಿದೆ. ಈ ಯೋಜನೆ ಮುಖ್ಯ ಉದ್ದೇಶ ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಒಕ್ಕೂಟ ಹಾಗೂ ಸ್ವ ಸಹಾಯ ಗುಂಪುಗಳಿಗೆ ನಗದು ಸಹಿತ ಬಹುಮಾನಗಳನ್ನು ನೀಡಲಾಯಿತು. ಹೊಳಲ್ಕೆರೆ ತಾಲ್ಲೂಕು ರಾಮಗರಿ ಗ್ರಾಮದ ಶ್ರೀ ಕರಿಸಿದ್ದೇಶ್ವರ ಒಕ್ಕೂಟ ಪ್ರಥಮ, ಚಳ್ಳಕೆರೆ ತಾಲ್ಲೂಕು ತಳಕು ಗ್ರಾಮದ ತ.ರಾ.ಸು ಒಕ್ಕೂಟ ದ್ವಿತೀಯ, ಚಿತ್ರದುರ್ಗ ತಾಲ್ಲೂಕಿನ ಆಲಘಟ್ಟ ಗ್ರಾಮದ ಶ್ರೀ ಕನ್ನಡಾಂಭೆ ಒಕ್ಕೂಟ ತೃತೀಯ ಬಹುಮಾನ ಪಡೆದಿವೆ. ಮಹಿಳಾ ಸ್ವ-ಸಹಾಯ ಗುಂಪುಗಳ ಪೈಕಿ ಹೊಸದುರ್ಗ ತಾಲ್ಲೂಕಿನ ಕಾರೇಹಳ್ಳಿ ಗ್ರಾಮದ ಶ್ರೀ ಲಕ್ಷಿö್ಮÃ ಸ್ವ ಸಹಾಯ ಗುಂಪು ಪ್ರಥಮ, ಮೊಳಕಾಲ್ಮೂರು ತಾಲ್ಲೂಕಿನ ನೇರ್ಲಹಳ್ಳಿ ಗ್ರಾಮದ ಶ್ರೀ ಕಂಪಳ ರಂಗಸ್ವಾಮಿ ಸ್ವ ಸಹಾಯ ಗುಂಪು ದ್ವೀತಿಯ ಹಾಗೂ ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮದ ಶ್ರೀ ಶಕ್ತಿ ಅಂಬಾದೇವಿ ಸ್ವ ಸಹಾಯ ಗುಂಪು ತೃತೀಯ ಬಹುಮಾನ ಗಳಿಸಿವೆ.
ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಸಮಿತಿ ಉಪಾಧ್ಯಾಕ್ಷ ಡಿ.ಎನ್.ಮೈಲಾರಪ್ಪ, ನಗರ ಸಭೆ ಸದಸ್ಯೆ ಮೀನಕ್ಷಮ್ಮ ಸೇರಿದಂತೆ ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *