ಶ್ರಾವಣ ಮಾಸ ಬಂದಾಗ…

ಶ್ರಾವಣ ಮಾಸ ಎಲ್ಲರಿಗೂ ಸಂತಸ…

ವೀರಮಾರ್ಗ ನ್ಯೂಸ್ : ಹೌದು ಸ್ವಾಮಿ ಶ್ರಾವಣ ಎಂದರೆ ಎಲ್ಲರಿಗೂ ಸಂತಸನೆ. ಶ್ರಾವಣ ಮಾಸಕ್ಕೆ ಎಲ್ಲರಿಗೂ ಕೆಲಸದ ಮೇಲೆ ಕೆಲಸವೇ. ರೈತನ ಹೊಲ ಗದ್ದೆಗಳ ಕೆಲಸ ಮಹಿಳೆಯರ ಮನೆ ಕೆಲಸ ಹಿರಿಯರು ಕಿರಿಯರು ಪೂಜೆ ಪುನಸ್ಕಾರದ ಕೆಲಸ ಹೀಗೆ ಅನೇಕರು ಇರಬಹುದು ಸರಕಾರಿ ಅಧಿಕಾರಿಗಳು ಇರಬಹುದು ಅರೆ ಸರಕಾರಿ ಇವರೆಲ್ಲರಿಗೂ ಹೊಸ ಕೆಲಸದ ಜೊತೆ ಕೆಲಸ ನಡೆಯುತ್ತಿರುತ್ತದೆ.
ಹೌದು ಸ್ವಾಮಿ . ಶ್ರಾವಣ ಮಾಸ ಎಂದರೆ ಪೂಜಾ ಪುನಸ್ಕಾರದ ಪದ್ಧತಿ ಮಾಸ ಎನ್ನುವುದರಲ್ಲಿ ಎರಡನೇ ಮಾತೇ ಇಲ್ಲ ಅಮಾವಾಸ್ಯೆ ಮುಗಿಯುತ್ತಿದ್ದಂತೆಯೇ. ನಾಗರಕಟ್ಟೆಗೆ ಶಿವನಿಗೆ ಪೂಜೆ ಅರ್ಪಿಸುವ ಮಾಸ, ಮಾಸದಲ್ಲಿ ಪ್ರತಿಯೊಂದು ದಿನಗಳನ್ನು ಮುಂಜಾನೆ ಬ್ರಾಹ್ಮಿ ಮುಹೂರ್ತದಿಂದ ಶುರುವಾದ ಪೂಜೆಗಳು ಸಂಜೆ 8ರವರೆಗೆ ನಡೆಯುತ್ತಲೇ ಇರುತ್ತವೆ. ಅಂದಾಗೆ ಪ್ರತಿಯೊಂದು ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ವಿಶೇಷ ಪೂಜೆ ನಡೆಯುತ್ತಲೇ ಇರುತ್ತವೆ. ಪ್ರತಿಯೊಬ್ಬ ಮಹಿಳೆಯರು ಅವರ ವಸ್ತ್ರಾಭರಣ ಹಾಗೂ ರೇಷ್ಮೆ ಸೀರೆ ಉಟ್ಟುಕೊಂಡು ಪುರುಷರು ರೇಷ್ಮೆ ಸಲ್ಲೇ ಪಂಜೆ ಉಟ್ಟುಕೊಂಡು ದೇವಸ್ಥಾನಕ್ಕೆ ಬಂದು ತಮ್ಮ ಸೇವೆ ಸಲ್ಲಿಸುವ ಪ್ರತಿತಿಯಿದೆ. ಅದೇ ರೀತಿಯಾಗಿ ನಮ್ಮ ಕರುನಾಡಿನ ಮೂಲೆ ಮೂಲೆಯ ಹಳ್ಳಿಗಳಲ್ಲಿ ದೊಡ್ಡ ದೊಡ್ಡ ಸಿಟಿಗಳಲ್ಲಿ ಪೂಜೆಕ್ಕೆ ಮೀಸಲಿರುವ ಮಾಸ ಎಂದು ತಮ್ಮ ದಿನದ ಕೆಲಸದ ಒತ್ತಡದ ನಡುವೆ ದೇವಾನು ದೇವತೆಗಳಿಗೆ, ಸಮಯವನ್ನು ಎತ್ತಿಡುತ್ತಾರೆ. ಅದೇ ರೀತಿಯಾಗಿ ಮಾಸದ ಮಧ್ಯದಲ್ಲಿ ಅಣ್ಣ ತಂಗಿಯರ ಅಕ್ಕ ತಮ್ಮಂದಿರ ಪವಿತ್ರ ಸಂಬಂಧದ ದಿನವು ಆಗಿರುತ್ತದೆ, ದೇವಾನು ದೇವತೆಗಳಿಗೆ ಬಡವ ಬಲ್ಲಿಗೆ ಶ್ರೀಮಂತ ಎನ್ನುವ ಭೇದವಿಲ್ಲದೆ. ಪ್ರತಿಯೊಬ್ಬ ಮಾನವನು ತನ್ನ ಸ್ವಚ್ಛ ಮನಸ್ಸಿನಿಂದ ಪೂಜಿಸುವ ಪೂಜೆಯನ್ನು ಸ್ವೀಕರಿಸುತ್ತಾನೆ ಎನ್ನುವ ನಂಬಿಕೆಯು ಹಿಂದಿನ ಕಾಲದಿಂದಲೂ ನಡೆಯುತ್ತಾ ಬಂದಿದೆ.

ಆದರೆ ದಾರಿ ತಪ್ಪಿದೆಲ್ಲಿ ಸ್ವಾಮಿ…?

ಈ ಪ್ರಶ್ನೆ ಕಾಡುತ್ತಿರುವ ಕೆಲವು ಸಾರ್ವಜನಿಕರ ಮನಸ್ಸಲ್ಲಿ. ಸುಮ್ಮನೆ ಹಾಗೆ ವಿಚಾರ ಮಾಡುತ್ತಾ ಹೋದಾಗ ಒಬ್ಬ ಬಡ ಭಕ್ತ ಸಿಗುತ್ತಾನೆ, ಹಾಗೆ ಸುಮ್ಮನೆ ಮಾತಾಡುತ್ತಾ ಹೇಳುತ್ತಾನೆ. ಹಣ ಮತ್ತು ಅಧಿಕಾರ ಇದ್ದವರಿಗೆ ಮಾತ್ರ ಗರ್ಭ ಗುಡಿ ಪ್ರವೇಶ, ನಿಜವಾದ ಶುದ್ಧ ಮನಸಿನ ಭಕ್ತಿ ದೇವರಿಗೆ ಅಷ್ಟೇ ಮೀಸಲು, ಗರ್ಭ ಗುಡಿಗೆ ಪ್ರವೇಶಕ್ಕೆ ಅಲ್ಲಾ ಅಂತಾ ಸಣ್ಣ ಮನಸಿನಿಂದ ಸಣ್ಣ ದ್ವನಿಯಲ್ಲಿ ಹೇಳಿ ತನ್ನ ಮುಖವನ್ನು ಆಕಾಶ್ ನೋಡ ತೊಡಗಿದನು.

ಹೌದು ಸ್ವಾಮಿ ತನಗೆ ಆದ ನೋವನ್ನು ಹೇಳುತ್ತಾ ನಸುನಕ್ಕ ಮುಂದೆ ಸಾಗಿದರು.