(30.08.026 to 05.09.2026)ವೀರಮಾರ್ಗ ನ್ಯೂಸ್ : ವಾರದ ರಾಶಿ ಭವಿಷ್ಯ : ಮೇಷ ರಾಶಿ : ವೃತ್ತಿ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ನಿಮ್ಮ ಪ್ರತಿಭೆ ಬೆಳಕಿಗೆ ಬರುತ್ತದೆ. ಮಿತ್ರರಿಂದ ಶುಭವಾರ್ತೆಗಳು ದೊರೆಯುತ್ತವೆ. ಪ್ರಮುಖ ವ್ಯವಹಾರಗಳಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಕೈಗೊಂಡ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಮನೆಯಲ್ಲಿ ಶುಭಕಾರ್ಯಗಳ ಆಯೋಜನೆ ಕುರಿತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ಹೊಸ ಉದ್ಯೋಗ ಪ್ರಯತ್ನಗಳು ಅನುಕೂಲಕರವಾಗಿ ಸಾಗುತ್ತವೆ. ಆರ್ಥಿಕವಾಗಿ ಹಿಂದಿನದಕ್ಕಿಂತ ಉತ್ತಮ ಪರಿಸ್ಥಿತಿ ಇರುತ್ತದೆ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ವ್ಯಾಪಾರಸ್ಥರಿಗೆ ಹೊಸ ಹೂಡಿಕೆಗಳು ದೊರೆಯುತ್ತವೆ. ಸ್ಥಿರಾಸ್ತಿ ವಿವಾದಗಳು ಬಗೆಹರಿಯುತ್ತವೆ. ವೃತ್ತಿ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ಎಲ್ಲಾ ಕ್ಷೇತ್ರದವರಿಗೂ ಹೊಸ ಪ್ರೋತ್ಸಾಹ ದೊರೆಯುತ್ತದೆ. ವಾರದ ಆರಂಭದಲ್ಲಿ ಸ್ವಲ್ಪ ಧನವ್ಯಯದ ಸೂಚನೆಗಳಿವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡುವುದರಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
ವೃಷಭ ರಾಶಿ : ಕಾರ್ಯಗಳನ್ನು ಕೈಗೊಂಡ ಸಕಾಲದಲ್ಲಿ ಪೂರ್ಣಗೊಳಿಸುತ್ತೀರಿ. ಪ್ರಮುಖ ವ್ಯವಹಾರಗಳಲ್ಲಿ ಮಹತ್ವದ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುತ್ತೀರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಿ ದೀರ್ಘಕಾಲದ ಸಾಲಗಳನ್ನು ತೀರಿಸಲು ಸಾಧ್ಯವಾಗುತ್ತದೆ. ದೂರದ ಬಂಧುಗಳಿಂದ ದೊರೆಯುವ ಮಾಹಿತಿಯು ಸ್ವಲ್ಪ ನೆಮ್ಮದಿ ನೀಡುತ್ತದೆ. ಹೊಸ ವಾಹನ ಖರೀದಿ ಪ್ರಯತ್ನಗಳು ಫಲಪ್ರದವಾಗುತ್ತವೆ. ಗೃಹ ನಿರ್ಮಾಣ ಕಾರ್ಯಗಳನ್ನು ವೇಗಗೊಳಿಸುತ್ತೀರಿ. ಆಧ್ಯಾತ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಭಾಗವಹಿಸುತ್ತೀರಿ. ವಿದ್ಯಾರ್ಥಿಗಳು ತಮ್ಮ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಪಡೆಯುತ್ತಾರೆ. ಹೊಸ ವ್ಯಾಪಾರಗಳನ್ನು ಆರಂಭಿಸಿ ನಿರೀಕ್ಷಿತ ಲಾಭಗಳನ್ನು ಪಡೆಯುತ್ತೀರಿ. ಉದ್ಯೋಗದ ವಿಚಾರದಲ್ಲಿ ಬಯಸಿದ ರೀತಿಯಲ್ಲಿ ಸ್ಥಾನ ಬದಲಾವಣೆಗಳು ಸಂಭವಿಸುತ್ತವೆ. ಕೆಲವು ಕ್ಷೇತ್ರದವರಿಗೆ ಹಿರಿಯರಿಂದ ವಿಶೇಷ ಆದರ ದೊರೆಯುತ್ತದೆ. ವಾರದ ಕೊನೆಯಲ್ಲಿ ಶ್ರಮ ಹೆಚ್ಚಾಗುತ್ತದೆ. ಸ್ಥಿರಾಸ್ತಿ ಒಪ್ಪಂದಗಳು ಮುಂದೂಡಲ್ಪಡುತ್ತವೆ. ಗಣಪತಿ ಸ್ತೋತ್ರ ಪಾರಾಯಣ ಮಾಡುವುದರಿಂದ ಶುಭಫಲಿತಾಂಶಗಳನ್ನು ಪಡೆಯುತ್ತೀರಿ.
ಮಿಥುನ ರಾಶಿ : ಆಧ್ಯಾತ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೀರಿ. ಬಹುಕಾಲದಿಂದ ಬರಬೇಕಿದ್ದ ಬಾಕಿ ಹಣವನ್ನು ವಸೂಲಿ ಮಾಡಿಕೊಂಡು ಅಗತ್ಯಗಳನ್ನು ಪೂರೈಸಿಕೊಳ್ಳುತ್ತೀರಿ. ಶತ್ರುಗಳೂ ಸಹ ಸ್ನೇಹಿತರಾಗಿ ಸಹಾಯ ಮಾಡುತ್ತಾರೆ. ಸಹೋದರರೊಂದಿಗೆ ಉಂಟಾಗಿದ್ದ ಸ್ಥಿರಾಸ್ತಿ ವಿವಾದಗಳಿಂದ ಹೊರಬರುತ್ತೀರಿ. ಹಳೆಯ ಸ್ನೇಹಿತರನ್ನು ಭೇಟಿಯಾಗಿ ಪ್ರಮುಖ ವಿಷಯಗಳನ್ನು ಚರ್ಚಿಸುತ್ತೀರಿ. ಗೃಹ ನಿರ್ಮಾಣ ಪ್ರಯತ್ನಗಳಲ್ಲಿನ ಅಡೆತಡೆಗಳು ನಿವಾರಣೆಯಾಗಿ ಮುಂದುವರಿಯುತ್ತವೆ. ಸಮಾಜದಲ್ಲಿ ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗುತ್ತದೆ. ಸಂತಾನದ ವಿದ್ಯಾಭ್ಯಾಸದ ವಿಚಾರದಲ್ಲಿ ಶುಭಫಲಿತಾಂಶಗಳು ದೊರೆಯುತ್ತವೆ. ವೃತ್ತಿ ಹಾಗೂ ವ್ಯಾಪಾರದ ಕುರಿತು ಮಾಡುವ ಆಲೋಚನೆಗಳು ಲಾಭವನ್ನು ತಂದುಕೊಡುತ್ತವೆ. ಉದ್ಯೋಗಸ್ಥರಿಗೆ ಉನ್ನತ ಹುದ್ದೆಗಳು ದೊರೆಯುತ್ತವೆ. ಸಣ್ಣ ಕೈಗಾರಿಕೆಗಳಿಗೆ ಅನುಕೂಲಕರ ವಾತಾವರಣ ಇರುತ್ತದೆ. ವಾರದ ಕೊನೆಯಲ್ಲಿ ಖರ್ಚು ಹಾಗೂ ಪ್ರಯಾಸಗಳು ಹೆಚ್ಚಾಗುತ್ತವೆ. ಬಂಧುಮಿತ್ರರೊಂದಿಗೆ ವಿವಾದಗಳು ಉಂಟಾಗಬಹುದು. ಸ್ವಲ್ಪ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ನವಗ್ರಹ ಕವಚ ಸ್ತೋತ್ರ ಪಾರಾಯಣ ಮಾಡುವುದರಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
ಕರ್ಕ ರಾಶಿ : ಕೈಗೊಂಡ ಕಾರ್ಯಗಳಲ್ಲಿ ಅನಾಯಾಸವಾಗಿ ಕಾರ್ಯಸಿದ್ಧಿ ಉಂಟಾಗುತ್ತದೆ. ಮನೆಯಲ್ಲಿ ಆತ್ಮೀಯರೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತೀರಿ. ದೈವಸೇವಾ ಕಾರ್ಯಕ್ರಮಗಳಿಗೆ ಧನಸಹಾಯ ಮಾಡುತ್ತೀರಿ. ಬರಬೇಕಾದ ಹಣ ಕೈಗೆ ಸೇರುತ್ತದೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳಲ್ಲಿ ಕೈಗೊಂಡ ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತವೆ. ಮನೆಯಲ್ಲಿ ಹಾಗೂ ಹೊರಗೆ ವಿಶೇಷ ಆದರ ಹೆಚ್ಚಾಗುತ್ತದೆ. ದೀರ್ಘಕಾಲದ ವಿವಾದಗಳನ್ನು ಪರಿಹರಿಸಿಕೊಳ್ಳುತ್ತೀರಿ. ಸಂತಾನದ ವಿವಾಹ ಹಾಗೂ ಶುಭಕಾರ್ಯಗಳ ಕುರಿತು ಕುಟುಂಬದಲ್ಲಿ ಚರ್ಚೆಗಳು ನಡೆಯುತ್ತವೆ. ಉದ್ಯೋಗದ ವಿಚಾರದಲ್ಲಿ ಮೇಲಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ವೃತ್ತಿ ಹಾಗೂ ವ್ಯಾಪಾರಗಳು ಮತ್ತಷ್ಟು ಉತ್ಸಾಹದಿಂದ ಸಾಗುತ್ತವೆ. ನಿರುದ್ಯೋಗಿಗಳಿಗೆ ಅಡೆತಡೆಗಳು ನಿವಾರಣೆಯಾಗಿ ಹೊಸ ಅವಕಾಶಗಳು ದೊರೆಯುತ್ತವೆ. ವಾರದ ಆರಂಭದಲ್ಲಿ ಮಿತ್ರರೊಂದಿಗೆ ಸಣ್ಣಪುಟ್ಟ ಕಲಹದ ಸೂಚನೆಗಳಿವೆ. ಅನಾವಶ್ಯಕ ಖರ್ಚುಗಳು ಹೆಚ್ಚಾಗುತ್ತವೆ. ಲಕ್ಷ್ಮೀ ನರಸಿಂಹ ಕರಾವಲಂಬ ಸ್ತೋತ್ರ ಪಾರಾಯಣ ಮಾಡುವುದರಿಂದ ಶುಭಫಲಿತಾಂಶಗಳನ್ನು ಪಡೆಯುತ್ತೀರಿ.
ಸಿಂಹ ರಾಶಿ : ಬಹುಕಾಲದಿಂದ ಕಾಡುತ್ತಿರುವ ಸಮಸ್ಯೆಗಳು ಕ್ರಮೇಣ ನಿವಾರಣೆಯಾಗಿ ಪರಿಸ್ಥಿತಿಗಳು ಅನುಕೂಲಕರವಾಗುತ್ತವೆ. ಆತ್ಮೀಯರೊಂದಿಗೆ ಮನೆಯಲ್ಲಿ ಸಂತೋಷವಾಗಿ ಸಮಯ ಕಳೆಯುತ್ತೀರಿ. ಕುಟುಂಬ ವ್ಯವಹಾರಗಳಲ್ಲಿ ನಿಮ್ಮ ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತವೆ. ಸಮಾಜದಲ್ಲಿ ಪ್ರಮುಖ ವ್ಯಕ್ತಿಗಳೊಂದಿಗೆ ಪರಿಚಯಗಳು ಹೆಚ್ಚಾಗುತ್ತವೆ. ಸಹೋದರರೊಂದಿಗೆ ಉಂಟಾಗಿದ್ದ ವಿವಾದಗಳು ಪರಿಹಾರವಾಗುತ್ತವೆ. ಎಲ್ಲಾ ಕಡೆಗಳಿಂದಲೂ ಆದಾಯ ದೊರೆಯುತ್ತದೆ. ಆಧ್ಯಾತ್ಮಿಕ ವಿಷಯಗಳತ್ತ ಗಮನ ಹರಿಸುತ್ತೀರಿ. ಸಂತಾನದ ವಿವಾಹ ಪ್ರಯತ್ನಗಳನ್ನು ವೇಗಗೊಳಿಸುತ್ತೀರಿ. ನಿರುದ್ಯೋಗಿಗಳಿಗೆ ಹೆಚ್ಚಿನ ಪರಿಶ್ರಮಪಟ್ಟರೂ ನಿರೀಕ್ಷಿತ ಫಲಿತಾಂಶ ದೊರೆಯದೆ ಇರಬಹುದು. ಕೆಲವು ವ್ಯವಹಾರಗಳಲ್ಲಿ ಬಂಧುಗಳ ಸಲಹೆ ಪಡೆದು ಮುಂದುವರಿಯುವುದು ಉತ್ತಮ. ಹೊಸ ವಸ್ತ್ರ ಹಾಗೂ ಆಭರಣಗಳನ್ನು ಖರೀದಿಸುತ್ತೀರಿ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭಗಳು ದೊರೆಯುತ್ತವೆ. ವೃತ್ತಿ ಹಾಗೂ ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಪ್ರಶಂಸೆ ದೊರೆಯುತ್ತದೆ. ವಾರದ ಆರಂಭದಲ್ಲಿ ಸ್ವಲ್ಪ ಅನಾರೋಗ್ಯ ಸಮಸ್ಯೆಗಳು ಕಂಡುಬರಬಹುದು. ಆತುರದಿಂದ ಇತರರೊಂದಿಗೆ ಮಾತನಾಡುವುದು ಉತ್ತಮವಲ್ಲ. ಕನಕಧಾರಾ ಸ್ತೋತ್ರ ಪಾರಾಯಣ ಮಾಡುವುದರಿಂದ ಶುಭಫಲಿತಾಂಶಗಳನ್ನು ಪಡೆಯುತ್ತೀರಿ.
ಕನ್ಯಾ ರಾಶಿ : ದೀರ್ಘಕಾಲದಿಂದ ಕಾಡುತ್ತಿರುವ ಸಮಸ್ಯೆಗಳು ಪರಿಹಾರದ ದಿಕ್ಕಿನಲ್ಲಿ ಸಾಗುತ್ತವೆ. ಬಂಧುಮಿತ್ರರೊಂದಿಗಿನ ವಿವಾದಗಳು ನಿವಾರಣೆಯಾಗಿ ನೆಮ್ಮದಿ ದೊರೆಯುತ್ತದೆ. ಆರ್ಥಿಕವಾಗಿ ಚೇತರಿಸಿಕೊಳ್ಳುತ್ತೀರಿ. ಇತರರಿಂದ ಅನಿರೀಕ್ಷಿತ ಸಹಾಯ ಹಾಗೂ ಸಹಕಾರ ದೊರೆಯುತ್ತದೆ. ದೈವಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಿಮ್ಮ ಗೌರವವನ್ನು ಹೆಚ್ಚಿಸಿಕೊಳ್ಳುತ್ತೀರಿ. ಸ್ಥಿರಾಸ್ತಿಯಿಂದ ಲಾಭಪಡೆಯುತ್ತೀರಿ. ವಿದ್ಯಾರ್ಥಿಗಳ ಪ್ರಯತ್ನಗಳು ಮತ್ತಷ್ಟು ಉತ್ಸಾಹದಿಂದ ಸಾಗುತ್ತವೆ. ಹೊಸ ಖರೀದಿ ಪ್ರಯತ್ನಗಳು ಮುಂದುವರಿಯುತ್ತವೆ. ಆಧ್ಯಾತ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ವೃತ್ತಿ ಹಾಗೂ ವ್ಯಾಪಾರದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಲಾಭಪಡೆಯುತ್ತೀರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗಿನ ಭಿನ್ನಾಭಿಪ್ರಾಯಗಳು ನಿವಾರಣೆಯಾಗುತ್ತವೆ. ಎಲ್ಲಾ ಕ್ಷೇತ್ರದವರಿಗೂ ಅನುಕೂಲಕರ ವಾತಾವರಣ ಇರುತ್ತದೆ. ವಾರದ ಮಧ್ಯದಲ್ಲಿ ಅನಿರೀಕ್ಷಿತ ವಿವಾದಗಳು ಉಂಟಾಗಬಹುದು. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ರಾಮರಕ್ಷಾ ಸ್ತೋತ್ರ ಪಾರಾಯಣ ಮಾಡುವುದರಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
ತುಲಾ ರಾಶಿ : ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ಸಂತಾನದ ವಿದ್ಯಾಭ್ಯಾಸದ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ವೃತ್ತಿ ಹಾಗೂ ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಯಿಂದ ಎಲ್ಲರನ್ನೂ ಆಕರ್ಷಿಸುತ್ತೀರಿ. ಕುಟುಂಬ ವ್ಯವಹಾರಗಳಲ್ಲಿ ನಿಮ್ಮ ಆಲೋಚನೆಗಳು ಎಲ್ಲರಿಗೂ ಮೆಚ್ಚುಗೆಯಾಗುತ್ತವೆ. ಸ್ಥಿರಾಸ್ತಿ ವ್ಯವಹಾರದಲ್ಲಿ ಸಹೋದರರೊಂದಿಗೆ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುತ್ತೀರಿ. ಗೃಹ ನಿರ್ಮಾಣ ಪ್ರಯತ್ನಗಳು ಉತ್ಸಾಹದಿಂದ ಸಾಗುತ್ತವೆ. ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿ ಸಾಲಗಳನ್ನು ತೀರಿಸುತ್ತೀರಿ. ಸಮಾಜದಲ್ಲಿ ಹೆಸರು ಗಳಿಸಿರುವ ವ್ಯಕ್ತಿಗಳೊಂದಿಗೆ ಪರಿಚಯಗಳು ಉಂಟಾಗುತ್ತವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಧನಸಹಾಯ ಮಾಡುತ್ತೀರಿ. ವ್ಯಾಪಾರದಲ್ಲಿ ಹೊಸ ಹೂಡಿಕೆಗಳು ದೊರೆತು ವಿಸ್ತರಣೆ ಮಾಡಿಕೊಳ್ಳುತ್ತೀರಿ. ವೃತ್ತಿ ಹಾಗೂ ಉದ್ಯೋಗದಲ್ಲಿನ ಒತ್ತಡದಿಂದ ಹೊರಬರುತ್ತೀರಿ. ಕೆಲವು ಕ್ಷೇತ್ರದವರಿಗೆ ಅನಿರೀಕ್ಷಿತ ಅವಕಾಶಗಳು ದೊರೆಯುತ್ತವೆ. ವಾರದ ಕೊನೆಯಲ್ಲಿ ಕಾರ್ಯಗಳಲ್ಲಿ ಹೆಚ್ಚಿನ ಶ್ರಮ ಅಗತ್ಯವಾಗುತ್ತದೆ. ಮಿತ್ರರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಶಿವ ಸಹಸ್ರನಾಮ ಸ್ತೋತ್ರ ಪಾರಾಯಣ ಮಾಡುವುದರಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
ವೃಶ್ಚಿಕ ರಾಶಿ : ಕೈಗೊಂಡ ಕಾರ್ಯಗಳಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರುತ್ತದೆ. ಸ್ನೇಹಿತರಿಂದ ಅಮೂಲ್ಯವಾದ ಮಾಹಿತಿ ದೊರೆಯುತ್ತದೆ. ಪ್ರಮುಖ ವ್ಯಕ್ತಿಗಳೊಂದಿಗೆ ಉಂಟಾಗುವ ಪರಿಚಯಗಳು ಲಾಭದಾಯಕವಾಗುತ್ತವೆ. ಮಿತ್ರರೊಂದಿಗಿನ ವಿವಾದಗಳನ್ನು ಜಾಣ್ಮಯಿಂದ ಪರಿಹರಿಸಿಕೊಳ್ಳುತ್ತೀರಿ. ಆಸ್ತಿ ವ್ಯವಹಾರಗಳಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುತ್ತೀರಿ. ಮನೆಯಲ್ಲಿ ಹಾಗೂ ಹೊರಗೆ ನಿಮ್ಮ ನಿರ್ಧಾರಕ್ಕೆ ಎಲ್ಲರೂ ಗೌರವ ನೀಡುತ್ತಾರೆ. ಕುಟುಂಬ ಸದಸ್ಯರೊಂದಿಗೆ ಸೌಹಾರ್ದತೆ ಹೆಚ್ಚಾಗುತ್ತದೆ. ಸಂತಾನದ ಉದ್ಯೋಗ ಹಾಗೂ ವಿವಾಹ ಪ್ರಯತ್ನಗಳು ಅನುಕೂಲಕರವಾಗಿ ಫಲಿಸುತ್ತವೆ. ದೈವಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ವೃತ್ತಿ ಹಾಗೂ ವ್ಯಾಪಾರದಲ್ಲಿ ಹೊಸ ಹೂಡಿಕೆಗಳನ್ನು ಮಾಡಿ ಲಾಭಪಡೆಯುತ್ತೀರಿ. ವಹಿಸಲಾದ ಉದ್ಯೋಗದಲ್ಲಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತೀರಿ. ಎಲ್ಲಾ ಕ್ಷೇತ್ರದವರಿಗೂ ಅನುಕೂಲಕರ ಪರಿಸ್ಥಿತಿಗಳು ಇರುತ್ತವೆ. ವಾರದ ಆರಂಭದಲ್ಲಿ ಪ್ರಯಾಣಗಳನ್ನು ಮುಂದೂಡುವುದು ಉತ್ತಮ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಹನುಮಾನ್ ಚಾಲೀಸಾ ಪಾರಾಯಣ ಮಾಡುವುದರಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ಧನು ರಾಶಿ : ಹೊಸ ಕಾರ್ಯಕ್ರಮಗಳನ್ನು ಆರಂಭಿಸಿ ಸಕಾಲದಲ್ಲಿ ಪೂರ್ಣಗೊಳಿಸುತ್ತೀರಿ. ಮನೆಗೆ ಬಂಧುಮಿತ್ರರ ಆಗಮನ ಸಂತೋಷವನ್ನು ಉಂಟುಮಾಡುತ್ತದೆ. ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿರುತ್ತದೆ. ಮನೆಯಲ್ಲಿ ಹಾಗೂ ಹೊರಗೆ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತೀರಿ. ಬಾಲ್ಯದ ಸ್ನೇಹಿತರೊಂದಿಗೆ ಸಂಪರ್ಕ ಹಾಗೂ ಸಂವಹನ ಮುಂದುವರಿಯುತ್ತದೆ. ಹೊಸ ಗೃಹ ನಿರ್ಮಾಣ ಪ್ರಯತ್ನಗಳು ಅನುಕೂಲಕರವಾಗಿ ಫಲಿಸುತ್ತವೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳಿಂದ ಹೊರಬರುತ್ತೀರಿ. ಕೆಲವು ವ್ಯವಹಾರಗಳಲ್ಲಿ ಹಿರಿಯರ ಸಲಹೆ ಪಡೆದು ಮುಂದುವರಿಯುವುದು ಉತ್ತಮ. ವ್ಯಾಪಾರದಲ್ಲಿ ಹಿಂದಿನದಕ್ಕಿಂತ ಉತ್ತಮ ಲಾಭಗಳು ದೊರೆಯುತ್ತವೆ. ವೃತ್ತಿ ಹಾಗೂ ಉದ್ಯೋಗದಲ್ಲಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತೀರಿ. ಎಲ್ಲಾ ಕ್ಷೇತ್ರದವರಿಗೂ ಉತ್ಸಾಹಭರಿತ ವಾತಾವರಣ ಇರುತ್ತದೆ. ವಾರದ ಆರಂಭದಲ್ಲಿ ಬಂಧುಮಿತ್ರರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗಬಹುದು. ಹೊಸ ಸಾಲದ ಪ್ರಯತ್ನಗಳನ್ನು ಮಾಡುತ್ತೀರಿ. ದೇವೀ ಖಡ್ಗಮಾಲಾ ಸ್ತೋತ್ರ ಪಾರಾಯಣ ಮಾಡುವುದರಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
ಮಕರ ರಾಶಿ : ಶತ್ರುಗಳೂ ಸಹ ಸ್ನೇಹಿತರಾಗಿ ಸಹಾಯ ಮಾಡುತ್ತಾರೆ. ಆತ್ಮೀಯರೊಂದಿಗೆ ಚರ್ಚಿಸಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ಬರಬೇಕಾದ ಹಣ ಅಗತ್ಯ ಸಮಯದಲ್ಲಿ ಕೈಗೆ ದೊರೆಯುತ್ತದೆ. ಕುಟುಂಬ ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುತ್ತೀರಿ. ಮಿತ್ರರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ಸ್ಥಿರಾಸ್ತಿ ವಿವಾದಗಳಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುತ್ತೀರಿ. ಸಂತಾನದ ವಿಚಾರದಲ್ಲಿ ಶುಭವಾರ್ತೆಗಳು ದೊರೆಯುತ್ತವೆ. ಆಧ್ಯಾತ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ನೀವು ಕೈಗೊಳ್ಳುವ ನಿರ್ಧಾರಗಳು ಎಲ್ಲರಿಗೂ ಮೆಚ್ಚುಗೆಯಾಗುತ್ತವೆ. ನಿರು ನಿರುದ್ಯೋಗಿಗಳ ಉದ್ಯೋಗ ಪ್ರಯತ್ನಗಳು ಯಶಸ್ವಿಯಾಗುತ್ತವೆ. ವೃತ್ತಿ ಹಾಗೂ ವ್ಯಾಪಾರಗಳು ಲಾಭದ ಹಾದಿಯಲ್ಲಿ ಸಾಗುತ್ತವೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿದ್ದರೂ ನಿಗದಿತ ಸಮಯಕ್ಕೆ ಕಾರ್ಯಗಳನ್ನು ಪೂರ್ಣಗೊಳಿಸಿ ನೆಮ್ಮದಿ ಪಡೆಯುತ್ತೀರಿ. ಕೆಲವು ಕ್ಷೇತ್ರದವರಿಗೆ ಅಮೂಲ್ಯವಾದ ಮಾಹಿತಿ ದೊರೆಯುತ್ತದೆ. ವಾರದ ಮಧ್ಯದಲ್ಲಿ ಆರ್ಥಿಕವಾಗಿ ಕೆಲವು ತೊಂದರೆಗಳು ಎದುರಾಗಬಹುದು. ಲಿಂಗಾಷ್ಟಕ ಪಾರಾಯಣ ಮಾಡುವುದರಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
ಕುಂಭ ರಾಶಿ : ಕೈಗೊಂಡ ಕಾರ್ಯಗಳು ಮುಂದೂಡಲ್ಪಡುತ್ತವೆ. ಕುಟುಂಬದ ವಿಚಾರಗಳಲ್ಲಿ ಆಲೋಚನೆಗಳಲ್ಲಿ ಸ್ಥಿರತೆ ಇರುವುದಿಲ್ಲ. ಆರೋಗ್ಯ ಸಮಸ್ಯೆಗಳು ಸ್ವಲ್ಪ ಕಾಡಬಹುದು. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಹಳೆಯ ವಿಷಯಗಳನ್ನು ನೆನಪಿಸಿಕೊಂಡು ಬೇಸರಗೊಳ್ಳುವ ನಿರುದ್ಯೋಗ ಪ್ರಯತ್ನಗಳು ಸಾಧ್ಯತೆ ಇದೆ. ಅಷ್ಟಾಗಿ ಅನುಕೂಲಕರವಾಗಿರುವುದಿಲ್ಲ. ಮಿತ್ರರೊಂದಿಗೆ ವಿವಾದಗಳಿಗೆ ದೂರವಿರುವುದು ಉತ್ತಮ. ಗೃಹ ನಿರ್ಮಾಣ ಪ್ರಯತ್ನಗಳು ಮಂದಗತಿಯಲ್ಲಿ ಸಾಗುತ್ತವೆ. ವ್ಯಾಪಾರಸ್ಥರಿಗೆ ಪರಿಶ್ರಮಕ್ಕೆ ತಕ್ಕ ಫಲಿತಾಂಶ ದೊರೆಯದೆ ಇರಬಹುದು. ಉದ್ಯೋಗಸ್ಥರಿಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಎಲ್ಲಾ ಕ್ಷೇತ್ರದವರಿಗೂ ಗೊಂದಲಮಯ ಪರಿಸ್ಥಿತಿಗಳು ಕಂಡುಬರುತ್ತವೆ. ವಾರದ ಮಧ್ಯದಲ್ಲಿ ಸ್ವಲ್ಪ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ. ಹೊಸ ವಾಹನ ಖರೀದಿಸುವ ಸಾಧ್ಯತೆ ಇದೆ. ಸ್ವಲ್ಪ ಧನಲಾಭದ ಸೂಚನೆಗಳಿವೆ. ಲಕ್ಷ್ಮೀ ಸಹಸ್ರನಾಮ ಸ್ತೋತ್ರ ಪಾರಾಯಣ ಮಾಡುವುದರಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.
ಮೀನ ರಾಶಿ : ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳಿದ್ದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಬಂಧುಮಿತ್ರರಿಂದ ಶುಭಕಾರ್ಯಗಳ ಆಹ್ವಾನಗಳು ದೊರೆಯುತ್ತವೆ. ಅಗತ್ಯ ಸಮಯದಲ್ಲಿ ಹಣ ಕೈಗೆ ದೊರೆಯುತ್ತದೆ. ಬಾಲ್ಯದ ಸ್ನೇಹಿತರೊಂದಿಗೆ ಮನೆಯಲ್ಲಿ ಸಂತೋಷದಿಂದ ಸಮಯ ಕಳೆಯುತ್ತೀರಿ. ಆಧ್ಯಾತ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುತ್ತೀರಿ. ಕೆಲವು ವ್ಯವಹಾರಗಳಲ್ಲಿ ಕುಟುಂಬದ ಹಿರಿಯರ ಸಲಹೆ ಪಡೆದು ಮುಂದುವರಿಯುವುದು ಉತ್ತಮ. ಮನೆಯಲ್ಲಿ ಹಾಗೂ ಹೊರಗೆ ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗುತ್ತದೆ. ಬಹುಕಾಲದಿಂದ ಮಾಡುತ್ತಿರುವ ಪರಿಶ್ರಮಕ್ಕೆ ಫಲ ದೊರೆತು ಹೊಸ ಅವಕಾಶಗಳು ಲಭಿಸುತ್ತವೆ. ಹೊಸ ಗೃಹ ನಿರ್ಮಾಣ ಕಾರ್ಯಗಳನ್ನು ಆರಂಭಿಸುತ್ತೀರಿ. ವೃತ್ತಿ ಹಾಗೂ ವ್ಯಾಪಾರದಲ್ಲಿ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ. ಉದ್ಯೋಗದ ವಿಚಾರದಲ್ಲಿ ಅಧಿಕಾರಿಗಳೊಂದಿಗೆ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತೀರಿ. ಎಲ್ಲಾ ಕ್ಷೇತ್ರದವರಿಗೂ ಸ್ವಲ್ಪ ಅನುಕೂಲಕರ ವಾತಾವರಣ ಇರುತ್ತದೆ. ವಾರದ ಕೊನೆಯಲ್ಲಿ ಕಾರ್ಯಗಳಲ್ಲಿ ಖರ್ಚು ಹಾಗೂ ಪ್ರಯಾಸಗಳು ಹೆಚ್ಚಾಗುತ್ತವೆ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕು. ವಿಷ್ಣು ಪಂಜರ ಸ್ತೋತ್ರ ಪಾರಾಯಣ ಮಾಡುವುದರಿಂದ ಶುಭಫಲಿತಾಂಶಗಳನ್ನು ಪಡೆಯುತ್ತೀರಿ.