ವರಕವಿ ಬೆಂದ್ರೆ
ವೀರಮಾರ್ಗ ನ್ಯೂಸ್ : ಅಂಬಿಕಾತನಯ ದತ್ತ ದುಂಡನೆ ಉಂಡೆಯ ಸುತ್ತ
ಯಾವುದೇ ಭಾಗವ ಸವಿದರೂ
ಸಾಹಿತ್ಯ ಸವಿರುಚಿ ತೆರೆದರು ||ಪ ||
ಪದಪದವ ಹದಮಾಡಿ ನಾದ್ಯಾನ ಹಾಡ್ಯಾನ
ಮೈಮರೆತು ದತ್ತಣ್ಣ ಕುಣಿದಾನ
ಕುಣಿದಾನ ಮಣಿದಾನ ಸರಸತಿಯ ಪಾದಕ್ಕ
ನುಡಿಭಕ್ತಿ ಮುಡಿಯಿಂದ ಇಳುವ್ಯಾನ 1

ಬಡನೂರು ವರುಷಾನ ಹರುಷಾದಿ ಕಳೆಯಲು
ದುಃಖದ ಕಡಲನ್ನು ಕಡೆದಾನ
ನವಮಾಸ ತುಂಬಿರುವ ಸಾಹಿತ್ಯ ಕೂಸುಗಳ
ಜಗದೊಳಗೆ ಹಡೆದೀವ ಒಗೆದಾನ 2
ಬೆಂದವನು ನೆಂದವನು ನೊಂದವನು ಕಡಲೀಜಿ
ನೋವುಗಳ ಮಾಲೆಯನು ಕಟ್ಯಾನು
ಚಿಕ್ಕಪ್ಪ ಹಡೆದವ್ವ ಅಜ್ಜೀಯ ಅಕ್ಕರೆಗೆ
ಬಾಂಧವ್ಯ ಬೇಲಿಯನು ಬಿಗಿದಾನು 3
ನಾದಲೀಲೆಯ ಗುಂಗು ಸಖಿಗೀತದಖ್ಯಾನ
ಧಾರವಾಡದ ಭಾಷೆ ಉಡಿಸ್ಯಾನ
ನಾಕು ತಂತಿಯ ಬಿಗಿದು ಕತ್ತೀಗೆ ನೊಗವಿಟ್ಟು
ನಂದನವನ ಭೂಮ್ಯಾಗ ಬೆಳೆದಾನ 4
ಸಾಧನಕೇರಿಯ ಹುಡುಗ ಸಾಧನೆಯ ಶಿಖರದಲಿ
ದ್ರುವತಾರೆಯಾಗಿ ತಾ ಉಳಿದಾನ
ಜೀವನದ ಹೊಡೆತಕ್ಕೆ ಅಡ್ಡಡ್ಡ ಸೀಳ್ಯಾನ
ಸಾವರಿಸಿ ಬಿದ್ದಲ್ಲೆ ಎದ್ದಾನ 5

ಸಂಜೀಯ ವ್ಯಾಳ್ಯಕ ಮುಗಿಲೀಗೆ ಮುತ್ತಿಟ್ಟ
ವಾರದಲಿ ಮೂರುಸರತಿ ಹೋದಾಂವ
ರೊಕ್ಕದ ಹಿಡಿತೋರಿ ಹಿಡಿದಪ್ಪಿ ಕೊಂಡಾಂವ
ಕಸಿಯಂಗಿ ರುಮಾಲು ಕಳೆದಾಂವ 6
ಬರಹ : ಜೀವರಾಜ ಹ ಛತ್ರದ.