ಪೊಲೀಸಪ್ಪನೇ ಕಳ್ಳರ ಗ್ಯಾಂಗಿಗೆ ಲೀಡ‌ರ್,

ಪೊಲೀಸಪ್ಪನೇ ಕಳ್ಳರ ಗ್ಯಾಂಗ್ ಲೀಡ‌ರ್, ತನ್ನದೇ ಸ್ಟೇಷನಲ್ಲಿ ಕಂಬಿ ಹಿಂದೆ ಕಾನ್‌ಸ್ಟೇಬಲ್‌: ಗೌಡರ ಮನೆ ಕಳ್ಳತನ ಕೇಸ್‌ಗೆ ಟ್ವಿಸ್ಟ್!

ಹಾವೇರಿ SP ಮಾರ್ಗದರ್ಶನದ ಮೇರೆಗೆ ರಾಣೆಬೆನ್ನೂರ್ DYSP ಲೋಕೇಶ್ ಜಿ ಅವರು ಎರಡರಿಂದ ಮೂರು ತಂಡಗಳನ್ನು ರಚನೆ ಮಾಡಿಕೊಂಡು, ಹಗಲಿರಳು ಶ್ರಮಕ್ಕೆ ಫಲ,

ಪೊಲೀಸ್ ಇಲಾಖೆಯಲ್ಲೆ ನುರಿತ ಪೊಲೀಸ್ ಕಾನ್ಸ್ಟೇಬಲ್ ಇರುವುದರಿಂದ ಸಾಕ್ಷಿ ಸಿಗದ ಹಾಗೆ ಏನೆಲ್ಲಾ ಪ್ರಯತ್ನಗಳನ್ನ ಮಾಡಿದ್ದಾರೆ, ಸಾಕ್ಷಿ ನಾಶಕ್ಕೆ ಮಾಡಿರುವುದು ಕಂಡು ಬಂದಿದೆ ಅನ್ನುವ ಮಾಹಿತಿ ದೊರಕಿದೆ.

ಸಾರ್ವಜನಿಕರ ಆಸ್ತಿ ರಕ್ಷಿಸಬೇಕಾದ ಪೊಲೀಸ್‌ ಕಾನ್ಸ್‌ಟೇಬಲ್‌ ಓರ್ವನೇ ಕಳ್ಳರ ತಂಡಕ್ಕೆ ನಾಯಕನಾಗಿ ತೋಟದ ಮನೆಯಲ್ಲಿ ದರೋಡೆ ಮಾಡಿಸಿದ್ದಾನೆ. ಗ್ರಾಮದ ಅಳಿಯನಾಗಿದ್ದ ಈತ, ಕಳ್ಳತನಕ್ಕೆ ಪಕ್ಕಾ ಸ್ಕೆಚ್ ಹಾಕಿಕೊಟ್ಟಿದ್ದು, ಇದೀಗ ಐವರು ಆರೋಪಿಗಳ ಸಹಿತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಹಾವೇರಿ ಜಿಲ್ಲಾ : ಹಿರೇಕೆರೂರ ತಾಲೂಕು : ರಕ್ಷಣೆ ಮಾಡಬೇಕಾದ ರಕ್ಷಕರೇ ಭಕ್ಷಕರಾದರೆ ಹೇಗೆ,,? ಎಂಬ ಪ್ರಶ್ನೆ ಹಾವೇರಿ ಜಿಲ್ಲೆಯಲ್ಲಿ ನಡೆದ ಈ ಪ್ರಕರಣಕ್ಕೆ ಅಕ್ಷರಶಃ ಕನ್ನಡಿ ಹಿಡಿದಂತಿದೆ. ಸಾರ್ವಜನಿಕರ ಆಸ್ತಿ-ಪಾಸ್ತಿ ಕಾಪಾಡಬೇಕಾದ ಪೊಲೀಸ್ ಇಲಾಖೆಯ ಕಾನ್ಸ್‌ಟೇಬಲ್ ಒಬ್ಬನೇ ಒಬ್ಬ, ಕಳ್ಳರ ತಂಡಕ್ಕೆ ಗುರುವಾಗಿ ನಿಂತು ತೋಟದ ಮನೆಯೊಂದರಲ್ಲಿ ಭರ್ಜರಿ ಕಳ್ಳತನ ಮಾಡಿಸಲು ‘ಮಾಸ್ಟರ್ ಮೈಂಡ್’ ಆಗಿ ಕೆಲಸ ಮಾಡಿರುವ ಆಘಾತಕಾರಿ ಘಟನೆ ಹಿರೇಕೆರೂರು ತಾಲೂಕಿನಲ್ಲಿ ನಡೆದಿದ್ದು ಪ್ರಕರ್ಣ ಬೆಳಕಿಗೆ ಬಂದಿದೆ.

ಈ ಪ್ರಕರಣ ಹೇಗೆ ನೆಡೆದಿತ್ತು,,,?

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಳೆ ನಿಡುನೇಗಿಲು ಗ್ರಾಮದಲ್ಲಿ ಕಳೆದ ಜನವರಿ 19 ರಂದು ರಾತ್ರಿ 11.30ರ ಸುಮಾರಿಗೆ ಭಾರೀ ಕಳ್ಳತನ ನಡೆದಿತ್ತು. ಊರಿನ ಹೊರವಲಯದಲ್ಲಿರುವ ಮಲ್ಲನಗೌಡ ಈಶ್ವರಗೌಡರವರ ಮನೆಗೆ ಸರಿ ಸುಮಾರ ರಾತ್ರಿ 11.30ರ ಸುಮಾರಿಗೆ ಕಳ್ಳರ ಗುಂಪುಒಂದು ಊರಿನ ಹೊರವಲಯದಲ್ಲಿರುವ ಮಲ್ಲನಗೌಡ ಈಶ್ವರಗೌಡ ಪಾಟೀಲ್‌ ಎಂಬುವವರ ತೋಟದ ಮನೆಯನ್ನು ನುಗ್ಗಿ ಮಹಿಳೆಯರು ಇರುವದನ್ನು ಖಚಿತ ಪಡೆಸಿಕೊಂಡು ಮಾರಕಾಸ್ತ್ರಗಳಿಂದ ಅಲ್ಲೇ ಮಾಡುವುದಾಗಿ ಹೆದರಿಸಿ ಹಗ್ಗದಿಂದ ಕೈಕಾಲುಗಳನ್ನು ಕಟ್ಟಿ , ದರೋಡೆ ಮಾಡಿ ಪರಾರಿಯಾಗಿದ್ದರು.

ಒಂಟಿ ಮನೆಯೇ ಗುರಿಯಾಗಿಸಿಕೊಂಡಿದ್ದ ಕಳ್ಳರು, ಮನೆಯ ಹಿಂದಿನ ಬಾಗಿಲ ಲಾಕ್ ಮುರಿದು ಒಳನುಗ್ಗಿದ್ದರು. ಮನೆಯಲ್ಲಿದ್ದ ಬರೋಬ್ಬರಿ 9 ತೊಲೆ ಬಂಗಾರ, ಅರ್ಧ ಕೆಜಿ ಬೆಳ್ಳಿ ಹಾಗೂ 5 ಲಕ್ಷ ರೂಪಾಯಿ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು.

ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿದ್ದು ಬೆಚ್ಚಿಬೀಳಿಸುವ ಮಾಹಿತಿ. ಈ ಕಳ್ಳತನದ ಹಿಂದಿನ ಸೂತ್ರಧಾರಿ ಬೇರೆ ಯಾರೂ ಆಗಿರದೆ, ಪೊಲೀಸ್‌ ಇಲಾಖೆಯಲ್ಲೇ ಸೇವೆ ಸಲ್ಲಿಸುತ್ತಿದ್ದ ಕಾನ್ಸ್‌ಟೇಬಲ್ ಪ್ರದೀಪ್ ನಾಯ್ಕ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ಪ್ರದೀಪ್ ನಾಯಕ್ ಹಳೆ ನಿಡುನೇಗಿಲು ಗ್ರಾಮದ ಅಳಿಯ. ಹೀಗಾಗಿ ಆತನಿಗೆ ಆ ಗ್ರಾಮದ ಪ್ರತಿಯೊಂದು ಮನೆಮನೆಯಲ್ಲೂ, ನಾಕಾಶ ರೂಪದಲ್ಲಿ ಮಾಹಿತಿ ಇತ್ತು, ಅಲ್ಲಿಯ ಸ್ಥಿತಿಗತಿ ಮತ್ತು ಜನರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಲೇ ಇದ್ದ ಪೋಲಿ ಕಳ್ಳಪೋಲಿಸ್ ಅಳಿಯ.