ಬಾಗಲಕೋಟಿ ಜಿಲ್ಲಾ :ಹುನಗುಂದ-ಇಲಕಳ್ ತಾಲೂಕ : ಲಿಂಗಾಯತ ಪಂಚಮಸಾಲಿ ಸಮಾಜದ ಗಣ್ಯ ನಾಯಕರು ಕೂಡಲಸಂಗಮ ಶ್ರೀಪೀಠದ ನಿಷ್ಠಾವಂತ ಭಕ್ತರೂ ಹಾಗೂ ಹಿರಿಯ ಸಹಕಾರಿ ಧುರೀಣರೂ ಆಗಿದ್ದ ಇವರು, (ಎಂಎಸ್ ಪಾಟೀಲರವರು) ಇಂದು ಲಿಂಗೈಕ್ಯರಾಗಿರುವ ಸುದ್ದಿ ತಿಳಿದು ತುಂಬಾ ದುಃಖವಾಯಿತು.
ಲಿಂಗೈಕ್ಯ ಪಾಟೀಲರವರಿಗೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ.
ಇಳಕಲ್ ಕಿಲ್ಲೆ ಓಣಿಯ ಹೆಸರಾಂತ ಗೌಡರ ಮನೆತನದ ಹಿರಿಯರಾದ ಎಂಎಸ್ ಪಾಟೀಲ್ ರವರು ಸಮಾಜ ಸೇವೆಯನ್ನು ಉಸಿರಾಗಿಸಿಕೊಂಡು ಬಡವರ ಪರವಾಗಿ ಯಾವಾಗಲೂ ಧ್ವನಿ ಎತ್ತುವ ವ್ಯಕ್ತಿತ್ವದವರು.
ಅನೇಕ ಸಂಘ ಸಂಸ್ಥೆಗಳು ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಟೀಲ್ ರ ಬಡವರ ಪರ ಖಾಳಜಿಯನ್ನು ಕಂಡು ಒಮ್ಮೆ ವಿಧಾನಸಾಭಾ ಚುನಾವಣೆಗೂ ಸ್ಪರ್ಧಿಸಿ ರಾಜಕೀಯ ಕ್ಷೇತ್ರದಲ್ಲಿಯೂ ಜಿಲ್ಲೆಯಲ್ಲಿ ಹೆಸರು ಮಾಡಿದ್ದರು.

ಇಳಕಲ್ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ನಿರ್ದೇಶಕರರಾಗಿ 8 ಬಾರಿ ಚುನಾವಣೆ ಗೆದ್ದು ಸಹಕಾರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.
ಕೂಡಲಸಂಗಮದಲ್ಲಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಸ್ಥಾಪನೆಯಾದಗಿನಿಂದ ಇಲ್ಲಿಯವರೆಗೆ ನಿಷ್ಠೆಯಿಂದ ಪೀಠದ ಸೇವಾ ಕಾರ್ಯವನ್ನು ನಿಸ್ವಾರ್ಥವಾಗಿ ಮಾಡಿದ್ದಾರೆ.
2009 ರಲ್ಲಿ ಪ್ರಥಮ ಪೀಠಾರೋಹನ ವಾರ್ಷಿಕೋತ್ಸವವನ್ನು ಚಿನ್ನಪುರ ಗ್ರಾಮದಲ್ಲಿ ಆಚರಿಸಿ ಶ್ರೀಪೀಠದ ಘನತೆಯನ್ನು ಬೆಳಗುವ ಪ್ರಯತ್ನ ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ.
ಇತ್ತೀಚೀನ ನಮ್ಮ ಕಷ್ಟಕಾಲದಲ್ಲಿ ಗಟ್ಟಿಯಾಗಿ ಶಕ್ತಿಯಾಗಿ ನಿಂತಿದ್ದ ಪಾಟೀಲ್ರನ್ನು ಕಳೆದುಕೊಂಡು ಸಮಾಜ ಬಡವಾಗಿದೆ ಎಂದರೆ ತಪ್ಪಾಗಲಾರದು.
ನಮ್ಮ ಪಾದಯಾತ್ರೆ ಹಾಗೂ ಇಂದಿನವರೆಗೂ ನಡೆಯುತ್ತಿರುವ ಮೀಸಲಾತಿ ಚಳುವಳಿಗೆ ರೊಟ್ಟಿ ಬುತ್ತಿ ಕಟ್ಟಿಕೊಂಡು ಬಂದು ದಾಸೋಹ ಮಾಡುತ್ತಿದ್ದರು.
ಈ ವರ್ಷ ಶ್ರಾವಣ ಮಾಸದಲ್ಲಿ ಪೀಠದಲ್ಲಿ ನಿರಂತರ ದಾಸೋಹಕ್ಕೆ ಅವರೇ ಪ್ರೇರಕರಾಗಿದ್ದರೆ ಎಂಬುದನ್ನು ಸ್ಮರಿಸುತ್ತೆವೆ.
ಅವರ ಮನೆತನ ದಾಸೋಹದ ಮನೆತನ. ಕಳೆದ ತಿಂಗಳು ನಿರಂತರವಾಗಿ ಅವರ ಮಕ್ಕಳು ಹಾಗೂ ಕುಟುಂಬ ಸದಸ್ಯರ ಸಮೇತ ಪ್ರಸಾದ ಕಟ್ಟಿಕೊಂಡು ಬಂದು ಬಂದಂತಹ ಭಕ್ತರಿಗೆಲ್ಲ ದಾಸೋಹ ಮಾಡಿ ನಮಗೆ ಆತ್ಮಸ್ಥೈರ್ಯ ತುಂಬವ ಅವರ ಮಾತುಗಳು ಮರೆಯಲು ಸಾಧ್ಯವಿಲ್ಲ.
ಅವರ ಪುತ್ರರಾದ ರವಿ , ಶಶಿ , ವಿಜಯ ಹಾಗೂ ಕಟುಂಬದವರಿಗೆ ಆಗಿರುವ ನೋವಿನಲ್ಲಿ ನಾವೂ ಭಾಗಿಯಾಗಿದ್ದೇವೆ.
ದುಃಖವನ್ನು ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತ ಕೂಡಲ ಸಂಗಮದೇವನು , ವಿಶ್ವಗುರು ಬಸವಣ್ಣನವರು , ಜಗನ್ಮಾತೆ ಅಕ್ಕಮಹಾದೇವಿ ಹಾಗೂ ರಾಷ್ಟ್ರ ಮಾತೆ ಚನ್ನಮ್ಮ ತಾಯಿ ಕರುಣಿಸಲೆಂದು ಪ್ರಾರ್ಥತಿಸುತ್ತೇವೆ.
ಇಂದು ಜುಲೈ 16 ಸಂಜೆ 4 ಗಂಟೆಗೆ ಇಳಕಲ್ ಅವರ ಹೊಲದಲ್ಲಿ ಅಂತ್ಯ ಕ್ರಿಯೆ ಜರಗುವುದು.
ಶರಣುಗಳೊಂದಿಗೆ ,
ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ. ಪಂಚಮಸಾಲಿ ಪೀಠ , ಕೂಡಲ ಸಂಗಮ.

ದಾವಣಗೆರೆ ಜಿಲ್ಲಾ : ದೊಡ್ಡಬಾತಿ ತಪೋವನದಲ್ಲಿ ಅದ್ದೂರಿ ಸ್ವತಂತ್ರ ದಿನಾಚರಣೆ.
ತಪೋವನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮೆಡಿಕಲ್ ಕಾಲೇಜು ಮತ್ತು
ನರ್ಸಿಂಗ್ ಕಾಲೇಜಿನ ಜಂಟಿ ಸಹಯೋಗದಲ್ಲಿ
79ನೆ ಸ್ವತಂತ್ರ ದಿನಾಚರಣೆ. ಅಚ್ಚುಕಟ್ಟಾಗಿ ಆಚರಣೆ ಮಾಡಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಡಾ ಶಶಿಕುಮಾರ್ ಮೆಹರ್ವಾಡೆ ಇವರು ವಹಿಸಿ ಧ್ವಜಾರೋಹಣ ಮಾಡಿದರು
ಮುಖ್ಯ ಅತಿಥಿಗಳಾಗಿ ಮೇಜರ್ ಡಾ.ಎಂ. ಸಿ.ರೂಪ ನಿವೃತ್ತ ಶಿಕ್ಷಣ ಅಧಿಕಾರಿ ಶ್ರೀ ನಾಗಪ್ಪಾ ಭಾಗಿವಹಿಸಿದ್ದರು.