ಕಲಾವಿದ, ನಟ ಇನ್ನಿಲ್ಲ…

ಕಲಾವಿದ, ನಟ ಯಶವಂತ ಸರದೇಶಪಾಂಡೆ ಇನ್ನಿಲ್ಲ

ವೀರಮಾರ್ಗ ನ್ಯೂಸ್ : ಬೆಂಗಳೂರು : ರಂಗಭೂಮಿ ಕಲಾವಿದ,ಯಶವಂತ,ಸರದೇಶಪಾಂಡೆ,ನಿಧನರಾಗಿದ್ದಾರೆ. ಹೃಯಾಘಾತದಿಂದ ಹುಬ್ಬಳ್ಳಿಯವರಾದ ಯಶವಂತ ಸರದೇಶಪಾಂಡೆ ಕನ್ನಡ ಸಿನಿಲೋಕಕ್ಕೆ ವಿದಾಯ ಹೇಳಿದ್ದಾರೆ.

ಕಿರುತೆರೆಗೆ ಒಂದು ದೊಡ್ಡ ಆಘಾತ ಎದುರಾಗಿದೆ. ಹಿರಿಯ ನಟ ಮತ್ತು ಹಾಸ್ಯ ನಾಟಕಕಾರ ಯಶವಂತ ಸರದೇಶಪಾಂಡೆ ನಿಧನರಾಗಿದ್ದಾರೆ. ಯಶವಂತ ಸರದೇಶಪಾಂಡೆ (60) ಅವರು ಇಂದು ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಹುಬ್ಬಳ್ಳಿ ಮೂಲದ ಈ ಖ್ಯಾತ ಕಲಾವಿದರ ನಿಧನಕ್ಕೆ ಇಡೀ ರಂಗಭೂಮಿ ಶೋಕಸಾಗರದಲ್ಲಿ ಮುಳುಗಿದೆ, ನಾಟಕಗಳಲ್ಲಿ ಭಾಗವಹಿಸುತ್ತಿದ್ದು ಅಲ್ಲದೇ ಅನೇಕ ಸಿನಿಮಾಗಳಲ್ಲು ಯಶವಂತ್ ಮಿಂಚಿದ್ದಾರೆ.

ಯಶವಂತ ಸರದೇಶಪಾಂಡೆ ಅವರ ಪತ್ನಿ ಮಾಲತಿ ಸರದೇಶಪಾಂಡೆಯೂ ಖ್ಯಾತ ಕಿರುತೆರೆ ನಟಿಯಾಗಿದ್ದು, ಈ ಜೋಡಿ ಪ್ರೀತಿಸಿ ಮದುವೆಯಾಗಿ, ರಂಗಭೂಮಿಯಲ್ಲಿ ಒಟ್ಟಿಗೆ ಕೆಲಸ ಮಾಡಿ ಜನಪ್ರಿಯತೆ ಪಡೆದಿತ್ತು. ಇದೀಗ ಯಶವಂತ ಸರದೇಶಪಾಂಡೆ ಅಗಲಿಕೆಯಿಂದ ಆಕ್ರಂದನ ಮುಗಿಲುಮುಟ್ಟಿದೆ