ಶಿಗ್ಗಾವಿ : ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ – ಇಬ್ಬರ ಬಂಧನ….
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಶಿಗ್ಗಾವಿ : ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಕಾಡಿನಲ್ಲಿ ಅತ್ಯಾಚಾರ ಎಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಇಬ್ಬರನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸ ಪೊಲೀಸರು ಬಂಧಿಸಿದ್ದಾರೆ.
ಅಭಿಷೇಕ ಲಕ್ಷ್ಮಣಪ್ಪ ಲಮಾಣಿ ಹಾಗೂ ಪ್ರವೀಣ ಲಮಾಣಿ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಎಸ್ಪಿ ಯಶೋಧಾ ಒಂಟಗೋಡಿ ತಿಳಿಸಿದ್ದಾರೆ.

ಪಟ್ಟಣದ ನರ್ಸಿಂಗ್ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್‌ನ ಮೊದಲನೇ ವರ್ಷದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಮಮದಾಪುರ ಗ್ರಾಮದ ಅಭಿಷೇಕ ಲಮಾಣಿ ಕೆಲವು ದಿನಗಳಿಂದ ಹಿಂಬಾಲಿಸುತ್ತಿದ್ದ. ಸೆಪ್ಟೆಂಬರ್ 15ರಂದು ಮಧ್ಯಾಹ್ನ 3:30 ಗಂಟೆ ಸುಮಾರಿಗೆ ವಿದ್ಯಾರ್ಥಿನಿಯು ಕಾಲೇಜು ಮುಗಿಸಿ ಶಿಗ್ಗಾಂವಿಯಿಂದ ಕುನ್ನೂರಿಗೆ ಬಸ್‌ನಲ್ಲಿ ಬಂದು ಇಳಿದು, ಕುನ್ನೂರಿನ ಮೌಲಾನಾ ಆಜಾದ ಶಾಲೆಯ ಮಾರ್ಗವಾಗಿ ಮನೆಗೆ ಹೋಗುತ್ತಿದ್ದಳು. ಈ ವೇಳೆ ಅಭಿಷೇಕ ಲಮಾಣಿ ಮಮದಾಪುರದ ತನ್ನ ಗೆಳೆಯ ಪ್ರವೀಣ ಲಮಾಣಿ ಜೊತೆಗೆ ಕಾರಿನಲ್ಲಿ ಬಂದು ವಿದ್ಯಾರ್ಥಿನಿಯ ಬಾಯಿಗೆ ಬಟ್ಟೆ ಕಟ್ಟಿ ಅಪಹರಿಸಿ ಪಕ್ಕದ ಮಮದಾಪುರ ಕಾಡಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ವಿರೋಧದ ಮಧ್ಯೆಯು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಮಾಡಿದ್ದಾನೆ. ಇನ್ನು ಮುಂದೆ ನಾನು ಹೇಳಿದಂತೆ ಕೇಳದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೆದರಿಸಿ ವಿದ್ಯಾರ್ಥಿನಿಯನ್ನು 4:30 ಗಂಟೆ ಆಸುಪಾಸಿನಲ್ಲಿ ಅಪಹರಿಸಿದ ಜಾಗಕ್ಕೆ ಇಳಿಸಿ ಹೋಗಿದ್ದಾನೆ. ಮತ್ತೆ ಸೆಪ್ಟೆಂಬರ್ 17ರಂದು ರಾತ್ರಿ 10 ಗಂಟೆ ಸುಮಾರಿ ವಿದ್ಯಾರ್ಥಿನಿಯನ್ನು ಅಭಿಷೇಕ ಹೆದರಿಸಿ ಹಿತ್ತಲಕ್ಕೆ ಕರೆಯಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.
ಮನನೊಂದ ವಿದ್ಯಾರ್ಥಿನಿಯು ಅಭಿಷೇಕ ಕಿರುಕುಳ ತಾಳಲಾಗದೆ ಸೆಪ್ಟೆಂಬರ್ 24ರಂದು ಮಕ್ಕಳ ಸಹಾಯವಾಣಿ 1098ಗೆ ಕರೆಮಾಡಿ ಅವಳ ಮೇಲಾಗುತ್ತಿರುವ ಅತ್ಯಾಚಾರದ, 1098ಗೆ ಕರೆಮಾಡಿ ಅವಳ ಮೇಲಾಗುತ್ತಿರುವ ಅತ್ಯಾಚಾರದ ಕುರಿತು ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿ ಹಾವೇರಿಯ ಒನ್ ಸ್ಟಾಪ್ ಸೆಂಟರ್‌ನ ಅಭಿರಕ್ಷಣೆಯಲ್ಲಿ ಇರಿಸಿದ್ದಾರೆ.
ಈ ಘಟನೆ ಕುರಿತಂತೆ ತಾಲೂಕಿನ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ.