ಬೆಟ್ಟದಹೊಸೂರು ಗ್ರಾಮದಲ್ಲಿ ಶಮಿವೃಕ್ಷಕ್ಕೆ ವಿಶೇಷ ಪೂಜೆ.

ವೀರಮಾರ್ಗ ನ್ಯೂಸ್ : ಮಂಡ್ಯ ಜಿಲ್ಲಾ : ಕೃಷ್ಣರಾಜಪೇಟೆ :ಬೆಟ್ಟದಹೊಸೂರು ಗ್ರಾಮದಲ್ಲಿ ಶಮಿವೃಕ್ಷಕ್ಕೆ ವಿಶೇಷ ಪೂಜೆ. ಗವಿರಂಗನಾಥಸ್ವಾಮಿ ವಿಜಯದಶಮಿ ಮಂಟಪ ಹಾಗೂ ಶಮಿ ವೃಕ್ಷಕ್ಕೆ ಕಟ್ಟಿರುವ ಕಟ್ಟೆಯ ಲೋಕಾರ್ಪಣೆ.. ಹರಿದು ಬಂದ ಭಕ್ತಸಾಗರ.

ದುಷ್ಟಶಕ್ತಿಯ ಸಂಹಾರವಾಗಿ ಲೋಕದಲ್ಲಿ ಶಾಂತಿ ಸಮೃದ್ಧಿ ನೆಲೆಸಿದ ಸಂಕೇತವೇ ವಿಜಯದಶಮಿಯ ಸಂದೇಶವಾಗಿರುವ ಭಾವೈಕ್ಯತೆಯ ನಾಡಹಬ್ಬ ದಸರಾ ಆಗಿದೆ .. ಸಮಾಜ ಸೇವಾಕರ್ತ ಕರಿಬೆಟ್ಟೇಗೌಡ.

ಶರನ್ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ತಾಯಿ ಚಾಮುಂಡೇಶ್ವರಿಯು ಲೋಕ ಕಂಟಕನಾದ ದುಷ್ಟ ಮಹಿಷಾಸುರನನ್ನು ಸಂಹಾರ ಮಾಡಿ ಗೆಲುವು ಸಾಧಿಸಿದ ದಿನವೇ ವಿಜಯದ ಸಂಕೇತವಾದ ವಿಜಯ ದಶಮಿಯಾಗಿದೆ. ಆದ್ದರಿಂದ ನಾಡಿನಾದ್ಯಂತ ವಿಜಯ ದಶಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಹಬ್ಬದ ಸಂಭ್ರಮದಲ್ಲಿ ನಾವೆಲ್ಲರೂ ಒಂದಾಗಿ ಜಾತಿ, ಮತ, ಪಂಥಗಳಿಂದ ಮುಕ್ತವಾಗಿ ಸ್ನೇಹ ಸೌಹಾರ್ದತೆಯ ಸಂದೇಶವನ್ನು ನಾಡಿಗೆ ನೀಡಲು ವಿಜಯದಶಮಿಯ ಸಂಕೇತವಾಗಿರುವ ನಾಡಹಬ್ಬ ದಸರಾ ಭಾವೈಕ್ಯತೆಯ ಸಂಕೇತವಾಗಿದೆ ಎಂದು ಕರಿಬೆಟ್ಟೇಗೌಡ ಅಭಿಮಾನದಿಂದ ಹೇಳಿದರು.
ನನ್ನ ದಿವಂಗತ ತಂದೆ ತಾಯಿಗಳಾದ ಶ್ರೀಮತಿ. ಲಕ್ಷ್ಮಮ್ಮ ಕರಿಬೆಟ್ಟೇಗೌಡ ಹಾಗೂ ದಿವಂಗತ ಪುತ್ರಿ ಬಿ.ಕೆ.ಸವಿತಾ ಅವರ ಸ್ಮರಣಾರ್ಥವಾಗಿ ನನ್ನ ಸಹೋದರರು ಕುಟುಂಬದ ಸದಸ್ಯರು ಹಾಗೂ ಬೆಟ್ಟದ ಹೊಸೂರು ಗ್ರಾಮಸ್ಥರ ಸಹಯೋಗದೊಂದಿಗೆ ಶ್ರೀ ಗವಿರಂಗನಾಥ ಸ್ವಾಮಿ ವಿಜಯದಶಮಿ ಮಂಟಪ ಹಾಗೂ ಸುಕ್ಷೇತ್ರದಲ್ಲಿರುವ ಶಮಿ ವೃಕ್ಷಕ್ಕೆ ಕಟ್ಟೆಯನ್ನು ಕಟ್ಟಿಸಿ ವಿಘ್ನ ನಿವಾರಕನಾದ ಮಹಾಗಣಪತಿಯ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಜಯದಶಮಿಯಾದ ಇಂದು ವಿಧಿ ವಿಧಾನಗಳೊಂದಿಗೆ ಬೆಟ್ಟದ ಹೊಸೂರು ಬೋಳಾರೆ ರಂಗನಾಥ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ಸುಂದರ್ ಹಾಗೂ ಮನೋಹರ ಆಚಾರ್ಯ ಅವರ ನೇತೃತ್ವದಲ್ಲಿ ಹೋಮ ಹವನಗಳನ್ನು ನಡೆಸಿ ವಿಶೇಷ ಪೂಜೆಯೊಂದಿಗೆ ಲೋಕಾರ್ಪಣೆ ಮಾಡಲಾಗಿದೆ ಎಂದು ಕರಿಬೆಟ್ಟೇಗೌಡ ಹೇಳಿದರು.
ಬೆಟ್ಟದ ಹೊಸೂರು ಉದ್ಭವ ಬೋಳಾರೆ ರಂಗನಾಥಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಬಿ.ಟಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಸುದರ್ಶನ್, ದಾನಿಗಳಾದ ಡಾ.ರಂಗಸ್ವಾಮಿ ಪಾಪಯ್ಯ ಸೇರಿದಂತೆ ಸಾವಿರಾರು ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ : ಡಾ.ಕೆ.ಆರ್.ನೀಲಕಂಠ , ಕೃಷ್ಣರಾಜಪೇಟೆ, ಮಂಡ್ಯ.