Home » ಸೌಮ್ಯ ನೇಣಿಗೆ ಶರಣು

ಸೌಮ್ಯ ನೇಣಿಗೆ ಶರಣು

ಶಿಗ್ಗಾವಿ: ತಾಲೂಕಿನ ಕುನ್ನೂರ ಗ್ರಾಮದ ಪೋಸ್ಟ ಆಫೀಸ್‌ನಲ್ಲಿ ಪೋಸ್ಟ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಯುವತಿ ನೇಣಿಗೆ ಶರಣಾದ ಘಟನೆ ರವಿವಾರ ರಾತ್ರಿ ಗಂಗೆಭಾವಿ ಕೆ.ಎಸ್.ಆರ್.ಪಿ. ವಸತಿ ಗೃಹದಲ್ಲಿ ನಡೆದಿದೆ.

ನೇಣಿಗೆ ಶರಣಾದ ಯುವತಿಯನ್ನು ಸೌಮ್ಯ ಲಕ್ಷ್ಮಣ ಆಚನೂರ (೨೩) ಎಂದು ತಿಳಿದುಬಂದಿದೆ.
ಘಟನೆ ವಿವರ : ಮಾ.೧೫ ಶನಿವಾರ ರಾತ್ರಿ ಕುನ್ನೂರ ಗ್ರಾಮದಲ್ಲಿ ಎಂಗೇಜಮೇಂಟ್ ಕಾರ್ಯಕ್ರಮದಲ್ಲಿ ಬಾಗಿಯಾದ ಸೌಮ್ಯ, ಮಾ.೧೬ ರವಿವಾರ ಬೆಳಿಗ್ಗೆ ಗಂಗೆಭಾವಿ ವಸತಿಗೃಹಕ್ಕೆ ಆಗಮಿಸಿದ್ದಾಳೆ, ರಾತ್ರಿ ೯.೩೦ಕ್ಕೆ ತನ್ನ ಬೆಡ್ ರೂಂನಲ್ಲಿ ನೇಣುಹಾಕಿಕೊಂಡು ಒದ್ದಾಡುತ್ತಿರುವುದನ್ನು ಗಮನಿಸಿದ ಅಕ್ಕ, ಪಕ್ಕದವರು, ಶಿಗ್ಗಾವಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ೧೦.೧೫ಕ್ಕೆ ಸೌಮ್ಯ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ ಕುರಿತು ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *