ಶಾಲಾ ಬಾಲಕಿ ಕಿಡ್ನಾಪ್ ಯತ್ನ ಕೇಸ್,,,!

ಹಂಚೂರಿನಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕಿಯೊಬ್ಬಳು ಅಪಹರಣ ಭಯದಿಂದ ಓಡಿ ಬಂದ ಘಟನೆ ನಡೆದಿದೆ. ಮಾರುತಿ ಒಮಿನಿಯಲ್ಲಿ ಬಂದವರು ತನ್ನನ್ನು ಅಪಹರಿಸಲು ಯತ್ನಿಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಆದರೆ, ಪೊಲೀಸರ ವಿಚಾರಣೆ ವೇಳೆ ಬಾಲಕಿ ಕನಸಿನ ಭಯದಿಂದ ಓಡಿ ಬಂದಿರುವುದಾಗಿ ತಿಳಿದುಬಂದಿದೆ.

ವೀರಮಾರ್ಗ ನ್ಯೂಸ್ : ಹಾಸನ : ಆಲೂರು : ತಾನು ಅಪಹರಣವಾದಂತೆ ಕನಸು ಕಂಡಿದ್ದ ಬಾಲಕಿಯೊಬ್ಬಳು ಬೆಳಗ್ಗೆ ಶಾಲೆಗೆ ಹೋಗುವಾಗ ಪಕ್ಕದಲ್ಲಿ ಹಂಪ್‌ ದಾಟಲು ನಿಧಾನವಾದ ಮಾರುತಿ ಒಮಿನಿಯನ್ನು ಕಂಡು ಕಿರುಚಿಕೊಂಡು ತನ್ನನ್ನು ಅಪಹರಣ ಮಾಡಲು ಬಂದಿದ್ದರು ಎಂದು ಹೇಳಿದ ಘಟನೆ ಗುರುವಾರ ನಡೆದಿದೆ.

8ನೇ ತರಗತಿ ವಿದ್ಯಾರ್ಥಿನಿ ಬೆಳಗ್ಗೆ ಏದುಸಿರು ಬಿಡುತ್ತಾ ಶಾಲೆಗೆ ಓಡಿಬಂದು ಶಿಕ್ಷಕರ ಬಳಿ ರಸ್ತೆಯಲ್ಲಿ ಮಾರುತಿ ಒಮಿನಿ ಕಾರಿನವರು ನನ್ನ ಪಕ್ಕಕ್ಕೆ ಬಂದು ತನ್ನನ್ನು ಎಳೆದುಕೊಳ್ಳಲು ಯತ್ನಿಸಿದರು. ಆದರೆ, ನಾನು ನನ್ನ ಬ್ಯಾಗನ್ನು ಎಸೆದು ಅಲ್ಲಿಂದ ತಪ್ಪಿಸಿಕೊಂಡು ಓದಿಬಂದೆ. ಕಾರಿನೊಳಗೆ ಇನ್ನೂ ಇಬ್ಬರು ಬಾಲಕಿಯರಿದ್ದರು ಎಂದು ಹೇಳಿದ್ದಾಳೆ.

ಶಿಕ್ಷಕರು ಕೂಡಲೇ ಆಲೂರು ಠಾಣೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸ್‌ ಅಧಿಕಾರಿಗಳು ಆಪ್ತ ಸಮಾಲೋಚನೆ ನಡೆಸಿದಾಗ ಬಾಲಕಿ ಹಿಂದಿನ ರಾತ್ರಿ ಮಲಗಿದ್ದಾಗ ಯಾರೋ ಮಾರುತಿ ಓಮಿನಿಯಲ್ಲಿ ಬಂದು ತನ್ನನ್ನು ಅಪಹರಿಸಿದಂತೆ ಕನಸು ಕಂಡಿದ್ದು ಅದರಿಂದ ಭಯಗೊಂಡು ಓಡಿ ಬಂದಿದ್ದಾಗಿ ತಿಳಿಸಿದ್ದಾಳ

ಶಾಲಾ ಬಾಲಕಿ ಕಿಡ್ನಾಪ್ ಯತ್ನ ಕೇಸ್ : ಓಮ್ನಿ ನೋಡಿ ‘ರಾತ್ರಿ ಅಪಹರಣದ ಕನಸು ನಿಜ’ವೆಂದು ಓಡಿದ್ದ ವಿದ್ಯಾರ್ಥಿನಿ!