ಸ್ವಾತಂತ್ರ್ಯ ದಿನದಂದೇ PSI ಪತ್ನಿ ನೇಣುಗೇ ಶರಣು…

ಸ್ವಾತಂತ್ರ್ಯ ದಿನದಂದೇ ಬಳ್ಳಾರಿ PSI ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆ!

ಆತ್ಮಹತ್ಯೆ ನಿಗೂಢ,,,, ಮೂಕನಾದ ಪಿಎಸ್ಐ,,,

ವೀರಮಾರ್ಗ ನ್ಯೂಸ್ : ಬಳ್ಳಾರಿ : ಸ್ವಾತಂತ್ರ್ಯ ದಿನದಂದೇ ಪಿಎಸ್‌ಐ ಕೆ.ಕಾಳಿಂಗ ಅವರ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿಯ ಮೋಕಾದಲ್ಲಿನ ಮನೆಯೊಂದರಲ್ಲಿ ನಡೆದಿದೆ.

ಚೈತ್ರಾ (36) ಮೃತ ದುರ್ದೈವಿಯಾಗಿದ್ದು, ಮಕ್ಕಳು ಹಾಗೂ ಪತಿಯನ್ನ ಧ್ವಜಾರೋಹಣಕ್ಕೆ ಕಳಿಸಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚೈತ್ರಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ.