ಹಾವೇರಿ ಮೂಲದ ದಂಪತಿ ಬಗ್ಗೆ ಸಿಗದ ಸುಳಿವು

ಹಾವೇರಿ ಮೂಲದ ದಂಪತಿ ಬಗ್ಗೆ ಸಿಗದ ಸುಳಿವು
ವೀರಮಾರ್ಗ ನ್ಯೂಸ್ ಹಾವೇರಿ :
ಕಾಶೀರಕ್ಕೆ ಪ್ರವಾಸ ಕೈಗೊಂಡಿದ್ದ ಹಾವೇರಿ ಮೂಲದ ದಂಪತಿಗಳು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ತಂಕಗೊಂಡಿದ್ದಾರೆ. ಹಾವೇರಿಯ ವೀರೇಶ್ ದಂಪತಿ ಹಾಗೂ ಶಿಗ್ಗಾವಿಯ ನಾಗರಾಜ್ ದಂಪತಿ ನಿನ್ನೆ ಮುಂಬೈ ಮೂಲಕ ಕಾಶೀರಕ್ಕೆ ತೆರಳಿದ್ದು, ಪ್ರಸ್ತುತ ಅವರ ಮೊಬೈಲ್‌ಗಳು ಸ್ವಿಚ್ಡ್ ಆಫ್ ಆಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರ ಕುಟುಂಬ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ವಿರೇಶ್ ಅವರು ಗುತ್ತಿಗೆದಾರರಾಗಿದ್ದು, ನಾಗರಾಜ್ ಹಾನಗಲ್ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದು, ಇವರಿಬ್ಬರ ಕುಟುಂಬ ಟ್ರಾವೆಲ್ಸ್ ಏಜೆನ್ಸಿ ಮುಖಾಂತರ ಕಾಶೀರಕ್ಕೆ ಪ್ರವಾಸಕ್ಕೆ ಬುಕ್ ಮಾಡಿ ತೆರಳಿದ್ದರು.

ಪುಲ್ವಾಮಾದಲ್ಲಿ ಉಗ್ರರ ದಾಳಿ ಆಗಿರುವುದರಿಂದ ಅವರು ಎಲ್ಲಿದ್ದಾರೆ ಎಂಬುವುದರ ಬಗ್ಗೆ ನಿರ್ದಿಷ್ಟ ಮಾಹಿತಿ ತಿಳಿಯದೇ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮಾಹಿತಿ ನೀಡಿದ್ದು, ಈ ಮೂಲಕ ಜಮು- ಕಾಶೀರ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಲು ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ.
ಉಗ್ರರ ದಾಳಿ: ಮೃತರ ಗುರುತು ಪತ್ತೆ :
ಶ್ರೀನಗರ : ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಬೀಭತ್ಸ ಹೇಯಕೃತ್ಯ ಎಂದೇ ಹೇಳಲಾಗಿರುವ ಪಹಲ್ಗಾಮ್‌ನ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಗುರುತುಗಳನ್ನು ರಕ್ಷಣಾ ಸೇನಾಪಡೆ ಪತ್ತೆಹಚ್ಚಿದೆ.
ಘಟನೆಯಲ್ಲಿ ಒಟ್ಟು ೨೬ ಮಂದಿ ಈವರೆಗೂ ಸಾವನ್ನಪ್ಪಿದ್ದು, ಇನ್ನು ಇಬ್ಬರ ಗುರುತುಗಳು ಪತ್ತೆಯಾಗಿಲ್ಲ. ರಕ್ಷಣಾ ಇಲಾಖೆ ೨೬ ಮಂದಿಯ ಗುರುತು ಮತ್ತು ಅವರ ವಿವರಗಳನ್ನು ಬಿಡುಗಡೆ ಮಾಡಿದೆ.
ಸುಶೀಲ್ ಮತ್ಯಾಲ್( ಇಂದೋರ್), ಸಯ್ಯದ್ ಅದಿಲ್ ಹುಸೇನ್ ಷಾ(ಪಹಲ್ಗಾಮ್), ಹೇಮಂತ್ ಸುಹಾಸ್ ಜೋಷಿ( ಮುಂಬೈ), ವಿನಯ್ ನರ್ವಾಲ್(ಹರಿಯಾಣ), ಅತುಲ್ ಶ್ರೀಕಾಂತ್ ಮೋನಿ(ದೊಂಬ್ಲಿ), ಮೀರಜ್ ಉದವಾನಿ(ಉತ್ತರಾಖಂಡ್), ಬಿಟನ್ ಅಧಿಕಾರಿ(ಕೋಲ್ಕತ್ತಾ), ಸುದೀಪ್ ನೇಯುಪಾನೆ(ನೇಪಾಳ), ಪ್ರಶಾಂತ್‌ಕುಮಾರ್ ಸತ್ಪತಿ(ಒಡಿಶಾ).
ಮನೀಶ್ ರಂಜನ್(ಬಿಹಾರ), ಎನ್.ರಾಮಚಂದ್ರ(ಕೊಚ್ಚಿ), ಸಂಜಯ್ ಲಕ್ಷ್ಮಿ ಲಾಲಿ(ಥಾಣೆ-ಮುಂಬೈ), ದಿನೇಶ್ ಅಗರವಾಲ್(ಚಂಡೀಘಡ), ಸಮೀರ್ ಗುಹಾರ್(ಕೋಲ್ಕತ್ತಾ), ದಿಲೀಪ್ ದಸಣಿ(ಮುಂಬೈ), ಜೆ.ಸಚ್ಚೇಂದ್ರಮೋಲಿ( ವಿಶಾಖಪಟ್ಟಣ), ಮಧುಸೂದನ್ ಸೋಮಿಶಟ್ಟಿ(ಬೆಂಗಳೂರು), ಸಂತೋಷ್ ಜಗದ(ಪುಣೆ), ಮಂಜುನಾಥ್ ರಾವ್(ಶಿವಮೊಗ್ಗ). ಕಸ್ತುಬಾ ಗನ್ವೊತಾಯ್(ಪುಣೆ), ಭರತ್ ಭೂಷಣ್(ಬೆಂಗಳೂರು), ಸುನೀತ್ ಪರಾರ್, ಯತೀಶ್ ಪರಾರ್(ಗುಜರಾತ್), ತೆಗೆಹೈಲಿಂಗ್( ಅರುಣಾಚಲಪ್ರದೇಶ), ಶೈಲೇಶ್ ಭಾಯ್.ಎಚ್(ಗುಜರಾತ್) ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿದ್ದಾರೆ.
ಭಯೋತ್ಪಾದನೆ ಹತ್ತಿಕ್ಕಲು ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ : ಖರ್ಗೆ
ಪಹಲ್ಗಾಮ್ ಉಗ್ರರ ದಾಳಿಯ ಬಗ್ಗೆ ಆಘಾತ ವ್ಯಕ್ತ ಪಡಿಸಿದ ಗುಟೆರೆಸ್ ಹಾವೇರಿ ಮೂಲದ ದಂಪತಿ ಬಗ್ಗೆ ಸಿಗದ ಸುಳಿವು ಪಹಲ್ಗಾಮ್‌ಗೆ ಎನ್‌ಐಎ ತಂಡ, ಶ್ರೀನಗರದಿಂದ ಶವಗಳ ರವಾನೆ ಉಗ್ರರ ದಾಳಿಯಲ್ಲಿ ನೌಕಾಪಡೆ ಲೆಫ್ಟಿನೆಂಟ್ ಮತ್ತು ಗುಪ್ತಚರ ಇಲಾಖೆ ಅಧಿಕಾರಿ ದುರಂತ ಅಂತ್ಯ