ಅಂತರ್ರಾಷ್ಟ್ರ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಸನ್ಮಾನ.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು : ಅಂದಿನ ಸ್ತ್ರೀ ಸಮಾನತೆ ಇಲ್ಲದ ಕಾಲದಲ್ಲಿವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ತಮ್ಮ ಮಹಿಳೆಯರಿಗೆ ಅಂದೆ ಸಮಾನತೆ ಸಾರಿ, ಮಹಿಳೆಯರಿಗೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಮುಂದಾದ ಮಹಾನ್ ಸಂತರಾಗಿದ್ದರು ಎಂದು ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮಿಗಳವರು ನುಡಿದರು.ಅವರು ರವಿವಾರ ಕಾಕಿ ಜನಸೇವಾ ಸಂಸ್ಥೆ ಸಮುದಾಯ ಭವನದಲ್ಲಿ ಜಿಲ್ಲಾ ಜೆಡಿಎಸ್ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ 2026- ವಿಶ್ವ ಮಹಿಳಾ ದಿನಾಚರಣೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ…