ನಶಾಮುಕ್ತ ಭಾರತ ಅಭಿಯಾನದ ಪ್ರಯುಕ್ತ…
ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ದಾವಣಗೆರೆ ತಾಲೂಕು : ತಪೋವನು ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ದೊಡ್ಡಬಾತಿ, ದಾವಣಗೆರೆ ಹಾಗೂ ರಾಜ್ಯಮಟ್ಟದ ಸಮನ್ವಯ ಸಂಸ್ಥೆ(SLCA) ಕರ್ನಾಟಕ ಇವರ ಸರ್ಕಾರ ಇವರ ಸಂಯು ಕ್ತಾಆಶ್ರಯದಲ್ಲಿ ದಿನಾಂಕ 13/08/2025 ರ ಬುಧವಾರದಂದು ಕಾಲೇಜು ಆವರಣದಲ್ಲಿ ನಶಾಮುಕ್ತ ಭಾರತ ಅಭಿಯಾನ-2025 “ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ತಪೋವನ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಾ. ಶಶಿಕುಮಾರ್ ವಿ ಮಹರ್ವಾಡೆ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು ಮಾತನಾಡುತ್ತಾ ಇಂದಿನ ಯುವಕರೆ ದೇಶದ ಭವಿಷ್ಯವಾಗಿದ್ದು ದೇಶವನ್ನು ನಶಮುಕ್ತ ಮಾಡೋಣ ಎಂದು ಕರೆಕೊಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ವಿಶೇಷಚೇತನ ಹಾಗೂ ಹಿರಿಯ ನಾಗರಿಕ ಅಧಿಕಾರಿಗಳಾದ ಶ್ರೀ ಡಾ. ಕೆ.ಕೆ. ಪ್ರಕಾಶ್ ಅವರು “ದುಡಿದು ಸಂಪಾದನೆ ಮಾಡಿ ಕುಟುಂಬ ಸಲವುದರಲ್ಲಿ ನಶೆಯನ್ನು ಕಾಣಬೇಕು” ಎಂದು ಮಾರ್ಮಿಕವಾಗಿ ನುಡಿದರು ತಪೋವನ ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಮಲ್ಲಿಕಾರ್ಜುನ ಅಂಗಡಿಯವರು ಭಾಗವಹಿಸಿದ್ದು ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು.

ಬಿಎ ಎಂಎಸ್ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಡಾ. ಅಶ್ವಿನಿ.ಕೆ.ಆರ್ ಸ್ವಾಗತಿಸಿದರು ಮೆಡಿಕಲ್ ಡೈರೆಕ್ಟರ್ ಶ್ರೀ ಡಾ.ಪರಮೇಶ್ವರ ವಂದಿಸಿದರು ಬಿ.ಎ. ಎಂ.ಎಸ್. ವಿದ್ಯಾರ್ಥಿನಿ ಕು.ಭೂಮಿಕ ನಿರೂಪಿಸಿದರು ಕಾಲೇಜಿನ ಎಲ್ಲಾ ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.