ವೀರಮಾರ್ಗ ನ್ಯೂಸ್ : ಬೆಂಗಳೂರು : ಬಿಡದಿ : ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಹೌಸ್ಗೆ ಇದೀಗ ಸಂಕಸ್ಟ ಎದುರಾಗಿದೆ . ಶೋ ಆರಂಭವಾದ ಎರಡೇ ವಾರದಲ್ಲಿ ಜಾಲಿವುಡ್ ಡೇಸ್ ಸ್ಟುಡಿಯೋಗೆ ತಹಶೀಲ್ದಾರ್ ಬೀಗ ಮುದ್ರೆಹಾಕಿ ಸೀಜ್ ಮಾಡಿದ್ದಾರೆ.ಇಂದು ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್ ಗೆ ಬೆಂಗಳೂರು ದಕ್ಷಿಣ ಜಿಲ್ಲಾಡಳಿತದ ಅಧಿಕಾರಿಗಳು ಸ್ಟುಡಿಯೋಸ್ ಗೆ ತೆರಳಿದ್ದರು.ನೋಟಿಸ್ ನೀಡಲೆಂದು ಜಾಲಿವುಡ್ ಸ್ಟುಡಿಯೋ ಸ್ಥಳಕ್ಕೆ ತೆರಳಿದಾಗ ಜಾಲಿವುಡ್ ಸ್ಟುಡಿಯೋಸ್ ಅಥವಾ,,
ಬಿಗ್ ಬಾಸ್ ಶೋ ಟೀಂ ಆಗಲಿ ನೋಟಿಸ್ ತೆಗೆದುಕೊಳ್ಳಲು ಹಿಂದೇಟು ಹಾಕಿವೆ. ಈ ಹಿನ್ನೆಲೆಯಲ್ಲಿ ಬಿಡದಿ ತಹಶಿಲ್ದಾರ್, ಪೊಲೀಸ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಸ್ ಹಾಗೂ ಬಿಗ್ ಬಾಸ್ ಶೋ ನಡೆಯುತ್ತಿರುವ ಸ್ಥಳಕ್ಕೆ ದೌಡಾಯಿಸಿದ್ದು, ತ್ಯಾಜ್ಯ ವಿಲೇವಾರಿ ಯಿಂದ ಪರಿಸರ ಮಾಲಿನ್ಯ ವಾಗುತಿದ್ದು ಈ ಸಂಬಂಧ ಬಿಗ್ ಬಾಸ್ ಕಾರ್ಯಕ್ರಮ ಹಾಗೂ ಜಾಲಿವುಡ್ ಸ್ಟುಡಿಯೋಗೆ ಬೀಗಮುದ್ರೆ ಹಾಕಲು ಮುಂದಾಗಿದ್ದಾರೆ.ಜೊತೆಗೆ ಸ್ಪರ್ಧಿಗಳನ್ನು ಹೊರಗೆ ಕಳುಹಿಸಲು ಇಂದು ಸಂಜೆ 7:30 ರ ತನಕ ಸಮಯವಕಾಶ ನೀಡಿದೆ.
ವರದಿ : ಚನ್ನೇಶ್. ಬೆಂಗಳೂರು.