ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮ…

ವೀರಮಾರ್ಗ ನ್ಯೂಸ್ : ಶಿವಮೊಗ್ಗ ಜಿಲ್ಲಾ :
ಶಿಕಾರಿಪುರ ತಾಲೂಕಿನ :
ಶಿಕಾರಿಪುರ ವಲಯದ ಜಯನಗರ ಕಾರ್ಯಕ್ಷೇತ್ರದ ಚಂದನ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮ ಮತ್ತು ವರಮಹಾಲಕ್ಷ್ಮಿ ಪೂಜೆ ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಆಯುರ್ವೇದ ಡಾಕ್ಟರ್ ಮಹೇಂದ್ರ ಸರ್ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡಿದರು.ನಮ್ಮ ದಿನನಿತ್ಯದ ಆಹಾರ ಸೇವನೆ ಯಾವ ರೀತಿಯಲ್ಲಿ ಇರಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟರು.ಆರೋಗ್ಯವೇ ಭಾಗ್ಯ ಎನ್ನುವ ಮಾತಿನಂತೆ ನಮ್ಮ ಆರೋಗ್ಯಕ್ಕೆ ಹೊಂದಿಕೊಳ್ಳುವಂತಹ ಪದಾರ್ಥಗಳ ಸೇವನೆಯನ್ನು ಮಾಡಬೇಕು.ಕಾಲಕಾಲಕ್ಕೆ ತಕ್ಕಂತೆ ಆಹಾರ ಸೇವನೆಯಲ್ಲಿ ಕೂಡ ಬದಲಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸರ್ವ ರೋಗಗಳಿಗೂ ನಮ್ಮಲ್ಲಿ ಅದಕ್ಕೆ ಪರಿಹಾರಗಳು ಇರುತ್ತವೆ ಎಂದು ತಿಳಿಸಿದರು. ಹಿಂದಿನ ಕಾಲದ ಆಹಾರ ಪದ್ಧತಿಗೂ ಮತ್ತು ಈಗಿನ ಕಾಲದ ಆಹಾರ ಪದ್ಧತಿಗೂ ಇರುವ ವ್ಯತ್ಯಾಸದ ಬಗ್ಗೆ ಮಾಹಿತಿ ನೀಡಿದರು.ಎಲ್ಲಾ ಖಾಯಿಲೆಗಳಿಗೂ ಒಂದು ಮನೆ ಮದ್ದನ್ನು ತಿಳಿಸಿಕೊಟ್ಟರು.ಅರ್ಧ ಕೆಜಿ ಮೆಂತೆ ಕಾಳು.100 ಗ್ರಾಂ ಅಜ್ವಾನ.50 ಗ್ರಾಂ ಕಲುಜಿ.ಇವುಗಳನ್ನು ಉರಿದು ಪೌಡರ್ ಮಾಡಿಕೊಂಡು ಪ್ರತಿದಿನ ಬೆಳಗ್ಗೆ ಮತ್ತು ಮಧ್ಯಾಹ್ನ ಊಟದ ನಂತರ ಉಗಿರುಬೆಚ್ಚಿನ ನೀರಿಗೆ ಒಂದು ಚಮಚವನ್ನು ಹಾಕಿ 45 ದಿನ ಸೇವನೆ ಮಾಡಿದರೆ ಕ್ರಮೇಣ ಆರೋಗ್ಯ ಸುಧಾರಿಸುತ್ತದೆ ಎಂದುತಿಳಿಸಿದರು.ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದಗೀತಾ. ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಮೀನಾಕ್ಷಿ ಮೇಡಂ. ಸೇವಾ ಪ್ರತಿನಿಧಿ ನಾಗರತ್ನ .ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು . ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.