ನೂತನವಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೇಮಕ..

ವಿರುಪಾಕ್ಷಪ್ಪ ಬಳ್ಳಾರಿಗೆ ಬಿಜೆಪಿ ನೂತನವಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೇಮಕ

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ನೂತನ ಜಿಲ್ಲಾಧ್ಯಕ್ಷರನ್ನಾಗಿ ಬ್ಯಾಡಗಿ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರನ್ನು ನ ವು ಕ ಮಾಡಲಾಗಿದೆ.

ಆದೇಶ ಪ್ರತಿ

Oplus_131072

ಈ ಕುರಿತು ಪಕ್ಷದ ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಘೋಷಣೆಮಾಡಿದ್ದು, ಪಕ್ಷದ ಸಂಘಟನಾತ್ಮಕ ಹಿತದೃಷ್ಟಿಯಿಂದ ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ 10 ಜಿಲ್ಲೆಗಳ ಅಧ್ಯಕ್ಷ ಚುನಾವಣೆ ನಡೆಸಿ ಘೋಷಣೆ ಮಾಡಿದ್ದಾರೆ.

ವಿರುಪಾಕ್ಷಪ್ಪ ಬಳ್ಳಾರಿ ಅವರು ಈ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, 2018ರಲ್ಲಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2023ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ಪಕ್ಷದ ಸಕ್ರಿಯವಾಗಿ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಆಡಳಿತ ಸರ್ಕಾರದ ವಿರುದ್ದ ಜಿಲ್ಲೆಯಲ್ಲಿ ಅನೇಕ ಹಮ್ಮಿಕೊಂಡದ್ದ ಪ್ರತಿಭಟನೆಯಲ್ಲಿ, ಮತ್ತು ಹೋರಾಟಗಳಲ್ಲಿ ಪಾಲ್ಗೊಂಡು, ಧ್ವನಿ ಎತ್ತುತ್ತಿದ್ದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅಪಾರ ಗೌರವ ಹೊಂದಿರುವ ಮಾಜಿ ಶಾಸಕ ಬಳ್ಳಾರಿ, ಮುಂದಿನ ದಿನಗಳಲ್ಲಿ ಪಕ್ಷವನ್ನು ಜಿಲ್ಲೆಯಲ್ಲಿ ಸಂಘಟಿಸುವ ಸಾಮರ್ಥ ಹೊಂದಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ.

ಸದ್ಯ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಸಂಪೂರ್ಣವಾಗಿ ಮುಕ್ತಗೊಂಡಿದ್ದು, ಎಲ್ಲ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ ಮುಂಬರುವ ತಾಲೂಕ, ಪಂ, ಜಿಲ್ಲಾ, ಪಂ ಚುನಾವಣೆಗಳಲ್ಲಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಿ ಮತ್ತೆ ಪಕ್ಷಕ್ಕೆ ಮರು ಜೀವ ನೀಡುವ ಕಾರ್ಯಕ್ಕೆ ಕೈ ಹಾಕಬೇಕಿದ್ದು, ಇದಕ್ಕೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೂಕ್ತ ಎಂದು ಪಕ್ಷದ ಹೈಕಮಾಂಡ್ ನಿರ್ಧರಿಸಿದಂತಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಕ್ರಮ ಚಟುವಟಿಕೆಗಳ ವಿರುದ್ಧ ಜಿಲ್ಲೆಯಲ್ಲಿ ಹೋರಾಟ ಹಮ್ಮಿಕೊಂಡು ಪಕ್ಷ ಸಂಘಟನೆ ಹೇಗೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅಂತೂ ಇಂತು ಹಾವೇರಿ ಜಿಲ್ಲೆಯ ಜವಾಬ್ದಾರಿ ವಿರೂಪಾಕ್ಷಪ್ಪಾ ಬಳ್ಳಾರಿ ಹೆಗಲೇರಿದೆ ಈ ಜವಾಬ್ದಾರಿ ನಿಭಾಯಿಸುವಲ್ಲಿ ಸಕ್ಸೆಸ್ ಆದರೆ ಬಿಜೆಪಿಯ ಮಾನ ಮರ್ಯಾದೆ ಉಳಿದಿತ್ತು. ಕಾದು ನೋಡೋಣ.

ವೀರಮಾರ್ಗ ದಿನ ಪತ್ರಿಕೆಯ & LBP NEWS CHANNEL ಸಂಪಾದಕರು ಹಾಗೂ ಉಪಸಂಪಾದಕರು ವರದಿಗಾರರು ಹಾಗೂ ಸಿಬ್ಬಂದವರ್ಗದವರಿಂದ ಶುಭಾಶಯಗಳು ಮತ್ತು ಒಳ್ಳೆಯ ಹೆಸರನ್ನು ಪಡೆಯಲಿ ಎಂದು ಆಶಿಸುತ್ತೇವೆ ಭಗವಂತನ ಆಶೀರ್ವಾದ ಸದಾ ಮಾಜಿ ಶಾಸಕರು ವಿರೂಪಾಕ್ಷಪ್ಪ ಬಳ್ಳಾರಿಯವರ ಮೇಲೆ ಇರಲಿ..