ಯುವಕರಲ್ಲಿ ಮನೆತನ, ಸಮಾಜವನ್ನ ಆಗಲಿ ಜವಾಬ್ದಾರಿಯಿಂದ ವಿಮುಕ : ಬೆಂಡಿಗೇರಿ

ಯುವಕರಲ್ಲಿ ಮನೆತನ, ಸಮಾಜವನ್ನ ಆಗಲಿ ಜವಾಬ್ದಾರಿಯಿಂದ ವಿಮುಕ : ಬೆಂಡಿಗೇರಿ
ವೀರಮಾರ್ಗ ನ್ಯೂಸ್ : ಲಕ್ಷ್ಮೇಶ್ವರ :
ಜವಾಬ್ದಾರಿ ಇರತಕಂತ ಯುವಕರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಪ್ರಗತಿಪರ ರೈತ ಬಸವರಾಜ ಬೆಂಡಿಗೇರಿ ಹೇಳಿದರು.
ಅವರು ಪಟ್ಟಣದ ಚಂಬಣ್ಣ ಬಾಳಿಕಾಯಿ ಅವರ ಜಿನ್ನಿಂಗ್ ಪ್ಯಾಕ್ಟರಿಯಲ್ಲಿ ನಡೆದ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರಯಾಗರಾಜ ಹೋಗಿ ಬಂದ ಹಿರಿಯ ದರ್ಶನಾರ್ಥಿಗಳಿಗೆ ಸನ್ಮಾನ ಹಾಗೂ ಮಾಸಿಕಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಯುವಕರು ಮನೆತನವಾಗಲಿ ಸಮಾಜದಲ್ಲಿ ಆಗಲಿ ಜವಾಬ್ದಾರಿಯಿಂದ ವಿಮುಕರಾಗುತ್ತಾ ಹೋಗ್ತಾ ಇದ್ದಾರೆ, ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣದ ಜೊತೆಗೆ, ಸಂಸ್ಕಾರ ಕಲಿಸುವುದು ಆಗಬೇಕು ಸಣ್ಣವರಿದ್ದಾಗ ದುಡಿಯುವ ಮನಸನ್ನು,ಪ್ರಾಮಾಣಿಕತೆಯನ್ನು ಸಾದಿಸುವ ಚಲವನ್ನು ತುಂಬಬೇಕು, ಸಮಾಜದಲ್ಲಿ ಇರುವ ಹಿರಿಯರು ಮಕ್ಕಳನ್ನು ಕರೆದು ತಿದ್ದುವಂತ ಕೆಲಸ ಮಾಡಬೇಕು, ಅದೇ ರೀತಿ ಹಿರಿಯರು ಇಂತಹ ಸಂಘಟನೆ ಮಾಡಿ ಒಂದಾಗಿ ಹೋಗುವುದರಿಂದ ಸರಕಾರದ ಸೌಲಭ್ಯಗಳನ್ನು ಪಡೆಯಬಹುದು, ಪ್ರಯಾಗ ರಾಜಯಾತ್ರೆ ಶ್ರೇಷ್ಠ ಅನುಭವ ಅವಿಸ್ಮರಣೀಯವಾದದ್ದು ಮೊದಲು ಮನಸ್ಥಿತಿ ಸರಿಯಾಗಿ ಇದ್ದರೆ ಇಂತಹ ಯಾತ್ರೆಗಳಿಂದ ಪುಣ್ಯ ಕಟ್ಟಿಕೊಳ್ಳಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಉಪಾಧ್ಯಕ್ಷ ಚಂಬಣ್ಣ ಬಾಳಿಕಾಯಿ, ಗೌರವಾದ್ಯಕ್ಷ ಚನ್ನಪ್ಪ ಕೋಲಕಾರ, ಗೌರವಾಧ್ಯಕ್ಷ ನಾಗರಾಜ ಹೇಮಗಿರಿಮಠ, ಎಸ್.ಪಿ. ಪಾಟೀಲ್, ಸಿ.ವಿ. ಕುಲಕರ್ಣಿ, ಡಾ. ಶಿವಾನಂದ ಹೂವಿನ, ಚಂದ್ರಶೇಖರ ಹೂಗಾರ, ಸಿ.ಎಸ್. ಕೋಟಿಮಠ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಅಳಗವಾಡಿ, ಎಸ್.ಕೆ. ಗಂಗಾಯಿ, ಗಂಗವ್ವ ಉಳ್ಳಾಗಡ್ಡಿ, ಅಕ್ಕಮಹಾದೇವಿ ಕಲ್ಲಪ್ಪನವರ, ಸೇರಿದಂತೆ ಅನೇಕರು ಇದ್ದರು ಈರಣ್ಣ ಮಡಿವಾಳರ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *