ಅನ್ನಭಾಗ್ಯ ಅಕ್ಕಿಸಾಗಾಟ ಯತ್ನ -ಗೋಡೌನ್‌ನ ಮ್ಯಾನೇಜರ್ ಅಮಾನತು
ವೀರಮಾರ್ಗ ನ್ಯೂಸ್ : ಕೊಪ್ಪಳ : ಗಂಗಾವತಿ ನಗರದ : ಕನಕಗಿರಿ ರಸ್ತೆಯಲ್ಲಿರುವ ಸರ್ಕಾರಿ ಗೋದಾಮಿನಲ್ಲಿಟ್ಟಿದ್ದ ಪಡಿತರ ಅಕ್ಕಿಯನ್ನು ಖಾಸಗಿ ಸಂಸ್ಥೆಯ ಚೀಲಗಳಿಗೆ ಹೆಚ್ಚುವರಿಯಾ
ಅಕ್ಕಿಯನ್ನು ಖಾಸಗಿ ಸಂಸ್ಥೆಯ ಚೀಲಗಳಿಗೆ ಹೆಚ್ಚುವರಿಯಾಗಿ ತುಂಬಿ ಸಾಗಣೆ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಕಿರಿಯ ಸಹಾಯಕ ಹಾಗೂ ಗೋದಾಮು ವ್ಯವಸ್ಥಾಪಕ ಸೋಮಶೇಖರ ಅವರನ್ನು ಸೇವೆಯಿಂದ ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಗಂಗಾವತಿ ನಗರದ ರಾಯಚೂರು ರಸ್ತೆಯ ವಿದ್ಯಾನಗರದ ಗೌರಿಶಂಕರ ರೈಸ್‌ಮಿಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 168 ಕ್ವಿಂಟಲ್ ಅಕ್ಕಿಯನ್ನು 2022ರಲ್ಲಿ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದು ಸರ್ಕಾರಿ ಗೋದಾಮಿ ನಲ್ಲಿಟ್ಟಿದ್ದರು. ಸಂಬಂಧಿಸಿದ ಆರೋಪಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದರು. ಕಾಳಸಂತೆ ಸೇರುತ್ತಿದೆ ಅನ್ನಭಾಗ್ಯ ಅಕ್ಕಿ–ಪಾಲಿಶ್ ನೀಡಿ ಹೆಚ್ಚಿನ ಬೆಲೆಗೆ ಮಾರಾಟ,,,?
ಆರೋಪಿಗಳು ಕೋರ್ಟ್ ಮೊರೆ ಹೋಗಿ, ‘ಅಧಿಕಾರಿಗಳು ಸೂಕ್ತ ದಾಖಲೆ ಸಂಗ್ರಹಿಸದೆ, ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ’ ಎಂದು ವಾದ ಮಂಡಿಸಿದ್ದರಿಂದ ಇದೇ ವರ್ಷ ಜಿಲ್ಲಾಧಿಕಾರಿ ಆರೋಪಿಗಳಿಗೆ ಅಕ್ಕಿ ವಾಪಸ್ ನೀಡುವಂತೆ ಆದೇಶ ಹೊರಡಿಸಿದ್ದರು. ಜಪ್ತಿ ಮಾಡಿದ್ದ 168 ಕ್ವಿಂಟಲ್ ಅಕ್ಕಿಯನ್ನು ರೈಸ್‌ಮಿಲ್‌ನವರು ವಾಪಸ್ ಪಡೆದುಕೊಳ್ಳುವಾಗ ಗೋದಾಮು ವ್ಯವಸ್ಥಾಪಕ ಹಾಗೂ ಇತರರು 275ಕ್ಕೂ ಹೆಚ್ಚು ಕ್ವಿಂಟಲ್‌ನಷ್ಟು ಅಕ್ಕಿ ಸಾಗಾಣಿಕೆಗೆ ಸಹಕರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಕೆಲವೊಂದು ಇಲಾಖೆಗಳು ಪಡೀತರ ಅಕ್ಕಿ ವ್ಯಾಪಾರ ಇಡೀ ರಾಜ್ಯಾದ್ಯಂತ ಇರುವುದು ಸತ್ಯ ಕೆಲವೊಂದು ಮಾಧ್ಯಮಗಳಲ್ಲಿ ನೇರವಾಗಿ ಅವಶ ಶಬ್ದಗಳನ್ನು ಬಳಸಿ ಕ್ಯಾಮೆರಾ ಮ್ಯಾನ್ ಹಾಗೂ ವರದಿಗಾರರ ಮೇಲೆ ಹಲ್ಲೆ ನಡೆಸಿರುವುದು ಸತ್ಯ ಕಾನೂನಿನಲ್ಲಿ ಅನೇಕ ನುಸುಳಿ ಹೋಗುವ ದಾರಿಗಳು ಇರುವುದರಿಂದ ಕೆಲಸ ಮಾಡಬೇಕಾದ ಇಲಾಖೆ ಸರಿಯಾದ ರೀತಿಯಲ್ಲಿ ತನಿಖೆಯಾಗದೆ ಸಾಕ್ಷಿ ಆದಾರ ಇಲ್ಲದೆ ಎಷ್ಟೋ ಕೇಸುಗಳು ಸತ್ತು ಹೋಗುವೆ . ಪಡಿತರ ಅಕ್ಕಿ ಮಾರಾಟ ಮಾಡುವುದು ಅಂಗನವಾಡಿಯಲ್ಲಿ ಸಣ್ಣ ಮಕ್ಕಳಿಗೋಸ್ಕರ ಆಹಾರ ಅಂಗನವಾಡಿಯಲ್ಲಿ ವಿತರಣೆ ಮಾಡುವಂತಹ ಹಾಲಿನ ಪೌಡರ್ ಇರಬಹುದು ಅನೇಕ ವಸ್ತುಗಳನ್ನು ಮಾರಾಟ ಮಾಡುವಂತವರು ಬೇರೆ ಬೇರೆ ದೇಶದಲ್ಲಿ ಮನೆ ಮಾಡಿರುವಂತಹ ಇತಿಹಾಸ ಇದೆ,
ಇದಕ್ಕೆಲ್ಲ ನಕಲಿ ಪತ್ರಕರ್ತರು ನಕಲಿ ಹೋರಾಟಗಾರರು ಅಸಲಿ ಇಲಾಖೆಯವರು ಸರ್ಕಾರಿ ನೌಕರರು ಸಹಕಾರ ಖಂಡಿತ ಇದೆ ಯಾರಿಗೂ ಕ್ಯಾರೆ ಅನ್ನದೆ ಹಾಡ ಹಗಲೇ ವ್ಯವಹಾರವನ್ನು ನಡೆಸುತ್ತಾರೆ.
ಅದರಂತೆ ಗಂಗಾವತಿಯಲ್ಲಿ ಈ ಘಟನೆ ನಡೆದಿರುವುದು ನಿಜವಾದ ಹೋರಾಟ ನಿಜವಾದ ಪತ್ರಕರ್ತರಿಂದ ಅಕ್ಕಿಯ ಸಾಗಾಟ ತಡೆಯಲು ಸಾಧ್ಯವಾಗಿದೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.
ಮಾಹಿತಿ ತಿಳಿದ ಸಂಘಟನೆಗಳ ಮುಖಂಡರು ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ಬಾಬು ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ నిಡಿ ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಇವೆಲ್ಲವೂ 9.10 ಲಕ್ಷ ರೂ.ಮೌಲ್ಯದ ಪಡಿತರ ಅಕ್ಕಿ ಎನ್ನುವ ಮಾಹಿತಿ ಗೊತ್ತಾಗಿದೆ.
ಈ ಕುರಿತು ಇಲ್ಲಿನ ತಹಶೀಲ್ದಾರ್ ಕಚೇರಿಯ ಆಹಾರ ಶಿರಸ್ತೇದಾರ್ ಸುಹಾಸ್ ಯರೇಶೀಮಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗೋದಾಮು ವ್ಯವಸ್ಥಾಪಕ ಸೋಮಶೇಖರ ಬುಡ್ಡನವರ, ವಿದ್ಯಾನಗರದ ಮಾಲೀಕ, ಲಾರಿ ಮಾಲೀಕ ಮತ್ತು ಚಾಲಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.