ಕೋರ್ಟ್ ಆವರಣದಲ್ಲಿಯೇ ಪತ್ನಿಗೆ ಚಾಕು ಇರಿದ ಪತಿ…

ದಾವಣಗೆರೆ : ಕೋರ್ಟ್ ಆವರಣದಲ್ಲಿಯೇ ಪತ್ನಿಗೆ ಚಾಕು ಇರಿದ ಪತಿ…

ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ವಿಚ್ಛೇದನ ಅರ್ಜಿ ವಿಚಾರಣೆಗೆ ಕೋರ್ಟ್ ಒಳಗೆ ಬರುತ್ತಿದ್ದಂತೆ ಪತ್ನಿಗೆ ಪತಿಯೇ ಚಾಕು ಇರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ನಿವಾಸಿಯಾದ 30 ವರ್ಷದ ಪದ್ಮಾವತಿ, ಪತಿ ಪ್ರವೀಣ್ ಕುಮಾರ್‌ನಿಂದ ಹಲ್ಲೆಗೆ ಒಳಗಾದ ಮಹಿಳೆ. ಪತಿ, ಪತ್ನಿ ನಡುವೆ ಮನಸ್ತಾಪ, ಜಗಳಕ್ಕೆ ಅಂತ್ಯ ಹಾಡಲು ಡಿವೋರ್ಸ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಕೌಟುಂಬಿಕ ನ್ಯಾಯಾಲಯದಲ್ಲಿ ಈ ಕುರಿತು ಪ್ರಕರಣ ವಿಚಾರಣೆ ನಡೆಯುತ್ತಿತ್ತು. ವಿಚಾರಣೆಗೆ ಕೋರ್ಟ್ ಹಾಲ್ ಒಳಗೆ ಬರುತ್ತಿದ್ದಂತೆ ಪತ್ನಿಗೆ ಪತಿ ಚಾಕು ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆ ದಾಖಲಿಸಲಾಗಿದೆ.

ಚಾಕು ತೆಗೆದುಕೊಂಡು ಕೋರ್ಟ್ ಗೆ ಆಗಮಿಸಿದ್ದ
ವಿಚ್ಚೇದನ ಬಯಸಿ ಇಬ್ಬರು ಬೇರೆ ಬೇರೆಯಾಗಿದ್ದರು. ಪದ್ಮಾವತಿ ತಾಯಿ ಮನೆಗೆ ಹಿಂದಿರುಗಿದ್ದರು. ಹೀಗಾಗಿ ವಿಚ್ಚೇದನ ಅರ್ಜಿ ದಾವಣೆಗೆರೆ ಕೋರ್ಟ್‌ನಲ್ಲಿ ದಾಖಲಾಗಿತ್ತು. ಕೋರ್ಟ್ ಸೂಚನೆಯಂತೆ ಅರ್ಜಿ ವಿಚಾರಣೆಗೆ ಪತಿ ಪ್ರವೀಣ್ ಕುಮಾರ್ ಹಾಗೂ ಪತ್ನಿ ಪದ್ಮಾವತಿ ಆಗಮಿಸಿದ್ದರು. ಮೊದಲೇ ಪ್ಲಾನ್ ಮಾಡಿದ್ದ ಪ್ರವೀಣ್ ಕುಮಾರ್ ಚಾಕು ತೆಗೆದುಕೊಂಡು ಕೋರ್ಟ್ ಹಾಲ್‌ಗೆ ಆಗಮಿಸಿದ್ದ. ಪದ್ಮಾವತಿ ಕೋರ್ಟ್ ಹಾಲ್ ಪ್ರವೇಶಿಸಿದ ಕೂಡಲೇ ಪತ್ನಿ ಪದ್ಮಾವತಿ ಮೇಲೆ ದಾಳಿ ಮಾಡಿದ್ದಾನೆ.

ಈ ಘಟನೆ ನಟೆಯುತ್ತಿದ್ದಂತೆ ಅಲ್ಲೇ ಇದ್ದ ಪೊಲೀಸರು ಪ್ರವೀಣ್ ಕುಮಾರ್ ಹಿಡಿದು ಪೊಲೀಸರು ಚಾಕು ಕಸಿದುಕೊಂಡಿದ್ದಾರೆ. ಬಳಿಕ ಆರೋಪಿ ವಶಕ್ಕೆ ಪಡೆದು ಪದ್ಮಾವತಿಯನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ಪ್ರವೀಣ್ ಕುಮಾರ್ ಕೈಗೆ ಗಾಯವಾಗಿದೆ. ಪ್ರವೀಣ್ ಕುಮಾರ್‌ನನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ‌. ಬಡಾವಣೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಮನಸ್ಸಿಗೊಂದು ಮಾತು….

ನಾವು ದೊಡ್ಡವರಾಗುವುದಕ್ಕಿಂತ ಒಳ್ಳೆವರಾಗಬೇಕು, ಜ್ಞಾನಿ ಆಗುವುದಕ್ಕಿಂತ ತಿಳುವಳಿಕೆ ಉಳ್ಳವರಾಗಬೇಕು.

ಮನಸ್ಸಿಗೆ ಅನಿಸಿದ್ದನ್ನು ನಗುನಗುತ್ತಾ ಹೇಳುತ್ತಾ, ಎಲ್ಲರೂ ನನ್ನವರು ಅಂತ ಪ್ರೀತಿಯಿಂದ ಬಯಸಿ ಮಾತನಾಡಬೇಕು.