ಗುರು ಕಾರುಣ್ಯವೂ ಅಭಿನವ,ಕೊಟ್ಟೂರೇಶ್ವರ ಮಹಾಸ್ವಾಮಿಗಳು…

ಗುರು ಕಾರುಣ್ಯವೂ ಸ್ವರ್ಸಮಣಿ : ಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳು

ವೀರಮಾರ್ಗ ನ್ಯೂಸ್ : ಗದಗ ಜಿಲ್ಲಾ : ಪರಮಪೂಜ್ಯ ಪದ್ಮ ಭೂಷಣ, ಡಾ ಪಂಡಿತ ಪುಟ್ಟರಾಜ ಗವಾಯಿಗಳವರ 15 ನೇ ಪುಣ್ಯಾರಾದನೆ, ಹಾಗೂ ನಾದಶ್ರೀ ಸಂಗೀತ ಪಾಠಶಾಲೆ ವಾರ್ಷಿಕೋತ್ಸವ, ಗಾನಗಂದ ವ್ರ ಕಲಾ ಟ್ರಸ್ಟ್ ಗದಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರ ಇವರ ಸಹಯೋಗದಲ್ಲಿ ನಡೆಯಿತು.
ದಿವ್ಯ ಸಾನಿದ್ಯವನ್ನು ಪೂಜ್ಯ ಶ್ರೀ ಮನಿಪ್ರ ಡಾ ಕೊಟ್ಟೂರೇಶ್ವರ ಮಹಾಸಾಗರ ದಿವ್ಯ ಸಾನಿದ್ಯ ಹಾಗೂ ಪೂಜ್ಯ ಶ್ರೀ ವೀರೇಶ್ವರ ಶರಣರ ಸಮ್ಮುಖದಲ್ಲಿ ನಡೆಯಿತು.

ಕಾರ್ಯಕ್ರಮ ವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪೊಲೀಸ ಇನ್ಸ್ಪಪೇಕ್ಟರ ಮಾರುತಿ ಎಸ್ ಜಗದಂಡಕರ ಉದ್ಘಾಟಿಸಿ ಮಾತನಾಡಿ,ಆಟೋ ಡ್ರೈವರ್ ಆಗಿದ್ದ ನಾನು ಇಂದು ರಾಷ್ಟ್ರ ಪ್ರಶಸ್ತಿ ಪಡೆದು ಪಿ ಎಸ್ ಐ ಆಗಿ ನಿಮ್ಮ. ಮುಂದೆ ನಿಂತಿದ್ದೇನೆ ಇದಕ್ಕೆ ಕಾರಣ ನನ್ನ ಲ್ಲಿದ್ದ ಸ್ಪಷ್ಟ ಗುರಿ, ಅಚಲ ನಿರ್ಧಾರ, ಹಾಗೂ ಕಠಿಣ ಶ್ರಮ ಲಕ್ಷ ಲಕ್ಷ ಖರ್ಚು ಮಾಡಿ ಮನೆ ಕಟ್ಟಿಸುವ ನೀವು ಸಾವಿರಾರು ರೂಪಾಯಿ ಸಿ ಸಿ ಕ್ಯಾಮೆರಾ ಅಳವಡಿಸಲು ಹಿಂಜರಿಯಬೇಡಿ ಇದು ನಿಮ್ಮ ರಕ್ಷಣೆ ಅಪರಾಧ ಪತ್ತೆ ಹಚ್ಚಲು ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು.
ಇದೆ ವೇಳೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪೊಲೀಸ ಇನ್ಸ್ಪಪೇಕ್ಟರ ಮಾರುತಿ ಎಸ್ ಜಗದಂಡಕರ ಸನ್ಮಾನಿಸಲಾಯಿತು.

ಕುಮಾರ ಗುಡಿ ಭರತ ರಿಂದ ಗಾಯನ, ಕುಮಾರಿ ವರ್ಷ ಕಲಕಂಬಿ ಯವರಿಂದ ಭರತ ನಾಟ್ಯ, ಹಾಗೂ ನಾದ ಶ್ರೀ ಸಂಗೀತ ಪಾಠಶಾಲೆ ಮಕ್ಕಳಿಂದ ವಚನ ಗಾಯನ ನೃತ್ಯ ಪ್ರದರ್ಶನ ಗಳು ಆಕರ್ಷಕವಾಗಿ ನಡೆದವು,

ಪೂಜ್ಯ ಮನೀಪ್ರ ಅಭಿನವ ಡಾ ಕೊಟ್ಟೂರೇಶ್ವರ ಮಹಾಸ್ವಾಮಿಗಳು ಗುರು ಕಾರುಣ್ಯ ಎಂಬುವುದು ಸ್ಪರ್ಶ ಮಣಿಯಂತೆ ಗವಾಯಿಗಳವರ ಕಾರುಣ್ಯ ಬಿಕ್ಷಾ ಪಾತ್ರೆ ಹಿಡಿಯಬೇಕಿದ್ದ ಕೈಗಳು ಸಂಗೀತ ವಾದ್ಯ ಹಿಡಿದು ಸ್ವಾಭಿಮಾನದ ಬದುಕು ಹಿಡಿದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಮೇಶ, ದ್ರುವಕುಮಾರ,ಅಂಬಾದಾಸ, ಬಸಪ್ಪ ಗುಡಿಮನಿ, ಕಲಾವಿದ ಇದ್ದರು.
ಸಿದ್ದಲಿಂಗ ಸ್ವಾಮಿ ಗಡ್ಡದಮಠ ಸ್ವಾಗತಿಸಿದರು. ಕುಮಾರ ಶಿವಯೋಗಿ ಗಡ್ಡದಮಠ ನಿರೂಪಿಸಿದರು. ಕುಮಾರಸ್ವಾಮಿ ಹಿರೇಮಠ ವಂದಿಸಿದರು.