ವೀರಮಾರ್ಗ ನ್ಯೂಸ್ : ಸಾಮಾನ್ಯ ಸಭೆಯ ನಡಾವಳಿಗೆ ಧಕ್ಕೆ: ವಿರೋಧಕ್ಕೆ-ಉಪಸೂಚನೆಗೆ ಬೆಲೆ ಕೊಡದೇ 87 ವಿಷಯಗಳು ಅನುಮೋದನೆಗೊಂಡಿವೆಂದು ಠರಾವು; ನ್ಯಾಯಾಲಯಕ್ಕೆ ಹೋಗದಂತೆ ಕೇವಿಯಟ್..!
ನ್ಯಾಯ ಎಲ್ಲಿದೆ ಎಂದ ಬಿಜೆಪಿಯ 11 ನಗರಸಭಾ ಸದಸ್ಯರು..!
ರಾಣೆಬೆನ್ನೂರ :- ಕಳೆದ ತಿಂಗಳು ಫೆ.20ರಂದು ನಗರ ಸಭೆಯ ಸಭಾಂಗಣದಲ್ಲಿ ಜರುಗಿದ ಸರ್ವ ಸದಸ್ಯರ ಸಾಮಾನ್ಯ ಸಭೆ -ಯಲ್ಲಿ ಒಟ್ಟು 87 ವಿಷಯಗಳು ಪ್ರಸ್ತಾಪಗೊಂಡಿದ್ದು, ಎಲ್ಲಾ ವಿಷಯ ಗಳು ಅನುಮೋದನೆ ಗೊಂಡಿವೆ. ಎಂದು ಅಧ್ಯಕ್ಷೆ ಚಂಪಕಾ ಬಿಸಲಳ್ಳಿ ಸೇರಿ ಆಡಳಿತ ಪಕ್ಷದವರು ಠರಾವು ಮಾಡಿಕೊಂಡಿದ್ದು, ಇದ ರಲ್ಲಿ ಅನೇಕ ವಿಷಯಗಳಿಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತ ಪಡಿಸಿ -ದ್ದಾರೆ. ಇದರಲ್ಲಿ 37 ವಿಷಯಗಳು ಕಾನೂನು ಬಾಹೀರವಾಗಿರುವುದರಿಂದ ನಾವುಗಳು ಅನು ಮೋದನೆ ನೀಡಿಲ್ಲವೆಂದು ಬಿಜೆಪಿ ಸದಸ್ಯ ಪ್ರಕಾಶ್ ಬುರಡಿಕಟ್ಟಿ ಹಾಗೂ 10 ನಗರಸಭಾ ಸದಸ್ಯರುಗಳು ಸ್ಪಷ್ಟಪಡಿಸಿದ್ದಾರೆ.
ಅವರು ಸ್ಥಳೀಯ ಬಿಜೆಪಿ ಕಾರ್ಯಾ ಲಯದಲ್ಲಿ ಮಂಗಳವಾರದಂದು ಪತ್ರಿಕಾ ಗೋಷ್ಠಿಉದ್ದೇಶಿಸಿ ಮಾತನಾಡಿದರು. ಸಾಮಾನ್ಯ ಸಭೆಯಲ್ಲಿ ಅನೇಕ ವಿಷಯಗಳ ಕುರಿತು ಚರ್ಚಿಸಿದೆವು. ಕೆಲ ವಿಷಯಗಳಿಗೆ ವಿರೋಧ ಮಾಡಿ ಉಪಸೂಚನೆ ನೀಡಿದೆವು, ಆದರೆ ಅವು ಗಳನ್ನು ಅಧ್ಯಕ್ಷರು ಗಣನೆಗೆ ತೆಗೆದು ಕೊಳ್ಳದೇ ಮುಂದಿನ ಸಭೆಯಲ್ಲಿ ಮಂಡಿಸಲಾಗುವುದು. ಪರಿಶೀಲಿಸಲಾಗುವುದು, ಚರ್ಚಿಸ ಲಾಗುವುದು ಎಂದು ಭರವಸೆ ನೀಡಿ ಆನಂತರ ಎಲ್ಲವನ್ನು ತಿರುಚಿ ತಮಗೆ ಅನುಕೂಲವಾಗುವಂತೆ ಠರಾವು ಪುಸ್ತಕದಲ್ಲಿ ಅನುಮೋದನೆ ಗೊಂಡಿವೆಂದು ಏಕತರ್ಪಿ ಬರೆದು ಕೊಂಡಿ ದ್ದಾರೆಂದು ಪ್ರಕಾಶ್ ಗಂಭೀರವಾಗಿ ಆರೋಪಿ ಸಿದರು.
ಸ್ಥಾಯಿಸಮಿತಿ ರಚನೆ ಕುರಿತಂತೆ ಅಡಳಿತ ಪಕ್ಷದ ಸದಸ್ಯರಿಗೆ ಸಂಖ್ಯಾಬಲ ಇಲ್ಲದ ಕಾರಣ ಅರ್ಧ ಗಂಟೆ ಸಭೆ ಮುಂದೂಡುವು ದಾಗಿ ಹೇಳಿ ಅಧ್ಯಕ್ಷರು ಹೊರಗೆ ಹೋಗಿ.ಮುಕ್ಕಾಲು ಗಂಟೆಯ ಅನಂತರ ಸಭೆಗೆ ಆಗ ಮಿಸಿದರು. ಅಂದಿನ ಸಭೆಯಲ್ಲಿ ಆದ ಚರ್ಚೆಗೂ ಅನುಮೋದನೆ ಮಾಡಿಕೊಂಡ ವಿಷಯಗಳಿಗೂ ಅಜಗಜಾಂತರ ವ್ಯತ್ಯಾಸಗಳು ಮಾಹಿತಿಯಿಂದ ಕಂಡುಬಂದಿವೆ. ಅಧ್ಯಕ್ಷರು ತಮಗೆ ಹಾಗೂ ಇತರ ಸದಸ್ಯರುಗಳಿಗೆ ಅನುಕೂಲವಾಗಲೆಂದು ಠರಾವುಗಳನ್ನು ಬರೆದುಕೊಂಡು ಸಭೆಯ ನಡಾ ವಳಿಗೆ ಧಕ್ಕೆ ತಂದಿದ್ದಾರೆ.
ಈ ಬಗ್ಗೆ ಮಾಹಿತಿ ಕ್ರೋಢೀಕರಿಸಿ ದಾಗ ವ್ಯತ್ಯಾಸಗಳು ಕಂಡು ಬಂದಿವೆ. ಅಧ್ಯಕ್ಷರು ತಪ್ಪು ಮಾಡಿದ್ದನ್ನು ಸಮರ್ಥನೆ ಮಾಡಲು ಹೋಗಿ ಮತ್ತೆ ತಪ್ಪುಗಳನ್ನು ಮಾಡಿದ್ದಾರೆ. ಅಧ್ಯಕ್ಷರಿಗೆ ಸಭೆಯ ಕುರಿತು ಮಾಹಿತಿ ಕೊರತೆ ಇರುವ ಕಾರಣ ಹೀಗಾಗಿದೆ. ನಗರಸಭೆಯ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿ ರವಾಗಿ ತರಾವು ಮಾಡಿಕೊಂಡಿದ್ದಾರೆಂದು ದಾಖಲೆ ಬಿಡುಗಡೆಗೊಳಿಸಿ ಪ್ರಕಾಶ ಬುರಡಿಕಟ್ಟಿ ಆಪಾದಿಸಿದ್ದಾರೆ.
ಸಭೆಯಲ್ಲಾದ ಘಟನೆಗಳ ಕುರಿತು ಮಾಹಿತಿ ಕಲೆಹಾಕಿದ್ದು, ವಿಡಿಯೋ ಸೇರಿದಂತೆ ಇತರ ವಿಷಯಗಳ ಕುರಿತು ಸಾಕ್ಷಿ ಕ್ರೋಢೀಕರಿಸಿ ಲಾಗಿದೆ. ಪೂರ್ಣಗೊಂಡ ಕಾಮಗಾರಿಗಳಿಗೆ ಮತ್ತೆ ಮಂಜೂರಾತಿ ನೀಡಿರುವ ಘಟನೆಗಳು
ಜರುಗಿವೆ. ಚುನಾವಣೆಯಲ್ಲಿ ಮಾಡಿದ ಖರ್ಚು ಗಳನ್ನು ಸರಿದೂಗಿಸಲು ಕೆಲ ಸದಸ್ಯರುಗಳ ಕುಮ್ಮಕ್ಕಿನಿಂದ ಇಂತಹ ಕಾನೂನುಬಾಹೀರ ಚಟುವಟಿಕೆಗಳನ್ನು ಆಡಳಿತ ಪಕ್ಷದವರು ಮಾಡುತ್ತಿದ್ದಾರೆಂದು ಪ್ರಕಾಶ್ ಗಂಭೀರವಾಗಿ ಆಪಾದನೆ ಮಾಡಿದರು.
ಈ ಎಲ್ಲ ವಿಷಯಗಳನ್ನು ಮುಂದಿ ಟ್ಟುಕೊಂಡು ಸಂಬಂಧಿಸಿದ ಅಧಿಕಾರಿ ಗಳ ವ ಗಮನಕ್ಕೆ ತರುವುದಾಗಿ ಹಾಗೂ ತಪ್ಪು ಮಾಡಿದ ಹಿ ಮತ್ತು ಕಾನೂನುಬಾಹೀರವಾಗಿ ಮಾಹಿತಿ ವಾ ನೀಡಿದ ಸದಸ್ಯರುಗಳ ಹಾಗೂ ಅಧಿಕಾರಿಗಳ ದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಈಕುರಿತು ನ್ಯಾಯಾ ಲಯದ ಮ ಮೊರೆ ಹೋಗುವುದಾಗಿ ಅವರು ಆಗ್ರಹಿಸಿದರು. ಕೈ ಇದಕ್ಕೂ ಮೊದಲೇ ಅಡಳಿತ ಪಕ್ಷದವರು ಭಯಗೊಂಡು ಬಿಜೆಪಿಯ || ಸದಸ್ಯರುಗಳ ರಾ ಮೇಲೆ ಕೆವಿಟ್ ಹಾಕಿದ್ದಾರೆಂದರು.ಈ ಪತ್ರಿಕಾ ಪಾ ಗೋಷ್ಠಿಯಲ್ಲಿ ಸದಸ್ಯರುಗಳಾದ ರೂಪಾ ಚಿನ್ನಿ ಕಟ್ಟಿ, ಪ್ರಭಾವತಿ ತಿಳವಳ್ಳಿ, ಪ್ರಕಾಶ್ ಪೂಜಾರ, ಹನುಮಂತಪ್ಪ ಹೆಚ್ಚೇರಿ, ಪಾಂಡುರಂಗ ಗಂಗಾವತಿ, ಸಿದ್ದಪ್ಪ ಭಾಗಲದ, ಕವಿತಾ ಹೆದ್ದೇರಿ, ರತ್ನವ್ವ ಪೂಜಾರ, ಮಂಜುಳಾ ಹತ್ತಿ, ಗಂಗಮ್ಮ