ಸೈಬರ್ ಅಪರಾಧ ಮುಕ್ತ, ಡ್ರಗ್ ಮುಕ್ತ : ಜಿಲ್ಲಾ ಎಸ್.ಪಿ. ಅಂಶುಕುಮಾರ

ಸೈಬರ್ ಅಪರಾಧ ಮುಕ್ತ, ಡ್ರಗ್ ಮುಕ್ತ : ಜಿಲ್ಲಾ ಎಸ್.ಪಿ. ಅಂಶುಕುಮಾರ

ವೀರಮಾರ್ಗ ನ್ಯೂಸ್ : ಹಾವೇರಿ : ಸೈಬರ್  ಅಪರಾಧ ಮುಕ್ತ ಹಾಗೂ ಡ್ರಗ್ ಮುಕ್ತ ಕರ್ನಾಟಕ ಮಾಡಲು  ಡ್ರಗ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕರ್ನಾಟಕ ರಾಜ್ಯ ಪೊಲೀಸ್ ಓಟ2025ರ ಅಂಗವಾಗಿ 10ಕೆ ಮತ್ತು 5ಕೆ ಮ್ಯಾರಾಥಾನ್ ಓಟ ಆಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ 10ಕೆ ಮತ್ತು 5ಕೆ ಮ್ಯಾರಾಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ವೈದ್ಯರು,  ಇಂಜನೀಯರಗಳು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿ ಸಾವಿರಕ್ಕೂ ಅಧಿಕ ಜನರು ಈ ಮ್ಯಾರಾಥಾನ್ ಓಟದಲ್ಲಿ ಭಾಗವಹಿಸಿದ್ದಾರೆ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ್ ಎಲ್,  ಡಿವೈಎಸ್‍ಪಿ ಪಾಟೀಲ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇತರರು ಭಾಗವಹಿಸಿದ್ದರು. 

ನಗರದ ಹೊಸಮನಿಸಿದ್ದಪ್ಪ ವೃತ್ತ, ಸಂಗೂರ ಕರಿಯಪ್ಪ ವೃತ್ತ, ರೈಲು ನಿಲ್ದಾಣ  ರಸ್ತೆ, ಡಾ.ಬಿ.ಆರ್.ಅಂಬೇಡ್ಕರ ವೃತ್ತ, ಸುಭಾಸ್ ವೃತ್ತ,  ಬಸವೇಶ್ವರ ವೃತ್ತ, ಜೆ.ಎಚ್.ಪಟೇಲ್ ವೃತ್ತ, ಹೊಸಮನಿ ಸಿದ್ದಪ್ಪ  ಜಿಲ್ಲಾ ಕ್ರೀಡಾಂಗಣ, ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಮೂಲಕ ಸಂಚರಿಸಿ ಪುನಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ  ಕಚೇರಿ ತಲುಪಿತು.

ಮ್ಯಾರಾಥಾನ್  ಓಟದಲ್ಲಿ ಭಾಗವಸಿದ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಸೇರಿದಂತೆ 50 ಜನರಿಗೆ ಪ್ರಶೆಸ್ತಿ ಪತ್ರ ಹಾಗೂ ಮೆಡಲ್ ಗಳನ್ನು ವಿತರಣೆ ಮಾಡಲಾಯಿತು, 450  ಜನರಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.

Leave a Reply

Your email address will not be published. Required fields are marked *