ಶಿಗ್ಗಾವಿ: ಅನುಮಾನಾಸ್ಪದ ರೀತಿಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಶವ ಪತ್ತೆ
ಶಿಗ್ಗಾವಿ : ಪಟ್ಟಣದ ಹೊರವಲಯದ ಪಿನಿಕ್ಸ ಶಾಲೆಯ ಹತ್ತಿರ ಸಿ.ಆರ್.ಪಿ.ಎಫ್ ಪೊಲೀಸ್ ಓರ್ವರ ಅನುಮಾನಾಸ್ಪದ ಶವ ಪತ್ತೆಯಾಗಿದೆ. ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿ ಎನ್.ಹೆಚ್ 48 ರಸ್ತೆಯ ಪಕ್ಕದಲ್ಲಿ ರೈತರೋರ್ವರು ಇಟ್ಟಿದ್ದ ಇಟ್ಟಂಗಿಗಳ ಹಿಂಭಾಗದಲ್ಲಿ ಶವ ಪತ್ತೆಯಾಗಿದೆ.
ಮೃತರನ್ನು ಹಾಸನ ಜಿಲ್ಲೆಯ ಅರಿಸಿಕೆರೆ ತಾಲ್ಲೂಕಿನ ತಾಳನಕೊಪ್ಪಲು ಗ್ರಾಮದ ಸಿ.ಆರ್.ಪಿ.ಎಫ್ ಪೊಲೀಸ್ ತಾರೇಶ ಎನ್.ಬಿ ತಂದೆ ಬಸವರಾಜು ಎಂದು ಸಿಕ್ಕಿರುವ ಐ.ಡಿ ಕಾರ್ಡ್‌ನಿಂದ ಗುರುತಿಸಲಾಗಿದೆ. ಎಫ್.ಎಸ್.ಎಲ್ ಅಧಿಕಾರಿಗಳು, ಶಿಗ್ಗಾವಿ ಠಾಣಾ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಪ್ರಾರಂಭಿಸದ್ದಾರೆ.
ಶಿಗ್ಗಾವಿಯಿಂದ ಹುಬ್ಬಳ್ಳಿ ಕಡೆ ಹೋಗುವ ಬಲ ಬದಿಯ ಪಿನಿಕ್ಸ ಶಾಲೆಯ ಹತ್ತಿರ ಶವ ಪತ್ತೆಯಾಗಿದೆ. ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾದೆ.