ವೀರಮಾರ್ಗ ನ್ಯೂಸ್ : ಬೆಳಗಾವಿ ಜಿಲ್ಲಾ : ಕಿತ್ತೂರು ನಗರದಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ವೆಸ್ಟಿಜ್ ಮಾರ್ಕೆಟಿಂಗ್ ಕಂಪನಿಯ ಪೂಜಾ ಸಮಾರಂಭದಲ್ಲಿ ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಭಾಗವಹಿಸುವಿಕೆ : ಇಂದು ಚನ್ನಮ್ಮನ ಕಿತ್ತೂರು ತಾಲೂಕಾ ಅಧ್ಯಕ್ಷರು ಹಾಗೂ ಉದಯವಾಣಿ ವರದಿಗಾರರಾದ ಬಸವರಾಜ ಚಿನಗುಡಿ ಅವರು ನೂತನವಾಗಿ ಆರಂಭಿಸಿರುವ ವೆಸ್ಟಿಜ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಫ್ರಾಂಚೈಸಿಯ ಪೂಜಾ ಸಮಾರಂಭದಲ್ಲಿ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಭಾಗವಹಿಸಲಾಯಿತು.
ವೆಸ್ಟಿಜ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಇದು ಡೈರೆಕ್ಟ್ ಸೆಲ್ಲಿಂಗ್ ಕ್ಷೇತ್ರದಲ್ಲಿನ ಪ್ರಮುಖ ಕಂಪನಿಯಾಗಿದ್ದು, ಭಾರತದಲ್ಲಷ್ಟೇ ಅಲ್ಲದೆ ಸೌದಿ ಅರೇಬಿಯಾ, ಥೈಲ್ಯಾಂಡ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ಫಿಲಿಪೈನ್ಸ್ ಸೇರಿದಂತೆ ಸುಮಾರು 10 ದೇಶಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
ವೆಸ್ಟಿಜ್ ಭಾರತದಲ್ಲಿನ ನಂಬರ ಒನ್ ಡೈರೆಕ್ಟ್ ಸೆಲ್ಲಿಂಗ್ ಕಂಪನಿಯಾಗಿದ್ದು, ಜಾಗತಿಕ ಮಟ್ಟದಲ್ಲಿ 38ನೇ ಸ್ಥಾನದಲ್ಲಿರುವ ಏಕೈಕ ಡೈರೆಕ್ಟ್ ಸೆಲ್ಲಿಂಗ್ ಮಾರ್ಕೆಟಿಂಗ್ ಕಂಪನಿಯೆಂದು ಹೇಳಬಹುದು.