ಮಾ.22, 23ಕ್ಕೆ ಕರ್ನಾಟಕ ಲೇಖಕಿಯರ 8ನೇ ಸಮ್ಮೇಳನ;ಡಾ.ಎಚ್.ಎಸ್.ಶ್ರೀಮತಿ ಸಮ್ಮೇಳನಾಧ್ಯಕ್ಷೆ
ವೀರಮಾರ್ಗ ನ್ಯೂಸ್ : ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ 8ನೇ ಅಖಿಲ ಕರ್ನಾಟಕ ಸಮ್ಮೇಳನವನ್ನು ಮಾ.22, 23ಕ್ಕೆ ಹಮ್ಮಿಕೊಳ್ಳಲಾಗಿದೆ. 12 ವರ್ಷಗಳ ನಂತರ ಹಮ್ಮಿಕೊಳ್ಳಲಾಗಿರುವ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಡಾ.ಎಚ್.ಎಸ್. ಶ್ರೀಮತಿಯವರು ಆಯ್ಕೆಯಾಗಿದ್ದಾರೆ.ಅರಮನೆ ರಸ್ತೆಯಲ್ಲಿರುವ ಭಾರತ್ ಸೈಟ್ಸ್ ಆ್ಯಂಡ್ ಗೈಡ್‌ನ ಕೊಂಡಜ್ಜಿ ಬಸಪ್ಪ ಸಭಾಂಗಣದ ಡಾ.ಕಮಲಾ ಹಂಪನಾ ವೇದಿಕೆಯಲ್ಲಿ ನಡೆಯಲಿರುವ ಸಮ್ಮೇಳನವನ್ನು ಮಾ.22ರಂದು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಡಾ. ಎಚ್.ಎಲ್.ಪುಷ್ಪ ಪ್ರಸ್ತಾವನ ಮಂಡಿಸಲಿದ್ದು, ಹಿರಿಯ ಚಿಂತನ ರಾಜೇಂದ್ರ…